For Quick Alerts
  ALLOW NOTIFICATIONS  
  For Daily Alerts

  Sathya Serial: ಮೌನ ಮುರಿದ ರಾಯರು ಕಾರ್ತಿಕ್‌ಗೆ ಹೇಳಿದ್ದೇನು..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಗಿರಿಜಮ್ಮ ಊರಿಗೆ ಬಂದಿರುವ ವಿಚಾರ ದಿವ್ಯಾಗೂ ಗೊತ್ತಾಗಿದೆ. ಅವಳು ಎಲ್ಲವನ್ನೂ ಹೇಳಿಕೊಂಡಿದ್ದು ಅಜ್ಜಿಯೂ ಕೂಡ ಮೊಮ್ಮಗಳಿಗೆ ಸಹಾಯ ಮಾಡುವುದಾಗಿ ಹೇಳಿದ್ದಾಳೆ.

  ಸತ್ಯ, ಕಾರ್ತಿಕ್ ಮತ್ತು ರಾಯರು ಮಾತನಾಡಲಿ ಎಂದು ಪ್ಲ್ಯಾನ್ ಮಾಡಿದ್ದಾಳೆ. ಇದಕ್ಕಾಗಿ ಊರ್ಮಿಳಾಗೆ ಹೇಳಿ ಬಜ್ಜಿಯನ್ನು ಮಾಡಿಸಿದ್ದಾಳೆ. ಇದನ್ನು ನೋಡಿದ ಸೀತಾ ಕೆಂಡಾಮಂಡಲವಾಗಿದ್ದಾಳೆ.

  ಅರಸನ ಕೋಟೆಯಲ್ಲಿ ಹೊಸ ವರುಷದ ಸಂಭ್ರಮ, ಅಖಿಲಾ ಮುಂದೆ ಸಿಕ್ಕಿ ಹಾಕಿಕೊಂಡಳಾ ಮೋನಿಕಾ?ಅರಸನ ಕೋಟೆಯಲ್ಲಿ ಹೊಸ ವರುಷದ ಸಂಭ್ರಮ, ಅಖಿಲಾ ಮುಂದೆ ಸಿಕ್ಕಿ ಹಾಕಿಕೊಂಡಳಾ ಮೋನಿಕಾ?

  ಸತ್ಯಗೆ ಬೈಯಲು ಶುರು ಮಾಡಿದ್ದಾಳೆ. ನಿನ್ನಿಂದಾಗಿ ಮನೆಯಲ್ಲಿ ಎಲ್ಲರೂ ದಾರಿ ತಪ್ಪುತ್ತಿದ್ದಾರೆ. ನಿನ್ನ ಬುದ್ಧಿಯನ್ನೇ ಎಲ್ಲರಿಗೂ ಕಲಿಸುತ್ತಿದ್ದೀಯಾ ಎಂದು ಬೈಯುತ್ತಾಳೆ. ಆದರೆ, ಸತ್ಯ ಇದ್ಯಾವುದಕ್ಕೂ ಏನೂ ಮಾತನಾಡುವುದಿಲ್ಲ.

  ಮಗನನ್ನು ಅಪ್ಪಿಕೊಂಡು ಕಣ್ಣಿರಿಟ್ಟ ರಾಯರು

  ಮಗನನ್ನು ಅಪ್ಪಿಕೊಂಡು ಕಣ್ಣಿರಿಟ್ಟ ರಾಯರು

  ಕಾರ್ತಿಕ್, ಸತ್ಯ ಬಜ್ಜಿಯನ್ನು ತಂದು ಕೊಡುತ್ತಿದ್ದಂತೆ ಅವರ ತಂದೆ ರಾಮಚಂದ್ರ ರಾಯರ ಬಳಿ ಹೋಗುತ್ತಾನೆ. ರಾಯರು ಒಬ್ಬರೂ ಯೋಚನೆ ಮಾಡುತ್ತಾ ಕುಳಿತಿರುತ್ತಾರೆ. ಬಜ್ಜಿಯನ್ನು ಕಾರ್ತಿಕ್ ಕೊಟ್ಟಾಗ ರಾಯರು ಏನನ್ನೂ ಮಾತನಾಡುವುದಿಲ್ಲ. ಕಾರ್ತಿಕ್ ಮಾತನ್ನು ಆರಂಭಿಸುತ್ತಾನೆ. ನಾನು ಮಾಡಿದ್ದರಲ್ಲಿ ತಪ್ಪಿದ್ದರೆ ಬೈದು ಬಿಡಿ. ಹೀಗೆ ಮೌನವಾಗಿರಬೇಡಿ. ನನಗೆ ಕಷ್ಟವಾಗುತ್ತದೆ ಎಂದು ಅವರ ತಂದೆಯ ಎದುರು ಕಾರ್ತಿಕ್ ಗೋಳಾಡುತ್ತಾನೆ. ಅಷ್ಟೇ ಅಲ್ಲದೇ, ತನ್ನದೇನು ತಪ್ಪಿಲ್ಲ. ನನ್ನನ್ನು ನಂಬಿ ಎನ್ನುತ್ತಾನೆ. ರಾಯರು ಮಗನನ್ನು ತಬ್ಬಿಕೊಂಡು ಅಳಲು ಶುರು ಮಾಡುತ್ತಾರೆ. ತಪ್ಪು ನಿನ್ನದಲ್ಲ, ನನ್ನದು. ನೀನು ಅಷ್ಟು ಹೇಳಿದರೂ ನಿನ್ನ ಮಾತನ್ನು ನಾವ್ಯಾರೂ ನಂಬಲಿಲ್ಲ. ನಿನಗೆ ಮುಖ ತೋರಿಸಲು ಹೇಗೆ ಸಾಧ್ಯ ಎಂದು ಕಣ್ಣೀರು ಹಾಕುತ್ತಾರೆ.

  ಪೇಚಿಗೆ ಸಿಲುಕಿದ ಗಿರಿಜಮ್ಮ

  ಪೇಚಿಗೆ ಸಿಲುಕಿದ ಗಿರಿಜಮ್ಮ

  ಗಿರಿಜಮ್ಮ, ದಿವ್ಯಾ ಮನೆಗೆ ಬಂದಿರುತ್ತಾಳೆ. ದಿವ್ಯಾ ಅಜ್ಜಿ ನನಗೆ ಕೆಲಸ ಮಾಡಿ ಸಾಕಾಗಿದೆ, ಆ ತಾತನಿಗೆ ಹೇಳಬಾರದ ಎಂದು ಕೇಳುತ್ತಿರುತ್ತಾಳೆ. ಈ ವೇಳೆಗೆ ಬಾಲ ಬಂದು ಅಜ್ಜಿಯನ್ನು ಮಾತನಾಡಿಸುತ್ತಾನೆ. ಜೊತೆಗೆ ಕಾಕ್ರೋಜ್‌ನನ್ನು ಕೂಡ ಕರೆದುಕೊಂಡು ಬಂದಿರುತ್ತಾನೆ. ಅಜ್ಜಿ ಬಾಲನನ್ನು ನೋಡಿ ಮುಖ ತೋರಿಸುವುದು ಹೇಗೋ ಎಂದು ಸುಮ್ಮನಾಗುತ್ತಾರೆ. ಅಜ್ಜಿಗೆ ಮುಜುಗರವಾಗುತ್ತದೆ. ಅಜ್ಜಿ ಪೇಚಿಗೆ ಸಿಲುಕಿದ್ದನ್ನು ನೋಡಿ, ಬಾಲ ನಗು ನಗುತ್ತಲೇ ಮಾತನಾಡಿಸುತ್ತಾನೆ. ಅಜ್ಜಿ ವಿಧಿ ಇಲ್ಲದೇ ಬಾಲನ ಜೊತೆಗೆ ಮಾತು ಶುರು ಮಾಡುತ್ತಾರೆ.

  ದಿವ್ಯಾಗೆ ಸಂಕಷ್ಟ ಎದುರಾಯ್ತಾ?

  ದಿವ್ಯಾಗೆ ಸಂಕಷ್ಟ ಎದುರಾಯ್ತಾ?

  ಆಗ ಬಾಲ ನೀವು ಇಲ್ಲೇ ಉಳಿದುಕೊಳ್ಳಬೇಕು. ನಮ್ಮ ಮನೆಯ ಆತಿಥ್ಯವನ್ನು ಸ್ವೀಕರಿಸಬೇಕು ಎನ್ನುತ್ತಾನೆ. ಗಿರಿಜಮ್ಮ ಇಲ್ಲ ನಾವು ಬೆಳಗ್ಗೆ ಊರಿಗೆ ಹೋಗುತ್ತೀವಿ ಎಂದರೂ ಬಾಲ ಬಿಡುವುದಿಲ್ಲ. ದಿವ್ಯಾ ಹಬ್ಬದ ಅಡುಗೆಯನ್ನು ಮಾಡುತ್ತಾಳೆ. ಮೊಮ್ಮೊಗಳ ಕೈ ರುಚಿಯನ್ನು ನೋಡಬೇಕು ನೀವು. ನಮ್ಮ ಮನೆಯಲ್ಲೇ ಮಲಗಬೇಕು ಎಂದು ಬಲವಂತ ಮಾಡುತ್ತಾನೆ. ಬಾಲನ ಮಾತಿನಿಂದ ದಿವ್ಯಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಕೊಟ್ಟಿಗೆಯಲ್ಲಿ ಮಲಗಬೇಕಲ್ಲ ಎಂದು ದಿವ್ಯಾ ಯೋಚಿಸುತ್ತಿರುತ್ತಾಳೆ.

  ಅಪ್ಪ-ಮಗನನ್ನು ನೋಡಿ ಖುಷಿ ಪಟ್ಟ ಸೀತಾ

  ಅಪ್ಪ-ಮಗನನ್ನು ನೋಡಿ ಖುಷಿ ಪಟ್ಟ ಸೀತಾ

  ರಾಯರು ಮಗನನ್ನು ಕ್ಷಮೆ ಕೇಳುತ್ತಾರೆ. ಇಬ್ಬರು ಮನದ ಮಾತುಗಳನ್ನು ಆಡುತ್ತಾರೆ. ಅಲ್ಲದೇ, ರಾಯರು ಕಾರ್ತಿಕ್ ಗೆ ನಾಳೆಯಿಂದ ಆಫೀಸಿನ ಸಂಪೂರ್ಣ ಜವಾಬ್ದಾರಿಯನ್ನು ನೀನೇ ಹೊತ್ತುಕೊಳ್ಳಬೇಕು ಎಂದು ಹೇಳುತ್ತಾರೆ. ಕಾರ್ತಿಕ್ ನೀವು ಹೇಳಿದಂತೆ ಎಂದು ಒಪ್ಪಿಕೊಳ್ಳುತ್ತಾನೆ. ಇದನ್ನೆಲ್ಲಾ ಬಾಗಿಲಲ್ಲಿ ನಿಂತು ಸತ್ಯ ಮತ್ತು ಸೀತಾ ಇಬ್ಬರೂ ನೋಡುತ್ತಿರುತ್ತಾರೆ. ಸೀತಾಗೆ ಮಗ ಮತ್ತು ಪತಿಯನ್ನು ನೋಡಿ ಖುಷಿಯಾಗುತ್ತದೆ. ಆದರೆ ಸೀತಾಗೆ ಸತ್ಯ ಮೇಲೆ ನಂಬಿಕೆ ಬರುತ್ತದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ.

  English summary
  Sathya serial 30th December Episode Written Update. karthik and rayaru talks together and feels bad for the situation.
  Saturday, December 31, 2022, 17:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X