For Quick Alerts
  ALLOW NOTIFICATIONS  
  For Daily Alerts

  ದಿವ್ಯಾ ಹೇಳಿದ ಸುಳ್ಳಿನಿಂದ ಸತ್ಯ ಬಾಳಲ್ಲಿ ಬಿರುಗಾಳಿ ಏಳುತ್ತಾ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ರಿತು ಗ್ಯಾರೇಜ್ ಗೆ ಬಂದಿದ್ದಾಳೆ. ರಾಕಿಯನ್ನು ಪ್ರೀತಿಸುತ್ತಿರುವ ರಿತು ಸತ್ಯ ಕರೆದಿದ್ದಕ್ಕೆ ಬಂದೆ ಎಂದು ಸುಳ್ಳು ಹೇಳುತ್ತಾಳೆ. ಈ ಬಗ್ಗೆ ಕೊಂಚ ಹೊತ್ತು ಗೊಂದಲವಾಗುತ್ತದೆ. ಬಳಿಕ ರಿತು ತಾನು ಹೇಳಿದ್ದು ಸುಳ್ಳು ಎನ್ನುತ್ತಾಳೆ.

  ಇನ್ನು ರಿತು ರಾಕಿಗೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡುತ್ತಾಳೆ. ನಾನು ಹಣ, ಆಸ್ತಿ, ಅಂತಸ್ತನ್ನು ನೋಡಿ ಬಂದಿಲ್ಲ. ನಿನ್ನ ಗುಣವನ್ನು ಇಷ್ಟಪಟ್ಟಿದ್ದೇನೆ. ನಿನ್ನ ದಾರಿಗೆ ಕೊಂಚವೂ ಅಡ್ಡ ಬರಲ್ಲ. ನನ್ನ ಒಪ್ಪಿಕೋ ಎಂದು ಹೇಳುತ್ತಾಳೆ.

  ಆದರೆ ರಾಕಿ ಇಲ್ಲ ನನಗೆ ನನ್ನ ಗುರಿಯೇ ಮುಖ್ಯ. ಇದೆಲ್ಲಾ ಬಿಟ್ಟು ಬಿಡು. ನೀನೇ ಬೇರೆ, ನಾನೇ ಬೇರೆ, ನಿನ್ನ ಸ್ಟೇಟಸ್ ಬಗ್ಗೆ ಯೋಚಿಸು ಎಂದೆಲ್ಲಾ ಹೇಳುತ್ತಾನೆ. ಕೊನೆಗೆ ಅಳುತ್ತಾ ರಿತು ಅಲ್ಲಿಂದ ಹೊರಟು ಹೋಗುತ್ತಾಳೆ.

  ಮನದಲ್ಲಿ ಪ್ರೀತಿ ಇದ್ದರೂ ಮುಚ್ಚಿಟ್ಟ ರಾಕಿ

  ಮನದಲ್ಲಿ ಪ್ರೀತಿ ಇದ್ದರೂ ಮುಚ್ಚಿಟ್ಟ ರಾಕಿ

  ಹುಡುಗರು ಬಂದು ರಾಕಿಗೆ ಬುದ್ದಿವಾದ ಹೇಳುತ್ತಾರೆ. ಯಾವ ಹುಡುಗಿಯೂ ಹೀಗೆ ಹೇಳೋದಿಲ್ಲ. ಅವಳನ್ನು ಒಪ್ಪಿಕೊ. ಯಾಕೆ ರಾಕಿ ಆ ಹುಡುಗಿಯನ್ನ ಗೋಳಾಡಿಸುತ್ತಿದ್ದೀಯಾ ಎಂದು ಕೇಳುತ್ತಾರೆ. ಆದರೆ ರಾಕಿ ಮಾತ್ರ ತನ್ನ ನಿಲುವನ್ನು ಬದಲಾಯಿಸೊಲ್ಲ. ಮನದಲ್ಲಿ ಪ್ರೀತಿ ಇದ್ದರೂ ಯಾಕೆ ಹೇಳುತ್ತಿಲ್ಲ ಎಂದು ಕೇಳುತ್ತಾರೆ. ಆಗ ರಾಕಿ ಸತ್ಯ ಆಸೆಯನ್ನ ಪೂರೈಸಬೇಕು. ನಾನು ಡಿಸಿ ಆಗಬೇಕು. ಅಲ್ಲಿಯವರೆಗೂ ನನ್ನ ದಾರಿಗೆ ಯಾರೇ ಅಡ್ಡ ಬಂದರೂ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಹೋಗುತ್ತಾನೆ.

  ದಿವ್ಯಾ ಹೊಟ್ಟೆ ಉರಿಸುತ್ತಿರುವ ಕಾರ್ತಿಕ್-ಸತ್ಯ

  ದಿವ್ಯಾ ಹೊಟ್ಟೆ ಉರಿಸುತ್ತಿರುವ ಕಾರ್ತಿಕ್-ಸತ್ಯ

  ಇತ್ತ ಸತ್ಯ ಮತ್ತು ದಿವ್ಯಾ ಇಬ್ಬರೂ ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬರುವ ಕಾರ್ತಿಕ್ ಬೇಕಂತಲೇ ಸತ್ಯ ಜೊತೆಗೆ ರೊಮ್ಯಾನ್ಸ್ ಮಾಡಲು ಮುಂದಾಗುತ್ತಾನೆ. ದಿವ್ಯಾ ಹೊಟ್ಟೆ ಉರಿದುಕೊಂಡು ಆಗಾಗ ಟಾಂಟ್ ಕೊಡುತ್ತಿರುತ್ತಾಳೆ. ಆದರೂ ಕೇರ್ ಮಾಡದ ಕಾರ್ತಿಕ್ ಸತ್ಯಳಿಗೆ ಬೇಕಂತ ತಬ್ಬಿಕೊಳ್ಳುವುದು, ರೊಮ್ಯಾಂಟಿಕ್ ಡೈಲಾಗ್ ಹೇಳುವುದನ್ನು ಮಾಡುತ್ತಿರುತ್ತಾನೆ. ಇದರಿಂದ ದಿವ್ಯಾ ತೀರಾ ಹೊಟ್ಟೆ ಉರಿದುಕೊಂಡು, ನಾವೆಲ್ಲಾ ಇದೀವಿ, ನಮ್ಮ ಕಣ್ಣಲ್ಲಿ ಇನ್ನು ಏನೇನು ನೋಡಬೇಕೋ ಎಂದೆಲ್ಲಾ ಹೇಳುತ್ತಿರುತ್ತಾಳೆ.

  ಅತ್ತೆ-ಸೊಸೆಗೆ ಮಜವೋ ಮಜಾ

  ಅತ್ತೆ-ಸೊಸೆಗೆ ಮಜವೋ ಮಜಾ

  ಇನ್ನು ದಿವ್ಯಾ ಮತ್ತು ಸತ್ಯ ಅಡುಗೆ ಮಾಡುತ್ತಿರುವುದನ್ನು ನೋಡಿ ಜಾನಕಿ ಖುಷಿ ಪಡುತ್ತಾಳೆ. ಅದನ್ನು ಗಿರಿಜಮ್ಮನಿಗೂ ತೋರಿಸುತ್ತಾಳೆ. ಇಬ್ಬರೂ ನೋಡಿ ನಾವ್ಯಾವತ್ತೂ ಇವರಿಬ್ಬರು ಹೀಗೆ ಅಡುಗೆ ಮಾಡುತ್ತಾರೆ, ಅದರಲ್ಲೂ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಸತ್ಯ ಹಾಗೂ ಕಾರ್ತಿಕ್ ರೊಮ್ಯಾನ್ಸ್ ಮಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳುತ್ತಾರೆ. ಸತ್ಯ ಬದುಕು ಚೆನ್ನಾಗಿ ಆಗುತ್ತಿದೆ ಎಂದು ಇಬ್ಬರೂ ಖುಷಿಪಡುತ್ತಾರೆ.

  ಕಾರ್ತಿಕ್ ದಿವ್ಯಾ ಮಾತನಾಡಿದ್ದೇನು..?

  ಕಾರ್ತಿಕ್ ದಿವ್ಯಾ ಮಾತನಾಡಿದ್ದೇನು..?

  ಇನ್ನು ಊಟ ಮಾಡುವಾಗಲೂ ದಿವ್ಯಾ ಬಾಲ ನಡೆದುಕೊಳ್ಳುವಂತೆಯೇ ಕಾರ್ತಿಕ್ ಮತ್ತು ಸತ್ಯ ನಡೆದುಕೊಳ್ಳುತ್ತಾರೆ. ಕಾರ್ತಿಕ್ ಸತ್ಯಾಳನ್ನು ನೋಡಿ ಗಿರಿಜಮ್ಮ ಹಾಗೂ ಜಾನಕಿ ಖುಷಿಯಾಗುತ್ತಾರೆ. ಇನ್ನು ಯಾರೂ ಇಲ್ಲದಾಗ ದಿವ್ಯಾ ಕಾರ್ತಿಕ್ ನನ್ನು ಕೈ ಹಿಡಿದು ಎಳೆದುಕೊಂಡು ಹೋಗುತ್ತಾಳೆ. ಕಾರ್ತಿಕ್ ದಿವ್ಯಾಳೀಗೆ ಬೈಯುತ್ತಾನೆ. ನೀನು ಹೀಗೆ ಮಾಡುವುದೆಲ್ಲಾ ಸರಿಯಲ್ಲ ಎಂದು ಹೇಳುತ್ತಾನೆ. ದಿವ್ಯಾ ನಾನು ಮದುವೆ ಮನೆಯಿಂದ ಓಡಿ ಹೋಗುವುದಕ್ಕೆ ಸತ್ಯಾನೇ ಕಾರಣ ಎಂದು ಸುಳ್ಳು ಹೇಳುತ್ತಾಳೆ. ಈ ಸುಳ್ಳಿನಿಂದ ಸತ್ಯ ಬಾಳಲ್ಲಿ ಮತ್ತೆ ಬಿರುಗಾಳಿ ಏಳುತ್ತಾ..?

  English summary
  rithu proposes rakhi again and again But still rakhi never agrees to rithu. Divya lies to karthik. Read on
  Monday, October 31, 2022, 19:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X