For Quick Alerts
  ALLOW NOTIFICATIONS  
  For Daily Alerts

  ಎರಡನೇ ದಿನವೇ ಸ್ಪರ್ಧಿಗಳಿಗೆ ಮೂರು ಟ್ವಿಸ್ಟ್ ಕೊಟ್ಟ ಬಿಗ್‌ಬಾಸ್

  |

  ಬಿಗ್‌ಬಾಸ್ ಆರಂಭವಾಗಿ ಎರಡನೇ ದಿನವೇ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮೂರು ಟ್ವಿಸ್ಟ್ ನೀಡುವ ಮೂಲಕ ಬಿಗ್‌ಬಾಸ್ ಸ್ಪರ್ಧಿಗಳು ಕ್ರಿಯಾಶೀಲರಾಗಿರುವಂತೆ ಮಾಡಿದರು.

  ನಿನ್ನೆ ಬಿಗ್‌ಬಾಸ್ ಆರಂಭಕ್ಕೂ ಮುನ್ನಾ ಸುದೀಪ್ ಅವರು ಹದಿನೇಳು ಚೆಂಡುಗಳನ್ನು ಬಿಗ್‌ಬಾಸ್ ಮನೆಯಲ್ಲಿ ಬಚ್ಚಿಟ್ಟದ್ದರು. ಅದನ್ನು ನಿನ್ನೆಯೇ ಟಿಕ್‌ಟಾಕ್ ಸ್ಟಾರ್ ಧನುಶ್ರಿ ಹುಡುಕಿಟ್ಟಿದ್ದರು. ಚೆಂಡನ್ನೇ ಮೊದಲ ಟ್ವಿಸ್ಟ್ ಆಗಿ ಕೊಟ್ಟರು ಬಿಗ್‌ಬಾಸ್.

  ಧನುಶ್ರಿ ಅವರು ಎಲ್ಲ ಹದಿನೇಳು ಚೆಂಡುಗಳನ್ನು ಎಲ್ಲ ಸ್ಪರ್ಧಿಗಳಿಗೆ ಹಂಚುವಂತೆ ಬಿಗ್‌ಬಾಸ್ ಆದೇಶಿಸಿದರು. ಆದರೆ ಅದಕ್ಕೂ ಮುನ್ನವೇ ಯೂಟ್ಯೂಬರ್ ರಘು ಹಾಗೂ ದಿವ್ಯಾ ಅವರು ಒಂದು ಚೆಂಡನ್ನು ಬಚ್ಚಿಟ್ಟಿದ್ದರು. ಆದರೆ ದಿವ್ಯಾ ಅವರು ಚೆಂಡನ್ನು ಧನುಶ್ರಿಗೆ ಕೊಟ್ಟುಬಿಟ್ಟಿದ್ದರು.

  ಆ ಚೆಂಡುಗಳಲ್ಲಿ ಕೆಂಪು, ನೀಲಿ, ಹಳದಿ, ಹಸಿರು ಬಣ್ಣದ ಬೀಗವನ್ನು ಬಚ್ಚಿಟ್ಟಿದ್ದರು ಬಿಗ್‌ಬಾಸ್. ಕೆಂಪು ಬಣ್ಣದ ಬೀಗಗಳನ್ನು ಪಡೆದ ಶುಭಾ ಪುಂಜಾ, ನಿಧಿ ಸುಬ್ಬಯ್ಯ, ಬ್ರೋ ಗೌಡ, ನಿರ್ಮಲಾ, ಧನುಶ್ರಿ ಅವರುಗಳು ಒಂದು ತಂಡವಾಗಿ ಒಬ್ಬರ ಮೇಲೊಬ್ಬರು ಸ್ಪರ್ಧೆಗೆ ಇಳಿದರು. ಸ್ಪರ್ಧೆಯಲ್ಲಿ ಗೆದ್ದವರು ತಂಡದ ಮೊದಲ ನಾಯಕನಾಗಿ ಹೊರಹೊಮ್ಮುತ್ತಾರೆ ಎಂದಿದ್ದರು ಬಿಗ್‌ಬಾಸ್.

  ಅದರಂತೆ ನಡೆದ ಬಾಕ್ಸಿಂಗ್ ಮಾದರಿಯ ಸ್ಪರ್ಧೆಯಲ್ಲಿ ಬ್ರೋ ಗೌಡ ವಿಜೇತರಾದರು. ನಿಧಿ ಸುಬ್ಬಯ್ಯ ಸಹ ಒಳ್ಳೆಯ ಸ್ಪರ್ಧೆ ಒಡ್ಡಿದ್ದರು. ಆದರೆ ಅಂತಿಮವಾಗಿ ಬ್ರೋ ಗೌಡ, ಮನೆಯ ಮೊದಲ ನಾಯಕನಾಗಿ ಆಯ್ಕೆ ಆದರು. ರಾಜೀವ್ ಹಾಗೂ ಮಂಜು ನೀಡಿದ ಕಮೆಂಟ್ರಿ ಮಾಡಿ ಆಟಕ್ಕೆ ಉತ್ಸಾಹ ತುಂಬಿದರು.

  ಆ ನಂತರ ಹಳದಿ ಹಾಗೂ ನೀಲಿ ಬೀಗಗಳನ್ನು ಪಡೆದ ತಂಡಗಳ ನಡುವೆ ಬ್ಯಾಲೆನ್ಸ್‌ ಮಾಡುವ 'ಸೋಲುಂಡ ಟವರು' ಆಟ ನಡೆದು ಮೊದಲ ರೌಂಡ್‌ನಲ್ಲಿ ಹಳದಿ ತಂದ ಗೆದ್ದಿತು. ಆ ನಂತರ ನೀಲಿ ಹಾಗೂ ಕೆಂಪು ತಂಡದ ನಡುವೆ ಆಟ ನಡೆಯಿತು. ಆ ಆಟದಲ್ಲಿ ಮತ್ತೆ ನೀಲಿ ತಂಡ ವಿಜೇತವಾಯಿತು. ಆ ನಂತರ ಮತ್ತೆ ಕೆಂಪು ಮತ್ತು ಹಸಿರು ತಂಡದ ನಡುವೆ ಆಟ ನಡೆಯಿತು. ಆ ಆಟದಲ್ಲಿ ಹಸಿರು ತಂಡ ವಿಜೇತವಾಯಿತು.

  ಅಂತಿಮವಾಗಿ ಬಿಗ್‌ಬಾಸ್ ಮನೆಯ ಮೊದಲ 'ಲೂಸರ್' ಆಗಿ ಒಬ್ಬನ್ನು ಆಯ್ಕೆ ಮಾಡಲು ಹೇಳಿದರು. ನಿರ್ಮಲಾ ಅವರು ತಮ್ಮನ್ನು ಲೂಸರ್ ಎಂದು ಒಪ್ಪಿಕೊಂಡರು. ಅವರನ್ನು ಮನೆಯಿಂದ ಹೊರಗೆ ಹೋಗಲು ನೇರವಾಗಿ ನಾಮಿನೇಟ್ ಮಾಡಲಾಯಿತು.

  English summary
  Second day Bigg Boss gave three twist to contestants and choose winner and looser of the bigg boss house.
  Tuesday, March 2, 2021, 8:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X