For Quick Alerts
  ALLOW NOTIFICATIONS  
  For Daily Alerts

  'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಪ್ರಸಾರಕ್ಕೆ ಮುಹೂರ್ತ ಫಿಕ್ಸ್..

  By ಪ್ರಿಯಾ ದೊರೆ
  |

  ಬೇರೆ ವಾಹಿನಿಗಳ ಧಾರಾವಾಹಿಗೂ ಜೀ ಕನ್ನಡದಲ್ಲಿ ಮೂಡಿ ಬರುವ ಧಾರಾವಾಹಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಇನ್ನು ಇದರಲ್ಲಿ ಹೊಸ ಧಾರಾವಾಹಿಗಳ ಶೂಟಿಂಗ್ ಅದಾಗಲೇ ಆರಂಭವಾಗಿದ್ದು ಪ್ರಸಾರವಾಗುವುದಷ್ಟೇ ಬಾಕಿ ಇದೆ. ಆದರೆ ಸ್ಲಾಟ್‌ಗಾಗಿ ಕಾಯುತ್ತಿದ್ದಾರೆ.

  ಈಗಾಗಲೇ 'ನಾಗಿಣಿ- 2' ಧಾರಾವಾಹಿ ಅಂತ್ಯವಾಗುತ್ತಿದೆ. ಅಲ್ಲದೇ, 'ಕಮಲಿ' ಧಾರಾವಾಹಿಯೂ ಮುಗಿಯುವ ಹಂತ ತಲುಪಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ಲಾಟ್‌ಗಾಗಿ ಕಾಯುತ್ತಿದ್ದ ಹೊಸ ಧಾರಾವಾಹಿಯೊಂದು ಇನ್ನೊಂದು ವಾರದಲ್ಲಿ ಪ್ರಸಾರ ಕಾಣಲಿದೆ.

  ತೆರೆಮೇಲೆ ಬಜಾರಿ, ಅದೇ ಜೀವನದಲ್ಲಿ ಕಷ್ಟ ಜೀವಿ ನನ್ನ ತಾಯಿ ಎಂದ ನಟಿ ಅಪೂರ್ವಶ್ರೀ ಮಗಳುತೆರೆಮೇಲೆ ಬಜಾರಿ, ಅದೇ ಜೀವನದಲ್ಲಿ ಕಷ್ಟ ಜೀವಿ ನನ್ನ ತಾಯಿ ಎಂದ ನಟಿ ಅಪೂರ್ವಶ್ರೀ ಮಗಳು

  ಜೀ ಕುಟುಂಬಕ್ಕೆ ಸೇರ್ಪಡೆಯಾಗಿರುವ ಆ ಧಾರಾವಾಹಿಯ ಪ್ರೋಮೋ ನೋಡಿಯೇ ಪ್ರೇಕ್ಷಕರು ಸೀರಿಯಲ್ ಅನ್ನು ನೋಡಲು ಕಾಯುತ್ತಿದ್ದಾರೆ. ಯಾವುದು ಆ ಧಾರಾವಾಹಿ..? ಅದರಲ್ಲಿನ ನಾಯಕ-ನಾಯಕಿ ಯಾರು ಎಂದು ನೋಡೋಣ ಬನ್ನಿ.

  ಹಳೆ ಟೈಟಲ್ ಹೊಸ ಕಥೆ

  ಹಳೆ ಟೈಟಲ್ ಹೊಸ ಕಥೆ

  ಜೀ ಕನ್ನಡ ವಾಹಿನಿಯಲ್ಲಿ ಈ ಹಿಂದೆಯೇ 'ಶ್ರೀರಸ್ತು ಶುಭಮಸ್ತು' ಎಂಬ ಧಾರಾವಾಹಿ ಮೂಡಿ ಬಂದಿತ್ತು. ಇದರಲ್ಲಿಯೂ ಆರು ಅತ್ತೆಯಂದಿರ ಮುದ್ದಿನ ಸೊಸೆಯ ಕಥೆಯನ್ನು ಪ್ರಸಾರ ಮಾಡಲಾಗಿತ್ತು. ಇದೀಗ ಅದೇ ಟೈಟಲ್ ನಲ್ಲಿ ಮತ್ತೊಂದು ಧಾರಾವಾಹಿ ಶುರುವಾಗುತ್ತಿದೆ. ಇದರಲ್ಲೂ ಅತ್ತೆ-ಸೊಸೆಯ ಕಥೆಯೇ ಇದ್ದು, ವಿಭಿನ್ನವಾಗಿದೆ. ಗೃಹಿಣಿಯಾಗಿ ಮಹಿಳೆಯ ಮನಸ್ಥಿತಿ, ಆಕೆಯನ್ನು ಮನೆಯ ಇತರೆ ಸದಸ್ಯರು ನಡೆಸಿಕೊಳ್ಳುವ ರೀತಿ ಸೇರಿದಂತೆ ಹಲವು ವಿಚಾರಗಳನ್ನು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಎತ್ತಿ ಹಿಡಿಯಲಾಗಿದೆ.

  ಧ್ರುವ ಪ್ರಾಣಕ್ಕೆ ಸಂಚಕಾರ: ತಿಳಿಯದೆ ತಪ್ಪು ಮಾಡಿದ ವೇದಾಂತ!ಧ್ರುವ ಪ್ರಾಣಕ್ಕೆ ಸಂಚಕಾರ: ತಿಳಿಯದೆ ತಪ್ಪು ಮಾಡಿದ ವೇದಾಂತ!

  ತುಳಸಿ ಪಾತ್ರದಲ್ಲಿ ಸುಧಾರಾಣಿ

  ತುಳಸಿ ಪಾತ್ರದಲ್ಲಿ ಸುಧಾರಾಣಿ

  ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಅತ್ತೆ ಹಾಗೂ ಸೊಸೆಯರದ್ದೇ ಲೀಡ್ ಪಾತ್ರ. ಅತ್ತೆ-ಸೊಸೆ ಒಟ್ಟಾಗಿ ಕೂಡಿ ಬಾಳುತ್ತಾರೆ. ಅತ್ತೆಯ ಕೆಲ ಗುಣಗಳನ್ನು ಬದಲಾಯಿಸಲು ಸೊಸೆ ಮುಂದಾಗುತ್ತಾಳೆ. ನಟಿ ಸುಧಾರಾಣಿ ಅವರು ಈಗಾಗಲೇ ಬೆಳ್ಳಿಪರದೆಯಲ್ಲಿ ಮಿಂಚಿ ಎಲ್ಲರ ಮನದಲ್ಲಿ ಉಳಿದವರು. ಇತ್ತೀಚೆಗೆ 'ಜೊತೆ ಜೊತೆಯಲಿ' ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಗೆಸ್ಟ್ ರೋಲ್ ಮಾಡಿದ್ದರು. ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತೆಯ ರೋಲ್ ಅನ್ನು ಸುಧಾರಾಣಿ ಅವರು ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸುಧಾರಾಣಿ ಅವರು ತುಳಿಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಧಾರಾವಾಹಿಯಲ್ಲಿ ನಟಿಸಲು ಖುಷಿ- ಸುಧಾರಾಣಿ

  ಧಾರಾವಾಹಿಯಲ್ಲಿ ನಟಿಸಲು ಖುಷಿ- ಸುಧಾರಾಣಿ

  ಈಗಲೂ ಚೆಂದುಳ್ಳಿ ಚೆಲುವೆಯಂತೆ ಕಾಣುವ ನಟಿ ಸುಧಾರಾಣಿ ಅವರು ಒಂದು ಕಾಲದ ಟಾಪ್ ನಟಿಯಾಗಿದ್ದವರು. ಅಂದಿನಿಂದ ಇಂದಿನವರೆಗೂ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಇದೀಗ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಲ್ಲಿ ಜನರನ್ನು ನಿತ್ಯ ರೀಚ್ ಆಗುತ್ತೀವಿ. ಅವರು ಥಿಯೇಟರ್‌ಗೆ ಬಂದು ನಮ್ಮನ್ನು ನೋಡುವುದಕ್ಕಿಂತಲೂ, ನಾವೇ ಮನೆ ಮನೆಗೇ ಹೋಗಿ ರೀಚ್ ಆಗುತ್ತೇವೆ. ಧಾರಾವಾಹಿಯಲ್ಲಿ ನಟಿಸಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

  ಅಕ್ಟೋಬರ್ 31ರಿಂದ 'ಶ್ರೀರಸ್ತು ಶುಭಮಸ್ತು'

  ಅಕ್ಟೋಬರ್ 31ರಿಂದ 'ಶ್ರೀರಸ್ತು ಶುಭಮಸ್ತು'

  ನಟಿ ಸುಧಾರಾಣಿ ನಟನೆಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪ್ರೋಮೋವನ್ನು ನಾಲ್ಕು ತಿಂಗಳ ಹಿಂದೆಯೇ ಪ್ರಸಾರ ಮಾಡಲಾಗಿತ್ತು. ಇನ್ನು ಇದೀಗ ಇದರ ಪ್ರಸಾರದ ಸಮಯ ಹಾಗೂ ದಿನವನ್ನು ಕೂಡ ವಾಹಿನಿ ತಿಳಿಸಿದೆ. ಹೊಸ ಪ್ರೋಮೋವನ್ನು ರಿಲೀಸ್ ಮಾಡಿರುವ ವಾಹಿನಿ, ಅಕ್ಟೋಬರ್ 31ರಿಂದ ಪ್ರಸಾರವಾಗಲಿದೆ ಎಂದು ಘೋಷಿಸಿದೆ. ರಾತ್ರಿ 8.30ಕ್ಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಾರಂಭವಾಗುತ್ತಿದ್ದು, ಈ ಸಮಯದಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯ ಸಮಯ ಬದಲಾಗಲಿದೆ.

  English summary
  Senior Actress Sudharani Acted new Kannada serial srirastu subhamastu from October 31st
  Sunday, October 23, 2022, 18:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X