For Quick Alerts
  ALLOW NOTIFICATIONS  
  For Daily Alerts

  ಅಟಿಟ್ಯೂಡ್ ಸಮಸ್ಯೆಗೆ, ಸೀರಿಯಲ್ ನಿಂದ ಹೊರಬಿದ್ದ ಕಲಾವಿದರು ಇವರು!

  By ಸೋನು ಗೌಡ
  |

  ಯಾವುದೇ ಕ್ಷೇತ್ರದಲ್ಲಾಗಲಿ ಅಟಿಟ್ಯೂಡ್ ಅನ್ನೋ ಸಮಸ್ಯೆ ಶುರುವಾದರೆ ಅಲ್ಲಿ ಯಾರಿಗೂ ಉಳಿಗಾಲವಿರುವುದಿಲ್ಲ. ಅದಕ್ಕೆ ಬೆಳ್ಳಿತೆರೆ ಹಾಗೂ ಕಿರುತೆರೆ ಕೂಡ ಹೊರತಲ್ಲ. ಅಲ್ಲದೇ ಈ ಎರಡು ಕ್ಷೇತ್ರಕ್ಕೂ ಈ ಫಾರ್ಮುಲಾ ಅಂತೂ ಸ್ವಲ್ಪ ಜಾಸ್ತೀನೇ ಅಪ್ಲೈ ಆಗುತ್ತೆ ಬಿಡಿ.

  ಅಂದಹಾಗೆ ಈಗ್ಯಾಕಪ್ಪಾ ಈ ವಿಚಾರದ ಬಗ್ಗೆ ಪೀಠಿಕೆ ಹಾಕುತ್ತಿದ್ದೇವೆ ಅಂದ್ರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕಿ ಅಶಿತಾ ಚಂದ್ರಪ್ಪರನ್ನು ಜೀ ತಂಡ ಒಮ್ಮೆ ಗೆಟ್ ಔಟ್ ಅಂದಿದ್ದು, ನಂತರ ಮತ್ತೆ ಅವರು ತಂಡಕ್ಕೆ ವಾಪಸಾಗಿದ್ದು, ಎಲ್ಲಾ ನಿಮಗೆ ಗೊತ್ತೇ ಇದೆ ಅಲ್ವಾ.

  ತದನಂತರ ಮತ್ತೆ ಅಶಿತಾ ಅವರು ಹೊರಬಂದಿದ್ದು, ಇದಕ್ಕೆ ಕಾರಣ ಏನು ಅಂದ್ರೆ ಅವರ ಅಟಿಟ್ಯೂಡ್ ಕಾರಣ ಅಂತಾರೆ ಚಾನಲ್ ನವರು.

  ಕಿರುತೆರೆ ನಟಿ ಅಶಿತಾ ಅವರು 'ಜೊತೆ ಜೊತೆಯಲಿ' ಶಾಲಿನಿ ಪಾತ್ರಕ್ಕೆ ಹೊಂದಿಕೆಯಾಗ್ತಿದ್ದಿದ್ದು ನಿಜ, ಆದರೆ ದಿನಕ್ಕೊಂದು ಕಾರಿನಲ್ಲಿ ಬರುತ್ತಿದ್ದ ಆಕೆಯನ್ನು ನಿರ್ವಹಿಸೋದು ಧಾರಾವಾಹಿ ತಂಡಕ್ಕೆ ದೊಡ್ಡ ತಲೆನೋವಾಗಿ ಬಿಟ್ಟಿತ್ತಂತೆ.

  ದಕ್ಷಿಣ ಭಾರತದ ಅನೇಕ ಸ್ಟಾರ್ ಗಳಿಗೆ ಫ್ಯಾಶನ್ ಸ್ಟೈಲಿಸ್ಟ್ ಆಗಿರುವ ನಟಿ ಅಶಿತಾ ಚಂದ್ರಪ್ಪ ಅಲಿಯಾಸ್ ಶಾಲಿನಿ ಅವರಿಗೆ ಮೂಡ್ ಚೆನ್ನಾಗಿದ್ದರೆ ಟೈಮಿಗೆ ಸರಿಯಾಗಿ ಬಂದು ಶೂಟಿಂಗ್ ಮುಗಿಸಿ ಕೊಡುತ್ತಿದ್ದರಂತೆ, ಇಲ್ಲದಿದ್ದರೆ ಯಾಕಾದರೂ ಇವರನ್ನು ಸೀರಿಯಲ್ ಗೆ ತಗೊಂಡೆವಪ್ಪಾ, ಅಂತ ಅನಿಸೋವಷ್ಟರಮಟ್ಟಿಗೆ ಇಡೀ ತಂಡಕ್ಕೆ ಕಾಟ ಕೊಡುತ್ತಿದ್ದರಂತೆ.

  ಇದೀಗ, ಅಶಿತಾ ಅವರ ಈ ಥರದ ವರ್ತನೆಯಿಂದ ರೋಸಿ ಹೋದ ಸೀರಿಯಲ್ ತಂಡ ಆಕೆಗೆ ಶಾಶ್ವತವಾಗಿ ಗುಡ್ ಬೈ ಹೇಳಿ ಆ ಪಾತ್ರಕ್ಕೆ ಚರಣದಾಸಿ ದೀಪಿಕಾರನ್ನು ಕರೆತರುವ ನಿರ್ಧಾರಕ್ಕೆ ಬಂದಿದೆ. ಇನ್ನು ಇದೇ ಅಟಿಟ್ಯೂಡ್ ಸಮಸ್ಯೆ ಸಾಲಿಗೆ ಸೇರುವ ಮತ್ತೋರ್ವ ನಟ ಚಂದನ್ ಅವರು.

  ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ನಟ ಚಂದನ್ ಅವರು ಈ ಹಿಂದೆ 'ರಾಧಾ ಕಲ್ಯಾಣ' ಮತ್ತು 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗಳಲ್ಲಿ ಲೀಡ್ ರೋಲ್ ನಲ್ಲಿ ಮಿಂಚಿದ್ದರು, ಅಲ್ಲದೇ ಇದೇ ಎರಡು ಧಾರಾವಾಹಿಗಳ ಮೂಲಕ ಚಂದನ್ ಮನೆಮಾತಾಗಿ, ಹುಡುಗಿಯರ ಫೇವರೆಟ್ ಆಗಿದ್ದು, ಅನ್ನೋದು ಸತ್ಯ.

  ಆದರೆ ಈ ಪ್ರಸಿದ್ಧಿಯ ಪಿತ್ತ ನೆತ್ತಿಗೇರಿ ತನ್ನದೇ ನಡಿಬೇಕು, ತಾನು ಹೇಳಿದ್ದೇ ಆಗಬೇಕು ಅನ್ನೋ ನಡವಳಿಕೆಯಿಂದ, 'ಪ್ಯಾಟೆ ಮಂದಿ ಕಾಡಿಗೆ ಬಂದ್ರು', ರಿಯಾಲಿಟಿ ಶೋ ನಿಂದ ಕಿರುತೆರೆಗೆ ಪರಿಚಯವಾದ ಚಂದನ್ ತನ್ನ ಅಟಿಟ್ಯೂಡ್ ಸಮಸ್ಯೆಯಿಂದ ಅವಕಾಶ ವಂಚಿತರಾಗಿದ್ದರು. ಜೊತೆಗೆ 'ಲಕ್ಷ್ಮಿ ಬಾರಮ್ಮ' ಹಾಗೂ 'ರಾಧಾ ಕಲ್ಯಾಣ' ಧಾರಾವಾಹಿಗಳಿಂದ ಅವರಿಗೆ ಗೇಟ್ ಪಾಸ್ ನೀಡಲಾಗಿತ್ತು. ಅಷ್ಟರಲ್ಲಿ ಬಿಗ ಬಾಸ್ ಶುರುವಾಯ್ತು ನೋಡಿ, ಆದ್ರಿಂದ ಚಂದನ್ ಸದ್ಯಕ್ಕೆ ಸೇಫ್ ಆಗಿದ್ದಾರೆ.

  ಇನ್ನು ಜೀ ಕನ್ನಡದಿಂದ ಹೊರಬಂದ ಕಲಾವಿದೆ ಅಶಿತಾಗೆ ಯಾವ ಧಾರಾವಾಹಿಯಲ್ಲೂ ಅವಕಾಶ ಸಿಕ್ಕಿಲ್ಲ. ಇನ್ನೇನಿದ್ರೂ ಅಶಿತಾ ತಾವೇ ಸ್ವತಃ ಸೀರಿಯಲ್ ನಿರ್ಮಾಣ ಮಾಡಿ ಅಭಿನಯಿಸಿಬೇಕು ಅನ್ನುವಷ್ಟರಮಟ್ಟಿಗೆ ಖಾಲಿ ಕುಳಿತಿದ್ದಾರೆ.

  ಒಟ್ನಲ್ಲಿ ಇವರಿಬ್ಬರ ಈ ಥರದ ವರ್ತನೆಯಿಂದ ತಮ್ಮ ಭವಿಷ್ಯವನ್ನು ತಾವೇ ಕೈಯಾರೆ ಹಾಳು ಮಾಡಿಕೊಂಡರು ಅನ್ನೊದಂತೂ ಸತ್ಯ.

  English summary
  Serial actors Aashita and Chandan eliminated from channels because of their attitude. Television show 'Jothe Jotheyali' fame Actress Aashita Chandrappa and 'Laxmi Baramma' fame Chandan Quit the show from channels because of their attitude.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X