»   » ಸಲ್ಮಾನ್ 'ಬಿಗ್ ಬಾಸ್' ಶೋಗೆ ಕಿಂಗ್ ಖಾನ್?

ಸಲ್ಮಾನ್ 'ಬಿಗ್ ಬಾಸ್' ಶೋಗೆ ಕಿಂಗ್ ಖಾನ್?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಣ್ಣದ ಲೋಕದಲ್ಲಿ ಏನು ಬೇಕಾದರೂ ನಡೆಯಬಹುದು. ಎಂಥಾ ವೈರುಧ್ಯ ಇದ್ದರೂ ಮೈತ್ರಿ ಮೂಡುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗುವ ಕಾಲ ಬಂದಿದೆ. ಸಲ್ಮಾನ್ ಖಾನ್ ಆವರ ನಿರೂಪಣೆ ಇರುವ ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಿಂಗ್ ಖಾನ್ ಶಾರುಖ್ ಎಂಟ್ರಿ ಕೊಡುತ್ತಿದ್ದಾರಂತೆ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬರುವುದಾದರೆ ನಾನು ತುಂಬು ಹೃದಯದ ಸ್ವಾಗತ ಕೋರುತ್ತೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಆದರೆ, ಈ ಆಹ್ವಾನಕ್ಕೆ ಶಾರುಖ್ ಏನು ಉತ್ತರ ಕೊಟ್ಟರು ಎಂಬ ಕುತೂಹಲ ಕೂಡಾ ತಣಿದಿದೆ. ಶಾರುಖ್ ಅವರು ಸಲ್ಮಾನ್ ಹೇಳಿಕೆಗೆ ಉತ್ತರಿಸಿದ್ದಾರೆ.

ಸಲ್ಮಾನ್ ಅವರ ಬಿಗ್ ಬಾಸ್ ನಲ್ಲಿ ಚಿತ್ರ ಪ್ರಚಾರಕ್ಕೆ ತೆರಳಲು ನನಗೂ ಸಂತೋಷ, ನನ್ನದೇನೂ ಅಭ್ಯಂತರವಿಲ್ಲ ಎಂದು ಶಾರುಖ್ ಹೇಳಿದ್ದಾರೆ. ಆದರೆ, ಇಬ್ಬರೂ ಒಪ್ಪಿದರೂ ಮಿಲನಕ್ಕೆ ಮುಹೂರ್ತ ಸದ್ಯದಲ್ಲೇ ಕೂಡಿ ಬರುವುದು ಸಾಧ್ಯವಿಲ್ಲ.

ದೀಪಿಕಾ ಪಡುಕೋಣೆ ಜತೆಗಿನ ಫರ್ಹಾ ಖಾನ್ ಚಿತ್ರ ಹ್ಯಾಪಿ ನ್ಯೂ ಇಯರ್ ಪ್ರಚಾರ ಮಾಡಬೇಕಾದರೆ ಮುಂದಿನ ವರ್ಷ ತನಕ ಕಾಯಬೇಕಾಗುತ್ತದೆ. ಚಿತ್ರ ಸದ್ಯಕ್ಕೆ ದುಬೈನಲ್ಲಿ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದಾರೆ. ಚಿತ್ರ ಸದ್ಯಕ್ಕೆ ದುಬೈನಲ್ಲಿ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದಾರೆ. ಶಾರುಖ್- ಸಲ್ಮಾನ್ ವಿರಸ ಮುರಿದು ಬಿತ್ತೇ? ಮಾರ್ಕೆಟಿಂಗ್ ಕಿಂಗ್ ಶಾರುಖ್ ಮಾಡಿರುವ ತಂತ್ರವೇ? ಮುಂದೆ ಓದಿ...

ಇದು ಮೈತ್ರಿ ಸೂಚನೆಯೇ?

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಶಾರುಖ್-ಸಲ್ಮಾನ್ ಅವರ ವಿರಸ ಮುರಿದು ಬೀಳುವ ಸಾಧ್ಯತೆ ಹೆಚ್ಚಿದೆ.

ಇಫ್ತಾರ್ ಕೂಟದಲ್ಲಿ ಇಬ್ಬರ ಆಲಿಂಗನ, ಬಿಗ್ ಬಾಸ್ 7 ಆರಂಭದ ಕಾರ್ಯಕ್ರಮದಲ್ಲಿ ಶಾರುಖ್ ಅವರ ಚೆನ್ನೈ ಎಕ್ಸ್ ಪ್ರೆಸ್ ಹೊಗಳಿದ ಸಲ್ಮಾನ್, ನನ್ನ ಹಾಗೂ ಶಾರುಖ್ ನಡುವೆ ವೈಯಕ್ತಿಕ ದ್ವೇಷ ಏನಿಲ್ಲ. ಪೈಪೋಟಿ ಏನಿದ್ದರೂ ಬಾಕ್ಸಾಫೀಸ್ ಗಳಿಕೆಯಲ್ಲಿ ಮಾತ್ರ ಎಂದಿದ್ದರು.

ಈಗ ಶಾರುಖ್ ಕೂಡಾ ಸಲ್ಮಾನ್ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲೇ ಹ್ಯಾಪಿ ನ್ಯೂ ಇಯರ್ ಹೇಳಲು ಸಾಧ್ಯವಿಲ್ಲದ ಕಾರಣ ಶಾರುಖ್ ಆಶ್ವಾಸನೆ ಏನಾಗಲಿದೆ ಕಾದು ನೋಡೋಣ

ಅಣ್ಣ ತಮ್ಮಂದಿರಂತಿದ್ದರು

ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಖಾನ್ ತ್ರಯರದ್ದೇ ಕಾರುಬಾರಾಗಿತ್ತು. ಸಲ್ಮಾನ್ ಹಾಗೂ ಶಾರುಖ್ ಅಂತೂ ಸ್ವಂತ ಅಣ್ಣ ತಮ್ಮಂದಿರನಂತೆ ಇದ್ದರು 2008ರ ತನಕ ಅಲ್ಪ ಸ್ವಲ್ಪ ಮುನಿಸಿದ್ದರೂ ಮುಖ ಕಂಡರೆ ಆಗದು ಎಂಬ ಭಾವನೆ ಇಬ್ಬರಲ್ಲೂ ಇರಲಿಲ್ಲ.. ಆದರೆ, 2008ರ ನಂತರ ಏನಾಯ್ತು ಮುಂದೆ ಓದಿ

ಗೆಳತಿಯೂ ಇಲ್ಲ ಗೆಳತನವೂ ಇಲ್ಲ

ಶಾರುಖ್ ಹಾಗೂ ಸಲ್ಮಾನ್ ಖಾನ್ ಆಪ್ತತೆ ಮುರಿಯಲೆಂದು ವಿದೇಶದಿಂದ ಬಂದ ಕತ್ರೀನಾ ಕೈಫ್ ನಿಮಿತ್ತವಾಗಿದ್ದು ಏಕೆ? ಸೂಪರ್ ಸ್ಟಾರ್ ಗಳ ನಡುವೆ ಕದನ ಹುಟ್ಟಿ ಹಾಕಿದರೆ ಯಾರಿಗೆ ಲಾಭ? 2008ರಲ್ಲಿ ಕತ್ರೀನಾ ಕೈಫ್ ಹುಟ್ಟುಹಬ್ಬದ ಆಚರಣೆ ಸಮಾರಂಭದಲ್ಲಿ ನಿಜವಾಗಿ ನಡೆದಿದ್ದು ಏನು? ಅಂದಿನಿಂದ ಶಾರುಖ್-ಸಲ್ಮಾನ್ ಮುಖ ಸಿಂಡರಿಸಿಕೊಂಡು ಓಡಾಡುವುದು ಏಕೆ? ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿವೆ

ಕರಣ್ ಅರ್ಜುನ್

ಬಾಲಿವುಡ್ ನಲ್ಲಿ ಬ್ಲಾಕ್ ಬ್ಲಾಸ್ಟರ್ ಚಿತ್ರ ಎನಿಸಿದ ಕರಣ್ ಅರ್ಜುನ್ 1995ರಲ್ಲಿ ಇಬ್ಬರಿಗೂ ಚಿತ್ರರಂಗದಲ್ಲಿ ಮರು ಹುಟ್ಟು ನೀಡಿತ್ತು. ಅಣ್ಣ ತಮ್ಮಂದಿರಾಗಿ ಬಾಂಧವ್ಯ ಮೆರೆದ್ದ ಸೂಪರ್ ಸ್ಟಾರ್ ಗಳು ಮತ್ತೆ ಒಂದಾಗಲೇ ಇಲ್ಲ

ಬಾಜಿಗರ್

1993ರಲ್ಲಿ ಬಾಜಿಗರ್ ಚಿತ್ರಕ್ಕೆ ಸಲ್ಮಾನ್ ಖಾನ್ ಅವರನ್ನು ಮೊದಲಿಗೆ ಆಯ್ಕೆ ಮಾಡಲಾಗಿತ್ತಂತೆ. ಆದರೆ, ಶಾರುಖ್ ಖಾನ್ ಈ ಪಾತ್ರದಲ್ಲಿ ಮಿಂಚಿ ಸೂಪರ್ ಸ್ಟಾರ್ ಆಗಿ ಬಿಟ್ಟರು.

ಆಲಿಂಗನ ಗುಟ್ಟು

ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಾದ ನಿಯಮ ಪಾಲನೆ ಮಾಡುವ ಇಸ್ಲಾಂ ಧರ್ಮಿಗಳಂತೆ ನಾವಿಬ್ಬರು ಆಲಿಂಗನ ಮಾಡಿಕೊಂಡೆವು. ನಾನಂತೂ ಗೆಳೆಯರಿಗಾಗಿ ಎಲ್ಲಾ ದ್ವೇಷವನ್ನು ಮರೆಯಲು ಸಿದ್ಧ ಆದರೆ ಎಲ್ಲರೂ ಆದೇ ರೀತಿ ಇರುತ್ತಾರೆ ಎಂಬ ಅಪೇಕ್ಷೆ ಇಟ್ಟುಕೊಳ್ಳಲಾಗುತ್ತದೆಯೇ ಎಂದು ಸಲ್ಮಾನ್ ಹೇಳಿದ್ದರು.

English summary
We recently saw Salman Khan in a very jovial mood at the launch of Bigg Boss 7. During the event, Salman Khan had made a statement that Shahrukh Khan is more than welcome to promote his films on the show and we all wondered how Shahrukh will react to this invitation.
Please Wait while comments are loading...