For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ 'ರಾತ್ರಿ ರಾಣಿ ನೈದಿಲೆ'

  By ಜೇಮ್ಸ್ ಮಾರ್ಟಿನ್
  |

  ಕನ್ನಡದ ಬಿಗ್ 'ರಿಯಾಲಿಟಿ ಶೋ' ಎನಿಸಿಕೊಂಡಿರುವ 'ಬಿಗ್ ಬಾಸ್ 2' ಬಗ್ಗೆ ವೀಕ್ಷಕರಿಗೆ ಕುತೂಹಲ ಹೆಚ್ಚಾಗುತಿದೆ. ಈ ಬಾರಿ ಯಾರೆಲ್ಲಾ ಪ್ರಮುಖರು ಶೋನಲ್ಲಿ ಸ್ಪರ್ಧಿಗಳಾಗುತ್ತಾರೆ ಎಂಬುದರ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಕೆಲವರಂತೂ ನಾವು ಬಿಗ್ ಬಾಸ್ ಮನೆ ಸೇರುತ್ತಿಲ್ಲ ಎಂದು ಘೋಷಿಸಿದ್ದಾರೆ ಕೂಡಾ. ಈ ನಡುವೆ ಹಲವರ ಪಾಲಿಗೆ ರಾತ್ರಿರಾಣಿ ನೈದಿಲೆಯಾಗಿ ನಿದ್ದೆ ಕದ್ದ ಚೋರಿಯಾಗಿದ್ದ ಮಾಜಿ ಪೋರ್ನ್ ಸ್ಟಾರ್ ಶಕೀಲಾ ಬಿಗ್ ಬಾಸ್ ಮನೆ ಪ್ರವೇಶಿಸುವುದು ಖಚಿತವಾಗಿದೆ. ಶಕೀಲಗೆ ಸ್ಪರ್ಧೆ ಒಡ್ಡಲು ತೆರೆ ಮೇಲೆ ಹೆಚ್ಚು ಕಣ್ಣೀರ ಧಾರೆ ಹರಿಸಿದ ಖ್ಯಾತಿಯುಳ್ಳ ನಟಿ ಶ್ರುತಿ ಅವರಿರುತ್ತಾರಂತೆ.

  ವಿವಾದಿತ ವ್ಯಕ್ತಿಗಳನ್ನು ಒಂದು ಕಡೆ ಒಟ್ಟುಗೂಡಿಸಿ ಮಜಾ ತೆಗೆದುಕೊಳ್ಳುವುದೇ ಇವರ ಜಾಯಮಾನ ಎಂದು ಜನ ಮೂಗೆಳೆದರೂ, ರಿಮೋಟ್ ಕಂಟ್ರೋಲ್ ಗುಂಡಿ ಒತ್ತಿದರೂ ಯಾರ ಹೇಳಿಕೆ ಮೂದಲಿಕೆಗೂ ಬಗ್ಗದೆ ಜಗ್ಗದೆ ಬಿಗ್ ಬಾಸ್ ಶೋ ಮುಂದುವರೆಯಲಿದೆ. ಕಿಚ್ಚ ಸುದೀಪ್ ಸಾರಥ್ಯದ ಈ ಶೋ ಈಗ ಚಾನೆಲ್ ಬದಲಿಸುವುದು ಎಲ್ಲರಿಗೂ ಗೊತ್ತೇ ಇದೆ.

  ಈ ಟಿವಿ ಕನ್ನಡ ವಾಹಿನಿಯಿಂದ ಸುವರ್ಣ ವಾಹಿನಿ ತೆಕ್ಕೆಗೆ ಬಿದ್ದಿರುವ ಬಿಗ್ ಬಾಸ್ ಮನೆ ಈಗ ಹೊಸ ಕಳೆಯಿಂದ ಹೊಸ ಅತಿಥಿಗಳಿಗಾಗಿ ಸಿದ್ಧವಾಗಿದೆ. ಸುವರ್ಣ ವಾಹಿನಿಯ ಸುಧೀಂದ್ರ ಕಂಚಿತೋಟ, ವಿನಾಯಕರಾಮ್ ಕಲಗಾರು ಬಿಗ್ ಬಾಸ್ ಹಿಂದಿನ ರುವಾರಿಗಳಾಗಿರುತ್ತಾರೆ. ಇವರ ಬೆನ್ನ ಹಿಂದೆ ಚಾನೆಲ್ ಮುಖ್ಯಸ್ಥ ಅನೂಪ್ ಚಂದ್ರಶೇಖರ್ ಅವರಂತೂ ಇದ್ದೇ ಇರುತ್ತಾರೆ. ಸುವರ್ಣ ವಾಹಿನಿಗೆ ಬಿಗ್ ಬಾಸ್ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಈಗಾಗಲೇ ಶೋ ಸಾಕಷ್ಟು ಕ್ರೇಜ್ ಹುಟ್ಟಿಹಾಕಿರುವುದರಿಂದ ಸ್ಪರ್ಧಿಗಳ ಆಯ್ಕೆ, ಮನೆ ವಾತಾವರಣ, ಆಟಗಳ ನಿಯಮಾವಳಿಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗಿದೆ ಎಂದು ತಿಳಿದು ಬಂದಿದೆ. ಅಂದಹಾಗೆ, ಶಕೀಲ ಅವರ ಕಿಲಕಿಲ ನಗು ಬಿಗ್ ಬಾಸ್ ಮನೆ ತಲುಪಿದ್ದು ಏಕೆ ಮುಂದೆ ಓದಿ...

  ಸಿನಿಮಾಕ್ಕೆ ಲೈಂಗಿಕ ಸ್ಪರ್ಶ ನೀಡಿದ ಶಕೀಲಾ

  ಸಿನಿಮಾಕ್ಕೆ ಲೈಂಗಿಕ ಸ್ಪರ್ಶ ನೀಡಿದ ಶಕೀಲಾ

  ಪೋರ್ನ್ ಸಿನಿಮಾಗಳ ರಾಣಿಯೆಂದೇ ಪ್ರಸಿದ್ಧಳಾದ ಶಕೀಲಾಳ ಕಥೆ. ಈಕೆ ಭಾರತದ ಸಿನಿಮಾಕ್ಕೆ ಲೈಂಗಿಕ ಸ್ಪರ್ಶ ನೀಡಿದ ಕೇರಳದ ಕೊಡುಗೆ! ಶಕೀಲಾ ಮಲಯಾಳಂ ಮಾತ್ರವಲ್ಲ ಕನ್ನಡ, ತೆಲುಗು, ತಮಿಳುಗಳಲ್ಲೂ ಪಡ್ಡೆಗಳ ಒದ್ದೆ ಕನಸುಗಳ ನಾಯಕಿಯಾದವಳು. ದಢೂತಿ ದೇಹ. ಅದುವೇ ಆಕೆಯ ಬಂಡವಾಳ. ಕನ್ನಡದಲ್ಲಿ ಕೆಂಪ, ಮೋನಾಲಿಸಾ, ಸರ್ಕಲ್ ರೌಡಿ, ಇತ್ತೀಚಿನ 90, ಸಂಸಾರದಲ್ಲಿ ಗೋಲ್ ಮಾಲ್ 2,ಪಾತರಗಿತ್ತಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ.

  ದ್ವಿಭಾಷಾ ನಿರ್ದೇಶಕಿಯಾದ ಶಕೀಲಾ

  ದ್ವಿಭಾಷಾ ನಿರ್ದೇಶಕಿಯಾದ ಶಕೀಲಾ

  ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ತೆರೆ ಕಾಣಲಿರುವ ನಾಯಕಿ ಪ್ರಧಾನ ಚಿತ್ರಕ್ಕೆ ಶಕೀಲಾ ಅವರು ನಿರ್ದೇಶಕಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಕಥೆ, ಚಿತ್ರಕಥೆ, ನಿರ್ದೇಶಕ ಮಾಡುವ ಉತ್ಸಾಹದಲ್ಲಿರುವ ಶಕೀಲಾ ಚಿತ್ರಕ್ಕೆ ಡೈಲಾಗ್ಸ್ ಮಾತ್ರ ವೃತ್ತಿಪರರಿಂದ ಬಂದಿದೆಯಂತೆ. ತೆಲುಗು ಸರಾಗವಾಗಿ ಮಾತನಾಡಬಲ್ಲೆ ಆದರೆ, ಡೈಲಾಗ್ಸ್ ಬರೆಯೋದು ಕಷ್ಟ ಎಂದಿದ್ದಾರೆ. ಈ ಚಿತ್ರ ತಮಿಳಿಗೂ ಡಬ್ ಆಗಲಿದೆಯಂತೆ. ಇದರ ಜತೆಗೆ ಶಕೀಲ ಆತ್ಮ ಚರಿತೆ ಆಧಾರಿಸಿದ ಚಿತ್ರವೊಂದು ತಮಿಳು, ಮಲೆಯಾಳಂ, ತೆಲುಗು, ಕನ್ನಡ ಹಾಗೂ ಹಿಂದಿಯಲ್ಲಿ ತೆರೆ ಕಾಣಬೇಕಿದೆ.

  ಶಕೀಲ ಆತ್ಮಚರಿತ್ರೆ ಪುಟ ಓದಿ ಶಾಕ್

  ಶಕೀಲ ಆತ್ಮಚರಿತ್ರೆ ಪುಟ ಓದಿ ಶಾಕ್

  "ನನ್ನಲ್ಲಿ ಅಪರಾಧಿ ಮನೋಭಾವವಿಲ್ಲ...ಆದರೆ ನೋವು ಮಾತ್ರ ದಂಡಿಯಾಗಿದೆ" ಎಂಬ ಅಡಿಬರಹದೊಂದಿಗೆ ಮಲಯಾಳಂನಲ್ಲಿ ಬಿಡುಗಡೆಯಾಗಿರುವ ಈ ಆತ್ಮಕಥೆ ಈಗ ಅಲ್ಲಿ ಸಂಚಲನ ಮೂಡಿಸುತ್ತಿದೆ.ಶಕೀಲಾ ಆತ್ಮಕಥೆಯ ಕೆಲವು ಪುಟಗಳು ನಮ್ಮ ಒನ್ಇಂಡಿಯಾ ಓದುಗರಿಗಾಗಿ ಈ ಮುಂಚೆ ನೀಡಿದ್ದೆವು.. ಓದಿಲ್ಲದಿದ್ದರೆ ಮತ್ತೊಮ್ಮೆ ಓದಿ ಲಿಂಕ್ ಇಲ್ಲಿದೆ.

  ಶಕೀಲ ಏನು ಕಥೆ ಹೇಳ ಹೊರಟ್ಟಿದ್ದಾಳೆ

  ಶಕೀಲ ಏನು ಕಥೆ ಹೇಳ ಹೊರಟ್ಟಿದ್ದಾಳೆ

  ಈಗ ಇದೇ ಆತ್ಮಚರಿತೆಯ ಕೆಲವು ಪುಟಗಳನ್ನು ಶಕೀಲ ಬಾಯಿಂದಲೆ ಬಿಗ್ ಬಾಸ್ ಮನೆಯಲ್ಲಿ ಹೇಳಿಸಲು ಹೊರಟಿದ್ದಾರೆ ಎಂಬ ಸುದ್ದಿಯಿದೆ. ತನ್ನ ಪೋರ್ನ್ ಸ್ಟಾರ್ ಇಮೇಜ್, ಹೊಸ ಬದುಕು, ಅಭಿಮಾನಿಗಳು ದೇಗುಲ ಕಟ್ಟಲು ಹೊರಟ್ಟಿದ್ದು, ನಾನೇಕೆ ಈ ರೀತಿ ಬದುಕಿದೆ ಎಂಬುದರ ಕಥೆ ಬಿಚ್ಚಿಡಲಿದ್ದಾಳೆ.

  ಆದರೆ, ಈ ಹಿಂದಿನ ಬಿಗ್ ಬಾಸ್ ಹಾಗೂ ಹಿಂದಿ ಆವೃತ್ತಿಯಲ್ಲೂ ಕಂಡಂತೆ ಸ್ಪರ್ಧಿಗಳು ಸತ್ಯ ಹೊರಹಾಕುವುದಕ್ಕಿಂತ ಪ್ರೇಕ್ಷಕರಲ್ಲಿ ಕುತೂಹಲ ಕಾಯ್ದುಕೊಂಡು ರಬ್ಬರ್ ಬ್ಯಾಂಡ್ ನಂತೆ ಎಪಿಸೋಡಿನಿಂದ ಎಪಿಸೋಡಿಗೆ ಎಳೆದಾಡುವುದಂತೂ ನಿಜ.

  ಶಕೀಲಾಗೆ ಸ್ಪರ್ಧೆಯಿಂದ ಏನು ಲಾಭ

  ಶಕೀಲಾಗೆ ಸ್ಪರ್ಧೆಯಿಂದ ಏನು ಲಾಭ

  ನನ್ನ ಹೆಸರು ಶೃಂಗಾರದೇವತೆಗೆ ಹೋಲಿಕೆಯಾಗಿ ಹೇಗೆ ಬದಲಾಯಿತೋ ಯಾರಿಗೂ ಗೊತ್ತಿಲ್ಲ. ನನ್ನಂತಹ ಅದೆಷ್ಟೋ ಶಕೀಲಾಗಳು ಹೇಗೆ ಹುಟ್ಟುತ್ತಾರೋ, ಹೇಗೆ ರೂಪುಪಡೆದುಕೊಳ್ಳುತ್ತಾರೋ ಎಂಬುದನ್ನು ಎಲ್ಲರಿಗೂ ಗೊತ್ತಾಗಬೇಕು ಎಂದು ಶಕೀಲಾ ಹೇಳಿದ್ದಾಳೆ.

  ಈಗ ಬಿಗ್ ಬಾಸ್ ನಲ್ಲಿ ಶಕೀಲಾ ಮಾತನಾಡುವುದೆಲ್ಲವೂ ಸುವರ್ಣ ವಾಹಿನಿ ಹಾಗೂ ಶಕೀಲಾ ಭವಿಷ್ಯದ ಬದುಕಿಗೆ ಅಡಿಪಾಯವಾಗಲಿದೆ. ಬಿಗ್ ಬಾಸ್ ನಿಂದ ಶಕೀಲಾ ಬದುಕು ಬಂಗಾರವಾಗುವ ಸಾಧ್ಯತೆಯೂ ಇದೆ.. ಇದಕ್ಕೆ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಅವರ ಬಿಗ್ ಬಾಸ್ ಎಂಟ್ರಿ ಹಾಗೂ ಎಕ್ಸಿಟ್ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಹೊಸ ಬದುಕು ಕಟ್ಟಿಕೊಳ್ಳುತ್ತಿರುವ ಶಕೀಲಾಗೆ ಬಿಗ್ ಬಾಸ್ 'ಬಿಗ್' ವೇದಿಕೆ ಒದಗಿಸುವುದಂತೂ ಸತ್ಯ.

  English summary
  South Indian actress Shakeela, who is popular her role in B grade movies is making entry into Bigg Boss 2 season as one of the contestant. Our sources confirmed Shakeela and Shruthi name for the much hyped reality show which will be now telecasted in Suvarna Channel

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X