»   » ಮನೆಯಿಂದ ಹೊರಬಿದ್ದ ಬಳಿಕ ಶಕೀಲಾ ಹೇಳಿದ್ದೇನು?

ಮನೆಯಿಂದ ಹೊರಬಿದ್ದ ಬಳಿಕ ಶಕೀಲಾ ಹೇಳಿದ್ದೇನು?

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ವಿಕೆಟ್ ಉರುಳಿದೆ. ಈ ಬಾರಿ ಐದು ಮಂದಿ ನಾಮಿನೇಟ್ ಆಗಿದ್ದರು. ಶಕೀಲಾ, ಸಂತೋಷ್, ಲಯ ಕೋಕಿಲ, ನೀತೂ ಹಾಗೂ ರೋಹಿತ್ ಈ ಬಾರಿ ನಾಮಿನೇಟ್ ಆಗಿದ್ದರು. ಆದರೆ ಶಕೀಲಾ ಅವರನ್ನು ಮನೆಯಿಂದ ಕಳುಹಿಸಲಾಯಿತು.

ಮಸ್ತಿನೂ ಇಲ್ಲೇ ಕುಸ್ತಿನೂ ಇಲ್ಲೆ, ಹುಚ್ಚು ಇಲ್ಲೇ ಕಿಚ್ಚು ಇಲ್ಲೇ ಎಂದು ಹೇಳುತ್ತಾ ಸುದೀಪ್ ನಡೆಸಿಕೊಟ್ಟ 'ಕಿಚ್ಚಿನ ಕಥೆ ನಿಮ್ಮ ಕಿಚ್ಚನ ಜೊತೆ' ಕಾರ್ಯಕ್ರಮ ಕುತೂಹಲಭರಿತವಾಗಿ ಸಾಗಿತು. ಸತತ ಮೂರು ಬಾರಿ ನಾಮಿನೇಟ್ ಆಗಿ ಮನೆಯಲ್ಲಿಯೇ ಉಳಿಯುವ ಮೂಲಕ ರೋಹಿತ್ ಅವರು ಹ್ಯಾಟ್ರಿಕ್ ಸಾಧಿಸಿದ್ದಾರೆ.

ಈ ಬಾರಿಯೂ ರೋಹಿತ್ ಮಿಸ್ ಇಲ್ಲದೆ ಔಟ್ ಆಗುತ್ತಾರೆ ಎಂದುಕೊಂಡಿದ್ದರು. ಏನಿಲ್ಲಾ ಎಂದರೂ ಲಯ ಕೋಕಿಲಾ ಅವರಾದರೂ ಮನೆಯಿಂದ ಹೊರಬೀಳಲಿದ್ದಾರೆ ಎಂದೇ ಭಾವಿಸಿದ್ದರು. ಈ ಬಾರಿಯ ಲೆಕ್ಕಾಚಾರವೂ ತಪ್ಪಿತು. ಶಕೀಲಾ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.

ಬಿಗ್ ಬಾಸ್ ನಿಂದ ನೀತೂ ಸೇಫ್, ಶಕೀಲಾ ಔಟ್

ಶಕೀಲಾ ಅವರು ಬಿಗ್ ಬಾಸ್ ಮನೆಗೆ ಅಡಿಯಿಟ್ಟಾಗ ಈ ಬಾರಿಯ ರಂಜಾನ್ ಹಬ್ಬವನ್ನು ಇಲ್ಲಿಯೇ ಆಚರಿಸಿಕೊಳ್ಳುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಆಗಿದ್ದೇ ಬೇರೆ. ಶಕೀಲಾ ಅವರೇ ಯೂ ಆರ್ ನಾಟ್ ನೀತೂ ಈಸ್ ಸೇಫ್ ಎಂದು ಸುದೀಪ್ ಹೇಳುವ ಮೂಲಕ ಶಕೀಲಾ ಅವರನ್ನು ಮನೆಯಿಂದ ಹೊರಕಳುಹಿಸಿದರು.

ಸಂತೋಷ್ ಕೈಗೆ ಮತ್ತೆ ಸ್ಲೇಟು ಬಳಪದ ಶಿಕ್ಷೆ

ಶಕೀಲಾ ಅವರ ಮುಖದಲ್ಲಿ ಸ್ವಲ್ಪವೂ ಅಳುಕು ಕಾಣಿಸಲಿಲ್ಲ. ಅವರು ಸಂತೋಷದಿಂದಲೇ ಹೊರಟರು. ಬಹುಶಃ ರಂಜಾನ್ ಹಬ್ಬ ಅವರನ್ನು ಕರೆದಿತ್ತು ಎನ್ನುತ್ತದೆ. ಹೊರಡಬೇಕಾದರೆ ಬಿಗ್ ಬಾಸ್ ಆದೇಶದಂತೆ ಕನ್ನಡದಲ್ಲಿ ಹೆಚ್ಚಾಗಿ ಮಾತನಾಡದೆ ಇರುವ ಒಬ್ಬ ಸದಸ್ಯನ ಹೆಸರನ್ನು ಸೂಚಿಸಬೇಕಾಗಿತ್ತು. ಅದರಂತೆ ಅವರು ಸಂತೋಷ್ ಹೆಸರನ್ನು ಸೂಚಿಸಿದರು.

ಬಿಗ್ ಬಾಸ್ ಮನೆಯಲ್ಲಿ ಒಂದು ಕುಟುಂಬ ಕಂಡೆ

ಕನ್ನಡ ಬಾರದ ಕಲರ್ ಫುಲ್ ಕಲಾವಿದೆ, ಕಡಿಮೆ ಸಮಯದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದ ಶಕೀಲಾ 'ಸಖತ್ ಸಂಡೇ ವಿತ್ ಕಿಚ್ಚ ಸುದೀಪ್' ವಿಶೇಷ ಎಪಿಸೋಡ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಪ್ಪು ಬಣ್ಣದ ಚೂಡಿದಾರದಲ್ಲಿ ಬಂದಿದ್ದ ಅವರ ಮುಖ ಮೇಕಪ್ ನಿಂದ ಕಂಗೊಳಿಸುತ್ತಿತ್ತು. ತುಂಬಾ ಫ್ರೆಶ್ ಆಗಿ ಕಾಣಿಸುತ್ತಿದ್ದ ಅವರು, ಮನೆಯವರೆಲ್ಲಾ ನನ್ನಲ್ಲಿ ಒಬ್ಬ ಅಕ್ಕ, ಅಮ್ಮ, ಒಳ್ಳೆಯ ಸ್ನೇಹಿತೆಯನ್ನು ಕಂಡರು ಎಂದರು.

ರೋಹಿತ್ ಹೊರತುಪಡಿಸಿ ಎಲ್ಲರದ್ದೂ ಮುಖವಾಡ

ಅವರೆಲ್ಲಾ ನನ್ನ ಅಡುಗೆಯನ್ನು ಮಿಸ್ ಮಾಡಿಕೊಂಡರು ಅನ್ನಿಸುತ್ತದೆ. ಈ ಟಾಸ್ಕ್ ಗಳೆಲ್ಲಾ ನನಗೆ ತುಂಬಾ ಇಂಪಾರ್ಟೆಂಟ್ ಎಂದು ಗೊತ್ತಿರಲಿಲ್ಲ ಎಂದರು. ಮುಖವಾಡ ಹಾಕಿಕೊಂಡು ಬದುಕುತ್ತಿರುವವರು ಯಾರು ಎಂದು ಸುದೀಪ್ ಕೇಳಿದಾಗ. ರೋಹಿತ್ ಹೊರತುಪಡಿಸಿ ಎಲ್ಲರೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ ಎಂದರು.

ಪ್ರೀತಿಯ ಕುಟುಂಬ ಸಿಕ್ಕಿತು ನನಗೆ

ಮೊದಲ ಎರಡು ವಾರ ಹೊಂದಿಕೊಳ್ಳಲು ತುಂಬಾ ಕಷ್ಟವಾಯಿತು. ಬಳಿಕ ಎಲ್ಲರೂ ನನ್ನನ್ನು ಅಮ್ಮಿ ಜಾನ್, ಅಕ್ಕ ಎಂದು ಕರೆಯುತ್ತಾ ಇದ್ದಂತೆ ಇಲ್ಲೂ ಒಂದು ಪ್ರೀತಿಯ ಕುಟುಂಬ ನನಗೆ ಸಿಕ್ಕಿತು. ಎಲ್ಲರ ಬಾಯಲ್ಲೂ ಚೇಚಿ ಎಂದು ಕರೆಸಿಕೊಂಡಿದ್ದು ತುಂಬಾ ಖುಷಿ ಕೊಡ್ತು ಎಂದರು.

ಮೂವತ್ತು ವರ್ಷಗಳಲ್ಲಿ ಸಿಗದೆ ಇದ್ದದ್ದು ಇಲ್ಲಿ ಸಿಕ್ತು

ಮೂವತ್ತು ವರ್ಷಗಳಲ್ಲಿ ಸಿಗದ ಪ್ರೀತಿ, ಪ್ರೇಮ. ಅನುರಾಗ, ಅನುಕಂಪ, ಆಪ್ಯಾಯತೆಗಳು ನನಗೆ ಇಲ್ಲಿ ಸಿಕ್ಕಿತು. ಮುಂದೆಯೂ ನನ್ನ ಬಗ್ಗೆ ಹೀಗೇ ಇರಲಿ ನಿಮ್ಮ ಅಭಿಮಾನ ಎಂದು ವೀಕ್ಷಕರನ್ನು ಕೇಳಿಕೊಂಡರು.

ರೋಹಿತ್ ನನ್ನ ಸ್ವಂತ ತಮ್ಮನಿದ್ದಂತೆ

ರೋಹಿತ್ ನನ್ನ ತಮ್ಮನಿದ್ದಂತೆ, ನನ್ನ ತಮ್ಮ ಸಲೀಂ ಬಳಿಕ ನೀನೇ ನನಗೆ ತಮ್ಮ ಎಂದರು. ಸಂತೋಷ ಅವರನ್ನು ಊಸರವಳ್ಳಿ ಎಂದು ಕರೆಯಬೇಡ ಏಕೆಂದರೆ ನೀನೇ ದೊಡ್ಡ ಊಸರವಳ್ಳಿ ಎಂದು ದೀಪಿಕಾಗೆ ಹೇಳಿದರು.

ದೀಪಿಕಾ ನೀನೇ ದೊಡ್ಡ ಊಸರವಳ್ಳಿ

ಸಂತೂ ನೀವು ಚಿಕ್ಕ ಮಕ್ಕಳ ತರಹ ಆಡಬೇಡಿ. ಕ್ಯಾಪ್ಟನ್ ಹಿಂದೆ ಹೋಗುವುದನ್ನು ಕಡಿಮೆ ಮಾಡಿ ಎಂದು ಲಯ ಅವರಿಗೆ ಕಿವಿ ಮಾತು ಹೇಳಿದರು. ನೀತೂಗೆ ಚೆನ್ನಾಗಿ ಹೆಲ್ಪ್ ಮಾಡಿ ಎಂದ ಸಲಹೆಯನ್ನು ಆದಿಗೆ ಕೊಟ್ಟರು. ದೀಪಿಕಾ ಅವರನ್ನು ನಂಬಬೇಡಿ ಎಂದು ನೀತೂಗೆ ಸಲಹೆ ಕೊಟ್ಟರು. ಇಷ್ಟು ಹೇಳಿ ಬಿಗ್ ಬಾಸ್ ಮನೆಯಿಂದ ಶಕೀಲಾ ನಿರ್ಗಮಿಸಿದರು.

English summary
Famed actress Shakeela gets eliminated from Bigg Boss Kannada house. On a sad note this weekend the audience chose to vote out Shakila from the house. She was more like a motherly figure inside the house, she managed to convey her message effectively although she was not fluent with Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada