Just In
Don't Miss!
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!
ನೂರನೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಿನಿಮಾ Rambo ದೊಡ್ಡ ಹಿಟ್ ಆಯ್ತು. ಅದಾದ ಬಳಿಕ ವಿಕ್ಟರಿ ಎಂಬ ಇನ್ನೊಂದು ಚಿತ್ರವನ್ನ ಕೈಗೆತ್ತಿಕೊಂಡ ಶರಣ್ ಚಿತ್ರೀಕರಣ ಮಾಡ್ತಿದ್ದರು. ಅಲ್ಲಿಯವರೆಗೂ ಶರಣ್ ಮತ್ತು ತರುಣ್ ಸುಧೀರ್ ಅವರ ಸ್ನೇಹ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಶರಣ್ ಅವರ ಪ್ರತಿ ಕೆಲಸದಲ್ಲೂ ತರುಣ್ ಜೊತೆಯಲ್ಲಿರಬೇಕಿತ್ತು.
ಶರಣ್ ಸಿನಿಮಾ ಕೆಲಸಗಳಲ್ಲೂ ತರುಣ್ ವಿಶೇಷ ಜವಾಬ್ದಾರಿ ಮತ್ತು ಕಾಳಜಿ ವಹಿಸುತ್ತಿದ್ದರು. ಹಾಗ್ನೋಡಿದ್ರೆ, Rambo ಸಿನಿಮಾದಲ್ಲಿ ಶರಣ್ ನಾಯಕನಾಗಿ ಯಶಸ್ಸು ಕಾಣಲು ತರುಣ್ ಪಾತ್ರವೂ ಹೆಚ್ಚಿದೆ. ಇದನ್ನ ಶರಣ್ ಅವರೇ ಹೇಳಿಕೊಂಡಿದ್ದಾರೆ.
ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!
ಹೀಗೆ ಇವರಿಬ್ಬರ ಸ್ನೇಹದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದ್ದ ಸಮಯದಲ್ಲಿ ಒಂದು ವಿಚಾರಕ್ಕೆ ಮನಸ್ತಾಪ ಉಂಟಾಗುತ್ತೆ. ಅದರ ಪರಿಣಾಮ ನಾಲ್ಕೈದು ವರ್ಷ ಮಾತು ಬಿಟ್ಟು ದೂರ ಆಗ್ತಾರೆ. ಅಷ್ಟಕ್ಕೂ, ಕುಚುಕು ಗೆಳೆಯರಂತಿದ್ದ ಇವರ ಸ್ನೇಹದಲ್ಲಿ ಬಿರುಕು ತರಿಸಿದ ಆ ಘಟನೆ ಯಾವುದು? ಮುಂದೆ ಓದಿ....

ಆ ಘಟನೆ ಯಾವುದು?
''ಶರಣ್ ವಿಕ್ಟರಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಅದೇ ವೇಳೆ ನಮಗೆ ಸಿಸಿಎಲ್ ಕಡೆಯಿಂದ ಬ್ಯಾಂಕಾಕ್ ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಒಂದು ಸಾಂಗ್ ಇತ್ತು. ಅದಕ್ಕೆ ನಾನು ಎಲ್ಲ ರೀತಿ ಪ್ಲಾನ್ ಮಾಡಿದ್ದೆ. ಸರಿ ನಾನು ಬ್ಯಾಂಕಾಕ್ ನಿಂದ ವಾಪಸ್ ಬಂದ್ಮೇಲೆ ಮಾಡಿಕೊಡ್ತೀನಿ ಅಂತ ಹೇಳಿದ್ದೆ. ಆದರೆ, ಆ ಸಾಂಗ್ ಗೆ ಬೇರೆ ಪ್ಲಾನ್ ಮಾಡಿದ್ದರು'' - ತರುಣ್ ಸುಧೀರ್
ಶರಣ್ ನಟನೆ ನೋಡಿ 10 ರೂಪಾಯಿ ಕೊಟ್ಟಿದ್ದರಂತೆ ಆ ದಿಗ್ಗಜ ನಟ

ಫೋನ್ ಮಾಡಿದ ಶರಣ್
''ನಾನು ಬ್ಯಾಂಕಾಕ್ ನಲ್ಲಿರುವಾಗ ಶರಣ್ ಫೋನ್ ಮಾಡಿ ''ಇಲ್ಲಿ ಸಾಂಗ್ ಪ್ಲಾನ್ ಮಾಡ್ತಿದ್ದಾರೆ, ಬಹುಶಃ ಇದು ಫಾರೀನ್ ಮಾಡಬಹುದು' ಅಂದ. ಬೇಡ ನಾನು ಬಂದ್ಮೇಲೆ ಮಾಡೋಣ, ಫಾರೀನ್ ಬೇಡ, ಸೆಟ್ ಹಾಕಿ ಮಾಡೋಣ, ಹೇಗಾದರೂ ಮಾಡಿ ನಿಲ್ಲಿಸು ನಾನು ವಾಪಸ್ ಬರೋವರೆಗೂ ಮ್ಯಾನೇಜ್ ಮಾಡು ಎಂದು ಹೇಳಿದೆ. ಸರಿ ಅಂತ ಇಟ್ಟ. ಆದರೆ ಅದು ಆಗಿದ್ದೇ ಬೇರೆ'' - ತರುಣ್ ಸುಧೀರ್

ವಾಪಸ್ ಬಂದ್ಮೇಲೆ ಶಾಕ್ ಆಯ್ತು
''ನಾನು ವಾಪಸ್ ಬಂದ್ಮೇಲೆ ಸಾಂಗ್ ಪ್ಲಾನ್ ಮಾಡೋಣ ಅಂತ ಕೇಳಿದ್ರೆ, ಇಲ್ಲ ಅದೆಲ್ಲ ಪ್ಲಾನ್ ಆಗೋಗಿದೆ. ಫಾರೀನ್ ಹೋಗ್ತಿದ್ದೀವಿ ಅಂದ್ರು. ಶರಣ್ ಏನು ಹೇಳಲ್ವಾ ಎಂದು ಕೇಳಿದ್ದಕ್ಕೆ, ಓಕೆ ಅಂದ್ರು ಎಂದರು. ಆಮೇಲೆ ನಾನು ಶರಣ್ ಗೆ ಫೋನ್ ಮಾಡಿದೆ. ಫೋನ್ ಪಿಕ್ ಮಾಡಿಲ್ಲ. ಒಂದು ವಾರ ಆಯ್ತು ಸುಮ್ಮನಾದೆ. ಆಮೇಲೆ ಶರಣ್ ಫೋನ್ ಮಾಡ್ದ. ನಾನು ಪಿಕ್ ಮಾಡಿಲ್ಲ'' - ತರುಣ್ ಸುಧೀರ್
ಖುಷಿ, ನೋವು, ಕಣ್ಣೀರು ತುಂಬಿದ ಅಧ್ಯಕ್ಷ ಶರಣ್ ಪ್ರೋಮೋ

ನಾಲ್ಕು ವರ್ಷ ಗ್ಯಾಪ್ ಆಯ್ತು
''ಅಲ್ಲಿಂದ ಸಣ್ಣದಾಗಿ ಶುರುವಾದ ಬೇಸರ ಸುಮಾರು ನಾಲ್ಕು ವರ್ಷ ಎಳೆದುಕೊಂಡು ಹೋಯಿತು. ಕಂಪ್ಲೀಟ್ ಆಗಿ ಮಾತು ಬಿಟ್ವಿ. ಆ ಗ್ಯಾಪ್ ನಲ್ಲಿ ಶರಣ್ ನಾಲ್ಕೈದು ಸಿನಿಮಾ ಮಾಡಿದ. ಆದರೆ ಶರಣ್ ಆಯ್ಕೆ ಮಾಡಿಕೊಂಡಿದ್ದ ಕೆಲವು ಚಿತ್ರಗಳು ಸರಿ ಇರಲಿಲ್ಲ. ಆಗ ಶರಣ್ ಕರಿಯರ್ ಶೇಕ್ ಆಯ್ತು ಎಂಬ ಭಾವನೆ ಬಂತು'' - ತರುಣ್ ಸುಧೀರ್

ಒಂದು ದಿನ ಮೆಸೆಜ್ ಮಾಡಿದ
''ಹೀಗೆ ಒಂದು ದಿನ ತರುಣ್ ಸುಧೀರ್, ಶರಣ್ ಗೆ ನಾನು ನಿನ್ನನ್ನು ಭೇಟಿ ಮಾಡಬೇಕು ಎಂದು ಮೆಸೆಜ್ ಬರುತ್ತೆ. ಅಚ್ಚರಿ, ಸರ್ಪ್ರೈಸ್, ಖುಷಿಯಿಂದ ಹುಂ ಅಂತ ಹೋದ್ವಿ. ನಾನು ಅಂದು ಹೆಜ್ಜೆ ಇಡುತ್ತಿದ್ದ ಹಾದಿ ಸರಿ ಇರಲಿಲ್ಲ ಎಂಬುದನ್ನ ಹೇಳಲು ಆತ ಬಂದಿದ್ದ'' ಎಂದು ನಟ ಶರಣ್ ಹೇಳಿದರು. ಅಲ್ಲಿಂದ ಮತ್ತೆ ದೋಸ್ತಿ ಮುಂದುವರಿಸಿದ ಇಬ್ಬರು, ಕೊನೆಗೂ ಆ ಹಾಡು ಯಾವುದು ಎಂದು ಹೇಳಿಲ್ಲ.