Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಗ್ಗೇಶ್ ಹೊಸ ಕಾರು ಎಗರಿಸಿಕೊಂಡು ಹೋಗಿದ್ದರಂತೆ ಖ್ಯಾತ ನಟ
ನಟ ಜಗ್ಗೇಶ್ ಆಗತಾನೆ ಇಂಡಸ್ಟ್ರಿಯಲ್ಲಿ ಯಶಸ್ಸು ಕಾಣುತ್ತಿದ್ದ ಸಮಯ. ಒಂದೊಂದೆ ಹಿಟ್ ಸಿನಿಮಾಗಳನ್ನ ಕೊಡುತ್ತಿದ್ದ ಸಂದರ್ಭ. ಆಗ ಹಳೆಯದೊಂದು ಕಾರು ತೆಗೆದುಕೊಂಡಿದ್ದರಂತೆ. ಆದ್ರೆ, ಅದನ್ನ ಸರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಮಾರಿ ಹೊಸ ಕಾರು ಖರೀದಿ ಮಾಡೋಣ ಎಂಬ ಪ್ಲಾನ್ ಮಾಡುತ್ತಿದ್ದರಂತೆ.
ಅಂತಹ ಸಮಯದಲ್ಲಿ ಜಗ್ಗೇಶ್ ಅವರಿಗೆ 'ಪೊಲೀಸ್ ಫೈಲ್' ಎಂಬ ಸಿನಿಮಾ ಆಫರ್ ಬರುತ್ತೆ. ನಿರ್ಮಾಪಕ ಕೆಸಿಎನ್ ಕುಮಾರ್ ಅವರು ಅಂದು ಜಗ್ಗೇಶ್ ಬಳಿ ಬಂದಾಗ ಸಂಭಾವನೆ ವಿಚಾರವಾಗಿ ಮಾರುತಿ ಕಾರು ಕೊಡಿಸಿ ಎಂದು ಕೇಳಿ ಪಡೆದುಕೊಂಡಿದ್ದರಂತೆ. ಅದೂ ಫೈನಾನ್ಸ್ ನಲ್ಲಿ ತಗೊಂಡಿದ್ದ ಕಾರು ಅದು.
ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!
ಆಗ ಶಶಿ ಕುಮಾರ್ ಮತ್ತು ಜಗ್ಗೇಶ್ 'ಗಂಡ-ಹೆಂಡತಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದರು. ಹೊಸ ಮಾರುತಿ ಕಾರು ಪಡೆದ ಜಗ್ಗೇಶ್ ತನ್ನ ಕಾರಿಗೆ ಶೃಂಗಾರ ಮಾಡಿಸಿ, ಸಿನಿಮಾ ಸೆಟ್ ಗೆ ತಗೊಂಡು ಹೋಗಿದ್ದರಂತೆ. ಅಲ್ಲಿ ಜಗ್ಗೇಶ್ ಅವರ ಹೊಸ ಕಾರನ್ನ ನೋಡಿದ ನಟ ಶಶಿ ಕುಮಾರ್ ಎಗರಿಸಿಕೊಂಡು ಹೋಗಿದ್ದರಂತೆ. ಯಾಕೆ ಎಂಬುದು ತಿಳಿಯಲು ಮುಂದೆ ಓದಿ.....

ಎರಡು ದಿನ ಕಾರು ಪತ್ತೆ ಇಲ್ಲ
'ಗಂಡ ಹೆಂಡತಿ' ಸೆಟ್ ಮಾರುತಿ ಕಾರಿನಲ್ಲಿ ಬಂದ ಶಶಿ ಕುಮಾರ್ ಒಂದು ರೌಂಡು ಹೋಗಿ ಬರುತ್ತೇನೆ ಎಂದು ಹೇಳಿ ಕಾರು ತಗೊಂಡು ಹೋದರಂತೆ. ಎಷ್ಟೇ ಹೊತ್ತು ಆದ್ರೂ ವಾಪಸ್ ಬರಲೇ ಇಲ್ಲವಂತೆ. ಇದರಿಂದ ಗಾಬರಿಗೊಂಡು ಜಗ್ಗೇಶ್ ಬೈದುಕೊಂಡು ಎಲ್ಲಿ ಹೋದಾ ಎಂದು ಯೋಚನೆ ಮಾಡುತ್ತಾ ನಿಂತರಂತೆ. ಎರಡು ದಿನವಾದರೂ ಗೊತ್ತಾಗಲಿಲ್ಲವಂತೆ.

ಆತಂಕಗೊಂಡಿದ್ದರಂತೆ ಜಗ್ಗೇಶ್
ಆಗ ಫೋನ್ ಇರಲಿಲ್ಲ. ಒಂದು ರೌಂಡ್ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಶಶಿ ಕುಮಾರ್ ಪತ್ತೆ ಇಲ್ಲ. ಇದರಿಂದ ಗಾಬರಿಗೊಂಡು ಜಗ್ಗೇಶ್, ನಿರ್ದೇಶಕ ರಾಜ್ ಕಿಶೋರ್ ಅವರಿಗೆ ಸಾರ್ ಹೊಸ ಕಾರು, ಏನೋ ಮಾಡಬಿಟ್ಟ. ಎಲ್ಲೊದ್ನೋ ಹುಡುಕಿಸಿ ಸಾರ್'' ಎಂದು ಕೇಳಿಕೊಂಡಿದ್ದರಂತೆ.
'ಆ ಅಪಘಾತ'ದ ಬಳಿಕ ಶಶಿಕುಮಾರ್ ಎದುರಿಸಿದ ಕಷ್ಟ ಯಾರಿಗೂ ಬೇಡ

ಮೈಸೂರಿನಲ್ಲಿ ಶಶಿ ಕುಮಾರ್ ಪತ್ತೆ
ಜಗ್ಗೇಶ್ ಅವರ ಹೊಸ ಕಾರು ತಗೊಂಡು ನಟ ಶಶಿ ಕುಮಾರ್ ಅವರು ನೇರವಾಗಿ ಮೈಸೂರಿಗೆ ಹೋದರಂತೆ. ಅಲ್ಲಿ ಸಿನಿಮಾದ ಚಿತ್ರೀಕರಣ ಇದ್ದ ಕಾರಣ ಹಾಗೇ ಜಾಲಿಯಾಗಿ ಹೋಗಿಬಿಟ್ಟರಂತೆ. ನಂತರ ಜಗ್ಗೇಶ್ ಅವರಿಗೆಗೆ ಯಾರೋ ಹೇಳಿದ್ರಂತೆ. ಶಶಿ ಕುಮಾರ್ ಮೈಸೂರಿನಲ್ಲಿ ಶೂಟಿಂಗ್ ಮಾಡ್ತಿದ್ದಾರೆ ಅಂತ. ಆಗ ಸ್ವಲ್ಪ ಸಮಾಧಾನವಾದರಂತೆ ಜಗ್ಗೇಶ್.

ವೀಕೆಂಡ್ ವಿತ್ ರಮೇಶ್ ನಲ್ಲಿ ಕಥೆ ಹೇಳಿದ ಶಶಿಕುಮಾರ್
ಈ ಕಥೆಯನ್ನ ಸ್ವತಃ ಜಗ್ಗೇಶ್ ಅವರು 'ಪ್ರೀಮಿಯರ್ ಪದ್ಮಿನಿ' ಚಿತ್ರದ ಪ್ರಚಾರದ ವೇಳೆ ಹೇಳಿಕೊಂಡಿದ್ದರು. ಈಗ ಅದೇ ಕಥೆಯನ್ನ ಶಶಿ ಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.