»   » 'ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!

'ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!

Posted By:
Subscribe to Filmibeat Kannada

'ಟಿವಿ9' ಹಾಗೂ 'ಬಿಟಿವಿ' ನ್ಯೂಸ್ ವಾಹಿನಿಯಲ್ಲಿ 'ಸ್ಟಾರ್ ಆಂಕರ್' ಆಗಿ ಗುರುತಿಸಿಕೊಂಡಿದ್ದ ಶೀತಲ್ ಶೆಟ್ಟಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟು, ಬಿಗ್ ಹವಾ ಕ್ರಿಯೇಟ್ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ.

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಅಂತೂ ಮುಗಿದಿದ್ದು ಆಯ್ತು. ಈಗ ಶೀತಲ್ ಶೆಟ್ಟಿ ಎಲ್ಲಿದ್ದಾರೆ... ಏನ್ ಮಾಡ್ತಿದ್ದಾರೆ.? ಮತ್ತೆ ನ್ಯೂಸ್ ಆಂಕರಿಂಗ್ ಮಾಡ್ತಾರಾ ಎಂಬ ಕುತೂಹಲ ನಿಮಗೆ ಇರಬಹುದು. ಆ ಕುತೂಹಲಕ್ಕೆ ಇಂದು ನಾವು ಬ್ರೇಕ್ ಹಾಕ್ತಿದ್ದೀವಿ... ಶೀತಲ್ ಶೆಟ್ಟಿ ಮುಂದಿನ ನಡೆ ಏನು ಅಂದ್ರೆ....

ಮನರಂಜನಾ ಕಾರ್ಯಕ್ರಮದಲ್ಲಿ ಶೀತಲ್ ಶೆಟ್ಟಿ

ನ್ಯೂಸ್ ಚಾನೆಲ್ ಗಳಲ್ಲಿ ಮಿಂಚಿದ್ದ ಶೀತಲ್ ಶೆಟ್ಟಿ ಈಗ ಮನರಂಜನಾ ವಾಹಿನಿಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ.[ವಿಡಿಯೋ:'ಬಿಗ್ ಬಾಸ್' ಮನೆಯಿಂದ ಹೊರಬಂದ ಶೀತಲ್ ಶೆಟ್ಟಿ ಹೇಳಿದ್ದೇನು?]

ಯಾವ ವಾಹಿನಿಯಲ್ಲಿ.?

ಕಲರ್ಸ್ ಸೂಪರ್ ವಾಹಿನಿಯಲ್ಲಿ ಆಂಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಶೀತಲ್ ಶೆಟ್ಟಿ.!['ಬಿಗ್ ಬಾಸ್' ಸದಸ್ಯರ ಅಸಲಿ ಮುಖಗಳನ್ನ ಬಿಚ್ಚಿಟ್ಟ ಶೀತಲ್ ಶೆಟ್ಟಿ!]

ಯಾವ ಶೋ.?

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಮಜಾ ಭಾರತ್' ಕಾರ್ಯಕ್ರಮಕ್ಕೆ ಶೀತಲ್ ಶೆಟ್ಟಿ ಆಂಕರಿಂಗ್ ಮಾಡಲಿದ್ದಾರೆ.

ಶೀತಲ್ ಶೆಟ್ಟಿ ಜೊತೆ ನಿರಂಜನ್ ದೇಶಪಾಂಡೆ

ಹೊಚ್ಚ ಹೊಸ ಕಾಮಿಡಿ ಕಾರ್ಯಕ್ರಮ 'ಮಜಾ ಭಾರತ್' ನಲ್ಲಿ ಶೀತಲ್ ಶೆಟ್ಟಿ ಜೊತೆ ನಿರಂಜನ್ ದೇಶಪಾಂಡೆ ನಿರೂಪಣೆ ಕೂಡ ಇರಲಿದೆ.

ನಟಿ ಶ್ರುತಿ ಕೂಡ ಇರ್ತಾರೆ.!

ಅಂದ್ಹಾಗೆ, ನಟಿ ಶ್ರುತಿ 'ಮಜಾ ಭಾರತ್' ಕಾರ್ಯಕ್ರಮದ ಜಡ್ಜ್ ಸ್ಥಾನ ಅಲಂಕರಿಸಲಿದ್ದಾರೆ.

English summary
Sheethal Shetty and Niranjan Despande to host 'Maja Bharath' which will be aired in Colors Super Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada