For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ನಡುವೆ ಏನುಂಟು, ಏನಿಲ್ಲ.?

  |

  ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ವಿಜೇತ ಪಟ್ಟ ಕರಾವಳಿ ಕುವರ ಶೈನ್ ಶೆಟ್ಟಿ ಪಾಲಾಗಿದೆ. ವಿನ್ನಿಂಗ್ ಟ್ರೋಫಿ ಜೊತೆಗೆ ದೊಡ್ಮನೆಯಿಂದ ಹೊರಗೆ ಬರುತ್ತಿದ್ದ ಹಾಗೆ, ಶೈನ್ ಶೆಟ್ಟಿಗೆ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ.!

  ಅದೇನಪ್ಪಾ ಅಂದ್ರೆ, ''ನಿಮ್ಮ ಮದುವೆ ಯಾವಾಗ.? ದೀಪಿಕಾ ದಾಸ್ ರನ್ನ ಮದುವೆ ಆಗ್ತೀರಾ.?'' ಅಂತ.!

  ಎಲ್ಲಾ ಕಡೆಯೂ ಇದೇ ಪ್ರಶ್ನೆ ತೂರಿಬರುತ್ತಿರುವುದರಿಂದ, ನಟ ಶೈನ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ''ನನ್ನ ಹಾಗೂ ದೀಪಿಕಾ ದಾಸ್ ನಡುವೆ ಇದ್ದದ್ದು ಬರೀ ಸ್ನೇಹ ಮಾತ್ರ. ನಾವಿಬ್ಬರು ಜಸ್ಟ್ ಫ್ರೆಂಡ್ಸ್'' ಎಂದು ಶೈನ್ ಶೆಟ್ಟಿ ಕ್ಲಾರಿಟಿ ಕೊಟ್ಟಿದ್ದಾರೆ.

  ''ದೀಪಿಕಾ ಹುಡುಗಿಯಾಗಿ ತುಂಬಾ ಸ್ಟ್ರಾಂಗ್. ಅವರು ತುಂಬಾ ಪ್ರಬಲ ಸ್ಪರ್ಧಿ ಕೂಡ ಹೌದು. ನಾನು ದೀಪಿಕಾ ರನ್ನ ಗೌರವಿಸುತ್ತೇನೆ. ನಮ್ಮಿಬ್ಬರ ನಡುವೆ ಅಂಥದ್ದೇನಿಲ್ಲ. ನಾವು ಒಳ್ಳೆ ಗೆಳೆಯರು ಅಷ್ಟೇ'' ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.

  ಅಂದ್ಹಾಗೆ, 'ಬಿಗ್ ಬಾಸ್' ಮನೆಯೊಳಗೆ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ನಡುವೆ ಉತ್ತಮ ಒಡನಾಟ ಇತ್ತು. ಟಾಸ್ಕ್ ಒಂದರಲ್ಲಿ ದೀಪಿಕಾ ದಾಸ್ ಹೇಳಿದ್ದಕ್ಕೆ ಶೈನ್ ಶೆಟ್ಟಿ ಗಡ್ಡ ತೆಗೆದಿದ್ದರು. ಅಲ್ಲಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ದೀಪಿಕಾ ದಾಸ್ ಗೆ ಶೈನ್ ಶೆಟ್ಟಿ ಪ್ರಪೋಸ್ ಕೂಡ ಮಾಡಿದ್ದರು. ಇದರಿಂದ ಇವರಿಬ್ಬರು ಲವ್ ಮಾಡುತ್ತಿದ್ದಾರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಇತ್ತು.

  English summary
  Bigg Boss Kannada 7 Winner Shine Shetty clarifies about his relationship with Deepika Das.
  Wednesday, February 5, 2020, 7:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X