Don't Miss!
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರೂಪಕಿ ಅನುಶ್ರೀಗೆ ಉಡುಗೊರೆ ನೀಡಿದ ಶಿವಣ್ಣ
ಅನುಶ್ರೀ ಕನ್ನಡ ಕಿರುತೆರೆ, ಮನೊರಂಜನಾ ಲೋಕದ ಜನಪ್ರಿಯ ನಿರೂಪಕಿ. ಟಿವಿ ಶೋಗಳು ಮಾತ್ರವಲ್ಲ ಸಿನಿಮಾ ಕಾರ್ಯಕ್ರಮಗಳಿಗೂ ಅನುಶ್ರೀಯ ನಿರೂಪಣೆಗೆ ಬಹಳ ಬೇಡಿಕೆ. ಅನುಶ್ರೀ ಇದ್ದರೆ ಕಾರ್ಯಕ್ರಮ ಕಳೆಕಟ್ಟುತ್ತದೆಂಬ ನಂಬಿಕೆ ಸಿನಿಮಾ ಮಂದಿಗೆ. ನಟಿ, ನೃತ್ಯಗಾರ್ತಿ ಆಗಿರುವ ಅನುಶ್ರೀಗೆ ಕಾರ್ಯಕ್ರಮ ನಿರೂಪಣೆ ಚೆನ್ನಾಗಿ ಕೈ ಹಿಡಿದಿದೆ.
ಅದ್ಭುತ ಮಾತುಗಾತಿಯಾಗಿರುವ ಅನುಶ್ರೀ, ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅಪ್ಪು ಮಾತ್ರವೇ ಅಲ್ಲದೆ ಶಿವರಾಜ್ ಕುಮಾರ್ ಅವರ ಬಗ್ಗೆಯೂ ಬಹಳ ಗೌರವ, ಅಭಿಮಾನವನ್ನು ಅನುಶ್ರೀ ಹೊಂದಿದ್ದಾರೆ.
ದೊಡ್ಮನೆಯ ಸದಸ್ಯರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅನುಶ್ರೀಯನ್ನು ದೊಡ್ಮನೆಯವರು ಸಹ ತಮ್ಮ ಸ್ವಂತದವರಂತೆಯೇ ಕಾಣುತ್ತಾರೆ. ಇದೀಗ ದೊಡ್ಮನೆಯ ಹಿರಿಯ ಸದಸ್ಯ ಶಿವರಾಜ್ ಕುಮಾರ್ ಭಾಗವಹಿಸಿರುವ ಡಿಕೆಡಿ ಶೋ ಅನ್ನು ಅನುಶ್ರೀ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಈ ಶೋನಲ್ಲಿ ನಡೆದಿರುವ ಒಂದು ಆಪ್ತ ಘಟನೆಯ ವಿಡಿಯೋವನ್ನು ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಜಾಕೆಟ್ ಉಡುಗೊರೆ ನೀಡಿದ ಶಿವರಾಜ್ ಕುಮಾರ್
ಸ್ಟೈಲಿಷ್ ನಟ ಶಿವಣ್ಣ, ಅದ್ಭುತವಾದ ಜಾಕೆಟ್ ಒಂದನ್ನು ಧರಿಸಿ ಡಿಕೆಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಣ್ಣರ ಜಾಕೆಟ್ ನೋಡಿದ ಅನುಶ್ರೀ, ''ಶಿವಣ್ಣ ನೀವು ಧರಿಸಿರುವ ಜಾಕೆಟ್ ಬಹಳ ಚೆನ್ನಾಗಿದೆ'' ಎಂದಿದ್ದಾರೆ. ಅದಕ್ಕೆ ಶಿವಣ್ಣ 'ಸರಿ ಕಣಮ್ಮ ಶೋ ಮುಗಿದ ಮೇಲೆ ಈ ಜಾಕೆಟ್ ನಿನಗೆ ಕೊಟ್ಟು ಹೋಗುತ್ತೇನೆ'' ಎಂದಿದ್ದಾರೆ. ಆದರೆ ಈ ಮಾತನ್ನು ತಮಾಷೆಯಾಗಿ ಶಿವಣ್ಣ ಹೇಳಿದ್ದಾರೆ ಎಂದುಕೊಂಡಿದ್ದರಂತೆ ಅನುಶ್ರೀ, ಆದರೆ ಶಿವಣ್ಣ, ನೆನಪಿಟ್ಟುಕೊಂಡು ಆ ಜಾಕೆಟ್ ಅನ್ನು ಅನುಶ್ರೀಗೆ ನೀಡಿದ್ದಾರೆ.

ಪ್ರೀತಿ ಹಂಚಿದ ಕೈಗಳು ಅದು: ಅನುಶ್ರೀ
ಅನುಶ್ರೀಗೆ ಇಷ್ಟವಾದ ಜಾಕೆಟ್ ಮೇಲೆ ಶಿವರಾಜ್ ಕುಮಾರ್, ''ಪ್ರೀತಿಪೂರ್ವಕವಾಗಿ ಪ್ರೀತಿಯ ಗೆಳತಿ ಅನುಶ್ರೀಗೆ'' ಎಂದು ಬರೆದು ತಮ್ಮ ಜಾಕೆಟ್ ಅನ್ನು ತಾವೇ ಕೈಯಾರೆ ಅನುಶ್ರೀಗೆ ತೊಡಿಸಿದ್ದಾರೆ. ಇದರಿಂದ ಬಹಳ ಖುಷಿಯಾಗಿರುವ ಅನುಶ್ರೀ, ಶಿವಣ್ಣರ ಕೈಹಿಡಿದು ಧನ್ಯವಾದ ಅರ್ಪಿಸಿದ್ದಾರೆ. ''ಇದು ಯಾವ ಜನ್ಮದ ಪುಣ್ಯ, ಕಳೆದ ವಾರ dkd ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ, ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು, ನಾನು ಸುಮ್ನೆ ಹೇಳಿರ್ತಾರೆ ಅನ್ಕೊಂಡೆ, ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ, ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅದು'' ಎಂದು ಬರೆದುಕೊಂಡಿದ್ದಾರೆ ಅನುಶ್ರೀ.

ಜಾಕೆಟ್ ಮೇಲೆ ಸಹಿ ಹಾಕಿ ಕೊಟ್ಟ ಶಿವಣ್ಣ
''ಹೊರಡುವ ಮುನ್ನ .... ಜಾಕೆಟ್ ಬಿಚ್ಚಿ ಅದರ ಮೇಲೆ "With lots of love to dearest friend Anu" ಅಂತ ಬರೆದು ಸಹಿ ಹಾಕಿ, ತಮ್ಮ ಕಯ್ಯಾರೆ ಜಾಕೆಟ್ ತೊಡಿಸಿ. ಮತ್ತೊಮ್ಮೆ ಮಮತೆ ಮೆರೆದ ಮುತ್ತಣ್ಣ. ಧನ್ಯವಾದ ಶಿವಣ್ಣ, ಅಣ್ಣ ನಿಮ್ಮ ರೂಪದಲ್ಲಿ ಪರಮಾತ್ಮನನ್ನು ಕಾಣುತ್ತಿದ್ದೇವೆ'' ಎಂದಿದ್ದಾರೆ ಅನುಶ್ರೀ. ಶಿವಣ್ಣ ಬಿಳಿ ಬಣ್ಣದ, ಗೋಲ್ಡನ್ ವರ್ಕ್ ಇರುವ ಸ್ಟೈಲಿಷ್ ಆದ ಜಾಕೆಟ್ ಅನ್ನು ಅನುಶ್ರೀಗೆ ಉಡುಗೊರೆಯಾಗಿ ನೀಡಿದ್ದಾರೆ. ಶಿವಣ್ಣ ಕೊಟ್ಟ ಜಾಕೆಟ್ ಅನ್ನು ಜತನದಿಂದ ಕಾಯ್ದುಕೊಳ್ಳಲಿದ್ದಾರೆ ಅನುಶ್ರೀ.

ಯೂಟ್ಯೂಬ್ ಚಾನೆಲ್ ತೆರೆದಿರುವ ಅನುಶ್ರೀ
ನಿರೂಪಕಿ ಅನುಶ್ರೀ ಪುನೀತ್ ರಾಜ್‌ಕುಮಾರ್‌ರ ದೊಡ್ಡ ಅಭಿಮಾನಿ. ಪುನೀತ್ ರಾಜ್‌ಕುಮಾರ್ ಅಗಲಿದಾಗ ತೀವ್ರ ಆಘಾತಕ್ಕೆ ಒಳಗಾಗಿದ್ದರು ಅನುಶ್ರೀ. ಉತ್ತಮ ನಟಿಯೂ ಆಗಿರುವ ಅನುಶ್ರೀ, ನಟನೆಗಿಂತಲೂ ನಿರೂಪಣೆ ಬಗ್ಗೆಯೂ ಪೂರ್ಣ ಗಮನವಹಿಸಿದ್ದಾರೆ. ಇದರ ನಡುವೆ 'ಆಂಕರ್ ಅನುಶ್ರೀ' ಹೆಸರಿನ ಯೂಟ್ಯೂಬ್ ಚಾನೆಲ್ ಸಹ ತೆರೆದಿದ್ದು ಸೆಲೆಬ್ರಿಟಿಗಳ ಸಂದರ್ಶನವನ್ನು ಮಾಡಿ ಅಪ್‌ಲೋಡ್ ಮಾಡುತ್ತಿದ್ದಾರೆ.