»   » ಹೆಂಗಳೆಯರ ಮನಗೆದ್ದ ಶ್ರುತಿಯ ಚಿತ್ತ ಈಗ ತಮಿಳರ ಮೇಲೆ

ಹೆಂಗಳೆಯರ ಮನಗೆದ್ದ ಶ್ರುತಿಯ ಚಿತ್ತ ಈಗ ತಮಿಳರ ಮೇಲೆ

Posted By:
Subscribe to Filmibeat Kannada
Shruthi moved to Sun TV
ಬೆಳ್ಳಿಪರದೆ ಮೇಲೆ ಮಿಂಚಿದವರೆಲ್ಲ ಒಬ್ಬರ ಹಿಂದೊಬ್ಬರು ಕಿರುತೆರೆಗೆ ನಡೆದು ಹೋಗುತ್ತಿದ್ದಾರೆ. ಸಿನಿಮಾ ನಂಬಿಕೊಂಡರೆ ತಿಂಗಳಿಗೋ, ಮೂರು ತಿಂಗಳಿಗೋ ಕೆಲಸ. ಅದೇ ಕಿರುತೆರೆಗೆ ಕಾಲಿಟ್ಟರೆ ರಾಜ ಮರ್ಯಾದೆ ಜೊತೆಗೆ ತಿಂಗಳಲ್ಲಿ ಇಪ್ಪತ್ತು ದಿನ ಕೆಲಸ, ಕೈತುಂಬಾ ಸಂಭಾವನೆ.

ಇದು ಗೊತ್ತಾಗುತ್ತಿದ್ದಂತೆ ಅನೇಕ ಕಲಾವಿದರು ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ಶ್ರುತಿ ಸರದಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ ಬೆರಳಣಿಕೆ ನಟಿಮಣಿಯರಲ್ಲಿ ಶ್ರುತಿ ಕೂಡಾ ಒಬ್ಬರು.

ತಮ್ಮ ಅಳುಮುಂಜಿ ಪಾತ್ರಗಳಿಂದಲೇ ನಾಡಿನಾದ್ಯಂತ ಹೆಂಗಳೆಯರ ಮನಗೆದ್ದ ಶ್ರುತಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಈಗಲೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ.
ಅವರ ಸಹೋದರ ಶರಣ್ ನಿರ್ಮಾಣದ Rambo ಚಿತ್ರದಲ್ಲಿ ಶ್ರುತಿ ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಇತ್ತೀಚಿನ ಉದಾಹರಣೆ.

ಆ ಚಿತ್ರ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಸನ್ ಟಿವಿಯಲ್ಲಿ ಪ್ರಸಾರ ಕಾಣಲಿರುವ 'ಕಾರ್ತಿಗೈ ಪೆಣ್ಣಳ್' ಧಾರಾವಾಹಿಗಾಗಿ ಶ್ರುತಿ ಇದೇ ಮೊಟ್ಟ ಮೊದಲಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ.

ಜುಲೈ ಮೂವತ್ತನೇ ತಾರೀಕಿನಿಂದ ಸನ್ ಟಿವಿಯಲ್ಲಿ ಈ ಧಾರವಾಹಿ ಈಗಾಗಲೇ ಪ್ರಸಾರ ಆರಂಭವಾಗಿದೆ. ಶ್ರುತಿ ತಮಿಳರಿಗೆ ಅಪರಿಚಿತ ಮುಖವೇನಲ್ಲ. ಈ ಹಿಂದೆ ಕೆ ಬಾಲಚಂದರ್ ನಿರ್ದೇಶನದ ಕಲ್ಕಿ ಚಿತ್ರಕ್ಕಾಗಿ ಶ್ರುತಿ ತಮಿಳಿಗೆ ವಲಸೆ ಹೋಗಿದ್ದರು.

ಅದರಲ್ಲಿನ ಪಾತ್ರ ಶ್ರುತಿಗೆ ತಮಿಳುನಾಡಿನಾದ್ಯಂತ ಜನಪ್ರಿಯತೆ ತಂದು ಕೊಟ್ಟಿತ್ತು ಅಲ್ಲದೆ ಆಕೆಗೆ ತಮಿಳುನಾಡು ರಾಜ್ಯ ಸರಕಾರದ ಅವಾರ್ಡ್ ಕೂಡಾ ಬಂದಿತ್ತು. ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ಶ್ರುತಿ ತಮಿಳು ಪ್ರೇಕ್ಷಕರಿಗೆ ಎದುರಾಗುತ್ತಿದ್ದಾರೆ.

English summary
Prominent Kannada actress Shruthi moved to Television serial of Sun TV, 'Kartigai Pengal'.
Please Wait while comments are loading...