For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಪ್ರೇಯಸಿ ಶೆಹನಾಜ್

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನದಿಂದ ಪ್ರೇಯಸಿ ಶೆಹನಾಜ್ ಗಿಲ್ ಕಂಗೆಟ್ಟಿದ್ದಾರೆ. ತನ್ನ ಮಡಿಲಲ್ಲೇ ಸಿದ್ಧಾರ್ಥ್ ಪ್ರಾಣ ಬಿಟ್ಟಿರುವುದನ್ನು ಶೆಹನಾಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳೆಯ ಸಿದ್ಧಾರ್ಥ್ ನನ್ನು ಕಳೆದುಕೊಂಡು ಶೆಹನಾಜ್ ಸಂಪೂರ್ಣವಾಗಿ ಕುಸಿದುಹೋಗಿದ್ದಾರೆ.

  ಶೆಹನಾಜ್ ಪರಿಸ್ಥಿತಿ ನೋಡಿ ನೆಟ್ಟಿಗರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ಅಂತಿಮ ವಿಧಿವಿಧಾನದ ವೇಳೆ ಶೆಹನಾಜ್ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿದ್ಧಾರ್ಥ್ ನಿವಾಸದಿಂದ ಪಾರ್ಥಿವ ಶರೀರ ಹೊರಡುವಾಗ ಮನೆಯಿಂದ ಹೊರ ಬಂದ ಶೆಹನಾಜ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೋರಾಗಿ ಅಳುತ್ತಿರುವ ಶೆಹನಾಜ್ ನನ್ನು ಸಹೋದರ ಜೊತೆಯಲ್ಲಿ ಇದ್ದು ಸಮಾಧಾನ ಪಡಿಸುತ್ತಿದ್ದಾರೆ. ಮನೆಯಿಂದ ಹೊರಟು ಅಂತ್ಯಕ್ರಿಯೆ ಮುಗಿಸುವವರೆಗೂ ಶೆಹನಾಜ್ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.

  ಸಿದ್ಧಾರ್ಥ್ ಸಾಯುವ ಕೊನೆ ಕ್ಷಣ ಏನಾಯ್ತು?

  ಸಿದ್ಧಾರ್ಥ್ ಸಾಯುವ ಕೊನೆ ಕ್ಷಣ ಏನಾಯ್ತು?

  ಮೂಲಗಳ ಪ್ರಕಾರ, ಸಿದ್ಧಾರ್ಥ್ ಸಾಯುವ ಕೊೆನೆಯ ಕ್ಷಣದಲ್ಲಿ ಶೆಹನಾಜ್ ಗಿಲ್ ಜೊತೆಯಲ್ಲೇ ಇದ್ದರು, ಪ್ರೇಯಸಿಯ ಮಡಿಲಲ್ಲೇ ಸಿದ್ಧಾರ್ಥ್ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬುಧವಾರ (ಸೆಪ್ಟೆಂಬರ್ 01) ರಾತ್ರಿ 9.30ಕ್ಕೆ ಸಿದ್ದಾರ್ಥ್​ ಶುಕ್ಲಾ ಅವರು ಮನೆಗೆ ಬಂದಿದ್ದರು. ಆಗಲೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಊಟ ಬೇಡ ಎಂದ ಸಿದ್ಧಾರ್ಥ್ ಗೆ ತಾಯಿ ಮತ್ತು ಗೆಳತಿ ಶೆಹನಾಜ್​ ಗಿಲ್ ಸಿದ್ಧಾರ್ಥ್ ಗೆ ನಿಂಬು ಪಾನಿ ಮತ್ತು ಐಸ್​ಕ್ರೀಮ್ ನೀಡಿದರು. ಬಳಿಕ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿದರು ಎಂಬ ಮಾಹಿತಿ ಕೇಳಿಬಂದಿದೆ.

  ಪ್ರೇಯಸಿಯ ಮಡಿಲಲ್ಲೇ ಪ್ರಾಣ ಬಿಟ್ಟ ಸಿದ್ಧಾರ್ಥ್

  ಪ್ರೇಯಸಿಯ ಮಡಿಲಲ್ಲೇ ಪ್ರಾಣ ಬಿಟ್ಟ ಸಿದ್ಧಾರ್ಥ್

  ರಾತ್ರಿ ತುಂಬಾ ಸಮಯವಾದರೂ ನಿದ್ದೆ ಬಂದಿಲ್ಲ ಎಂದು ಸಿದ್ಧಾರ್ಥ್ ತಮ್ಮ ಜೊತೆಯೇ ಇರುವಂತೆ ಗೆಳತಿ ಶೆಹನಾಜ್ ನನ್ನು ಕೇಳಿಕೊಂಡರು. ಮಧ್ಯ ರಾತ್ರಿ 1.30ರ ಸುಮಾರಿಗೂ ಶೆಹನಾಜ್​ ಮಡಿಲ ಮೇಲೆ ಸಿದ್ದಾರ್ಥ್​ ನಿದ್ರಿಸಿದರು. ಬಳಿಕ ಸಿದ್ಧಾರ್ಥ್ ನನ್ನು ಪಕ್ಕಕ್ಕೆ ಸರಿಸಿ ಶೆಹನಾಜ್​ ಕೂಡ ಮಲಗಿದರು. ಬೆಳಗ್ಗೆ 7.30ರ ಸುಮಾರಿಗೆ ಶೆಹನಾಜ್​ಗೆ ಎಚ್ಚರವಾಗಿ ನೋಡಿದಾಗ ಸಿದ್ದಾರ್ಥ್ ​ರಾತ್ರಿ ನಿದ್ರಿಸುತ್ತಿದ್ದ ಹಾಗೆ ಮಲಗಿದ್ದರು. ಯಾವುದೇ ರೀತಿ ಚಲನೆ ಇಲ್ಲದಿರುವುದನ್ನು ನೋಡಿ ಶೆಹನಾಜ್ ಶಾಕ್ ಆದರು.

  ಸಿದ್ಧಾರ್ಥ್ ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ

  ಬಳಿಕ ಸಿದ್ಧಾರ್ಥ್ ಕುಟುಂಬದವರಿಗೆ ಶೆಹನಾಜ್ ​ಸುದ್ದಿ ತಿಳಿಸಿದರು. ಕೂಡಲೇ ಫ್ಯಾಮಿಲಿ ಡಾಕ್ಟರ್‌ರನ್ನು ಕರೆಸಿ ನೋಡಿದಾಗ ಸಿದ್ದಾರ್ಥ್​ನಿಧನರಾಗಿದ್ದಾರೆ ಎಂದು ಹೇಳಿದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಸಿದ್ಧಾರ್ಥ್ ಇನ್ನಿಲ್ಲ ಎನ್ನುವುದನ್ನು ಶೆಹನಾಜ್ ಗೆ ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಸದಾ ಜೊತೆಯಲ್ಲೇ ಇರುತ್ತಿದ್ದ ಗೆಳೆಯ ಇನ್ನಿಲ್ಲ ಎನ್ನುವುದನ್ನು ಶೆಹನಾಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  ಬಿಕ್ಕಿ ಬಿಕ್ಕಿ ಅಳುತ್ತಿರುವ ಶೆಹನಾಜ್

  ಬಿಕ್ಕಿ ಬಿಕ್ಕಿ ಅಳುತ್ತಿರುವ ಶೆಹನಾಜ್ ಸ್ಥಿತಿ ನೋಡಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ಸಿದ್ಧಾರ್ಥ್ ಸಾವಿನ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇಂದು ಮಧ್ಯಾಹ್ನ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ನೆರವೇರಿದೆ. ಕಿರುತೆರೆಯಲ್ಲಿ ಮೆರೆದು, ಬಿಗ್ ಬಾಸ್ 13 ಗೆದ್ದು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದ ಸಿದ್ಧಾರ್ಥ್ ಇನ್ನು ನೆನಪು ಮಾತ್ರ.

  ಬಿಗ್ ಬಾಸ್ ನಲ್ಲಿ ಸಿದ್ಧಾರ್ಥ್ ಗೆ ಶೆಹನಾಜ್ ಪರಿಚಯ

  ಬಿಗ್ ಬಾಸ್ ನಲ್ಲಿ ಸಿದ್ಧಾರ್ಥ್ ಗೆ ಶೆಹನಾಜ್ ಪರಿಚಯ

  ಸಿದ್ಧಾರ್ಥ್ ಮತ್ತು ಶೆಹನಾಜ್ ಸ್ನೇಹ ಪ್ರಾರಂಭವಾಗಿದ್ದು ಬಿಗ್ ಬಾಸ್ 13 ಶೋನಿಂದ. ಬಿಗ್ ಬಾಸ್ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸ್ನೇಹಿತರರಾಗಿದ್ದರು, ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಭಿಮಾನಿಗಳು ಈ ಜೋಡಿಯನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು. ಇದೀಗ ಗೆಳೆಯನನ್ನು ಕಳೆದುಕೊಂಡು ಶೆಹನಾಜ್ ಒಂಟಿಯಾಗಿದ್ದಾರೆ.

  English summary
  Sidharth Shukla death: Rumored Girlfriend Shehnaaz Gill breaks down during Sidharth Shukla's funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X