»   » ಅನೀಶ್ - ಸಿಂಧು ಲೋಕನಾಥ್ ಮಧ್ಯೆ ಇರುವ ಗಾಸಿಪ್ ಗೆ ಕ್ಲಾರಿಟಿ ಸಿಕ್ತು

ಅನೀಶ್ - ಸಿಂಧು ಲೋಕನಾಥ್ ಮಧ್ಯೆ ಇರುವ ಗಾಸಿಪ್ ಗೆ ಕ್ಲಾರಿಟಿ ಸಿಕ್ತು

Posted By:
Subscribe to Filmibeat Kannada

ನಟ ಅನೀಶ್ ಮತ್ತು ಸಿಂಧು ಲೋಕನಾಥ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಗಾಸಿಪ್ ವರ್ಷಗಳಿಂದಲೇ ಹರಿದಾಡುತ್ತಿದೆ. ಅಲ್ಲದೆ ಇವರಿಬ್ಬರು ಲವ್ ಮಾಡುತ್ತಿದ್ದು, ಮದುವೆ ಆಗುತ್ತಾರೆ ಅಂತ ಆಗಾಗ ಗಾಂಧಿನಗರದಿಂದ ನ್ಯೂಸ್ ಬರುತ್ತಾನೆ ಇತ್ತು.

ಸದ್ಯ ಸಿಂಧು ಲೋಕನಾಥ್ ತಮ್ಮ ಮತ್ತು ನಟ ಅನೀಶ್ ಬಗ್ಗೆ ಹಬ್ಬಿರುವ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಅನೀಶ್ ಮತ್ತು ಅವರ ಬಗ್ಗೆ ಇದ್ದ ಎಲ್ಲ ಸುದ್ದಿ ಗಳಿಗೆ ಉತ್ತರಿಸಿದ್ದಾರೆ. ಮುಂದೆ ಓದಿ....

ಸಿಂಧು ಸುಮ್ಮನಿದ್ದಾರಂದ್ರೆ ಕೆಲಸ ಇಲ್ಲ ಅಂತ ಅರ್ಥ ಅಲ್ಲ!

ಸಿಂಧು ಉತ್ತರ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಂಧು ಲೋಕನಾಥ್ ತಮ್ಮ ಬಗ್ಗೆ ಇರುವ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ.

ಸುದ್ದಿ ಇದೆ

''ಇಂದಿಗೂ ಚಿತ್ರರಂಗದಲ್ಲಿ ಅನೇಕರು ಅನೀಶ್ ಮತ್ತೆ ನಾನು ಡೇಟಿಂಗ್ ಮಾಡುತ್ತಿದ್ದೇವೆ ಎಂದುಕೊಂಡಿದ್ದಾರೆ. ಆದರೆ ಅದೆಲ್ಲ ಗಾಸಿಪ್ ಅಷ್ಟೇ'' - ಸಿಂಧು ಲೋಕನಾಥ್, ನಟಿ

ಮುದ್ದು 'ರಾಕ್ಷಸಿ' ಸಿಂಧುಗೆ ಅಭಿಮಾನಿಯೊಬ್ಬನ ಸ್ವೀಟ್ ಗಿಫ್ಟ್

ಜನ ಇಷ್ಟ ಪಟ್ಟಿದ್ದಾರೆ

''ನಾನು-ಅನೀಶ್ ಒಟ್ಟಿಗೆ ಕೆರಿಯರ್ ಶುರು ಮಾಡಿದ್ವಿ. ನಮ್ಮ ಆನ್ ಸ್ಕ್ರೀನ್ ಕೆಮಿಸ್ಟ್ರಿ ಜನರಿಗೆ ಇಷ್ಟ ಆಗಿ ಬ್ಯಾಗ್ ಟು ಬ್ಯಾಗ್ ಸಿನಿಮಾಗಳು ಸಿಕ್ಕಿತ್ತು'' - ಸಿಂಧು ಲೋಕನಾಥ್, ನಟಿ

ಡೇಟಿಂಗ್ ಮಾಡುತ್ತಿದ್ದೇನೆ

''ನಾನು ಡೇಟಿಂಗ್ ಮಾಡುತ್ತಿರುವುದು ನಿಜ. ಆದರೆ ಆ ಹುಡುಗ ಸಿನಿಮಾರಂಗಕ್ಕೆ ಸಂಬಂಧ ಪಟ್ಟವರಲ್ಲ'' - ಸಿಂಧು ಲೋಕನಾಥ್, ನಟಿ

ಯಶ್ ಬದ್ಲು ಅನೀಶ್ 'ಮಾಂಜಾ' ಕೊಡ್ತಾರಂತೆ.!

ಐದು ಚಿತ್ರಗಳಲ್ಲಿ ಒಟ್ಟಿಗೆ ನಟನೆ

ಅನೀಶ್ ಮತ್ತು ಸಿಂಧು ಲೋಕನಾಥ್ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನೀಶ್ ಅವರ ಎರಡು ಚಿತ್ರಗಳಲ್ಲಿ ಸಿಂಧು ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.

'ಅಕಿರ' ಚಿತ್ರದಲ್ಲಿ

ಅನೀಶ್ ನಟನೆಯ 'ಅಕಿರ' ಸಿನಿಮಾದ ಒಂದು ಚಿಕ್ಕ ಪಾತ್ರದಲ್ಲಿ ಸಿಂಧು ನಟಿಸಿದ್ದು, ಸದ್ಯಕ್ಕೆ ಇಬ್ಬರು ತಮ್ಮ ತಮ್ಮ ಚಿತ್ರದಲ್ಲಿ ಬಿಜಿ ಇದ್ದಾರೆ.

ನಾಲ್ಕು ತಿಂಗಳಲ್ಲಿ ನಾಲ್ಕೇ ಸಲ ಊಟ ಮಾಡಿದ್ರಂತೆ ಅನಿಶ್

English summary
Kannada Actress 'Sindhu Loknath' gave clarity about her love life in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada