For Quick Alerts
  ALLOW NOTIFICATIONS  
  For Daily Alerts

  ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಹಿಂದಿನ ಅಸಲಿ ಸಂಗತಿ

  |

  ಕಿರುತೆರೆ ವಾಹಿನಿಗಳಲ್ಲಿ ಸಿಂಗಿಂಗ್ ರಿಯಾಲಿಟಿ ಶೋಗಳು ಹೆಚ್ಚಾಗುತ್ತಿವೆ. ಎಲ್ಲ ವಾಹಿನಿಗಳು ಗಾಯನದ ಕಾರ್ಯಕ್ರಮಗಳನ್ನು ಜನರ ಮುಂದೆ ಇಡುತ್ತಿವೆ. ಇಡೀ ರಾಜ್ಯದಲ್ಲಿ ಆಡಿಷನ್ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ.

  ಯಾವುದೇ ರಿಯಾಲಿಟಿ ಶೋ ಆಗಿರಲಿ ಸ್ಪರ್ಧಿಗಳು ಬಹಳ ಮುಖ್ಯ. ವೀಕ್ಷಕರನ್ನು ಸೆಳೆಯುವ, ವಾಹಿನಿಗೆ ಹೊಸ ವೀಕ್ಷಕರನ್ನು ತಂದುಕೊಡುವ ಶಕ್ತಿ ಸ್ಪರ್ಧಿಗಳಿಗೆ ಇರಬೇಕು. ಹೀಗಾಗಿ ಅವರ ಆಯ್ಕೆಯನ್ನು ವಾಹಿನಿ ಯೋಚನೆ ಮಾಡಿ ಮಾಡುತ್ತದೆ.

  TRPಯಲ್ಲಿ 'ಜೊತೆ ಜೊತೆಯಲಿ' ಹಿಂದಿಕ್ಕಿ ಮತ್ತೆ ನಂಬರ್ 1 ಆದ 'ಮಂಗಳ ಗೌರಿ ಮದುವೆ'TRPಯಲ್ಲಿ 'ಜೊತೆ ಜೊತೆಯಲಿ' ಹಿಂದಿಕ್ಕಿ ಮತ್ತೆ ನಂಬರ್ 1 ಆದ 'ಮಂಗಳ ಗೌರಿ ಮದುವೆ'

  ಸಿಂಗಿಂಗ್ ರಿಯಾಲಿಟಿ ಶೋ ಎಂದ ಮೇಲೆ ಸ್ಪರ್ಧಿಯನ್ನು ಆತನ ಗಾಯನ ನೋಡಿ ಮಾತ್ರ ಆಯ್ಕೆ ಮಾಡಬೇಕು. ಆದರೆ, ಬರೀ ಚೆನ್ನಾಗಿ ಹಾಡುವ ಗಾಯಕರು ಮಾತ್ರ ಕಾರ್ಯಕ್ರಮದಲ್ಲಿ ಇದ್ದರೆ, ಅದರಿಂದ ವಾಹಿನಿಗೆ ಹೆಚ್ಚು ಉಪಯೋಗ ಆಗುವುದಿಲ್ಲ.

  TRP ಎಂಬ ಮಾಯಾಲೋಕದೊಳಗೆ ವಾಹಿನಿಗಳ 'ದತ್ತುಪುತ್ರ' ಹನುಮಂತTRP ಎಂಬ ಮಾಯಾಲೋಕದೊಳಗೆ ವಾಹಿನಿಗಳ 'ದತ್ತುಪುತ್ರ' ಹನುಮಂತ

  ರಿಯಾಲಿಟಿ ಶೋಗಳಲ್ಲಿ ಗಾಯನದ ಜೊತೆಗೆ ಸ್ಪರ್ಧಿಯ ಹಿನ್ನಲೆ ಬಹಳ ಮುಖ್ಯವಾಗುತ್ತದೆ. ಸ್ಪರ್ಧಿಯ ಹಿನ್ನಲೆ, ಅವರ ಉದ್ಯೋಗ ಇವುಗಳ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬುವ ಪ್ರಯತ್ನ ಮಾಡಲಾಗುತ್ತದೆ.

  ಆಡಿಷನ್ ಮಾಡುವ ಮೊದಲೇ ಸ್ಪರ್ಧಿಗಳ ನಿರ್ಧಾರ

  ಆಡಿಷನ್ ಮಾಡುವ ಮೊದಲೇ ಸ್ಪರ್ಧಿಗಳ ನಿರ್ಧಾರ

  ಸಿಂಗಿಂಗ್ ರಿಯಾಲಿಟಿ ಶೋಗೆ ಆಡಿಷನ್ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಆಡಿಷನ್ ಆಗುವ ಮೊದಲೇ ಆಯೋಜಕರು ಸ್ಪರ್ಧಿಗಳ ಬಗ್ಗೆ ನಿರ್ಧಾರ ಮಾಡಿರುತ್ತಾರೆ. 16 ಸ್ಪರ್ಧಿಗಳು ಇದ್ದರೆ, ಅದರಲ್ಲಿ ಒಬ್ಬ ಟಾಪ್ ಸಿಂಗರ್, ಒಬ್ಬ ಬಡ ಕುಟುಂಬದ ಹುಡುಗ, ಒಬ್ಬ ಹಿರಿ ವಯಸ್ಸಿನ ಸ್ಪರ್ಧಿ, ಒಬ್ಬ ಅಂಗವಿಕಲ ಸ್ಪರ್ಧಿ ಹೀಗೆ ಪ್ಲಾನ್ ರೆಡಿ ಇರುತ್ತದೆ. ಅದಕ್ಕೆ ತಕ್ಕ ಹಾಗೆ ಆಡಿಷನ್ ನಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

  ಗಾಯಕ ಮುಖ್ಯ ಆದರೆ, ಅವರ ಹಿನ್ನಲೆ ಬಹಳ ಮುಖ್ಯ

  ಗಾಯಕ ಮುಖ್ಯ ಆದರೆ, ಅವರ ಹಿನ್ನಲೆ ಬಹಳ ಮುಖ್ಯ

  ಒಬ್ಬ ಸ್ಪರ್ಧಿಯನ್ನು ಆಯ್ಕೆ ಮಾಡುವಾಗ ಅವರ ಹಾಡಿನ ಜೊತೆಗೆ ಹಿನ್ನಲೆಯನ್ನು ನೋಡುತ್ತಾರೆ. ಆತನ ಕುಟುಂಬದ ಪರಿಸ್ಥಿತಿ, ಆರ್ಥಿಕ ಸ್ಥಿತಿ, ಆತನ ವೃತ್ತಿ ಎಲ್ಲವೂ ಆಯ್ಕೆ ಪ್ರಕ್ರಿಯೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಸಾಧಾರಣವಾಗಿ ಹಾಡು ಕೇಳಿದರೂ, ಆತನ ಹಿನ್ನಲೆ ಇಂಟ್ರೆಸ್ಟಿಂಗ್ ಎನಿಸಿದ್ದಾರೆ ಅಂತಹ ಸ್ಪರ್ಧಿಗೆ ಅದೃಷ್ಟ ಖುಲಾಯಿಸುತ್ತದೆ.

  ಸಂಗೀತ ಕಾರ್ಯಕ್ರಮದಲ್ಲಿ ಎಲ್ಲವೂ ಇರಬೇಕು

  ಸಂಗೀತ ಕಾರ್ಯಕ್ರಮದಲ್ಲಿ ಎಲ್ಲವೂ ಇರಬೇಕು

  ಗಾಯನದ ಕಾರ್ಯಕ್ರಮ ಆಗಿದ್ದರೂ, ಇಲ್ಲಿ ಉಳಿದ ಅಂಶಗಳು ಇರಬೇಕು. ಅಳು, ನಗು, ತರಲೆ, ತಮಾಷೆಯ ಅಂಶಗಳು ತುಂಬಿಕೊಂಡಿರಬೇಕು. ಹೀಗಾಗಿ ಇದಕ್ಕೆ ತಕ್ಕ ಹಾಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅಂತಹ ವಿಷಯಗಳ ಮೂಲಕ ವೀಕ್ಷಕರನ್ನು ಹಿಡಿದಿರುವ ಪ್ರಯತ್ನ ನಡೆಯುತ್ತದೆ. ಹೀಗಾಗಿ ಸ್ಪರ್ಧಿಯ ಹಿನ್ನಲೆ ಶೋಗೆ 'ಕಂಟೆಂಟ್' ಆಗುತ್ತದೆ.

  ಸ್ಕಿಪ್ಟ್ ಮೂಲಕ ಭಾವನಾತ್ಮಕ ಸಂದರ್ಭಗಳು

  ಸ್ಕಿಪ್ಟ್ ಮೂಲಕ ಭಾವನಾತ್ಮಕ ಸಂದರ್ಭಗಳು

  ಕಾರ್ಯಕ್ರಮದಲ್ಲಿ ಅನೇಕ ಬಾರಿ ಇದು ಹೀಗೆ ನಡೆಯಬೇಕು ಎನ್ನುವುದು ನಿರ್ಧಾರ ಆಗಿರುತ್ತದೆ. ಸ್ಕಿಪ್ಟ್ ಮೂಲಕ ಭಾವನಾತ್ಮಕ ಸಂದರ್ಭಗಳನ್ನು ಕಟ್ಟಿಕೊಡುತ್ತಾರೆ. ನೋಡುಗರಿಗೆ ಸಹಜವಾಗಿದೆ ಎನಿಸಿದರೂ, ಸ್ಪರ್ಧಿಗಳ ಅಳು ಆಯೋಜಕರ ಪೂರ್ವನಿಯೋಜನೆಯಂತೆ ನಡೆಯುತ್ತದೆ.

  ಪ್ರತಿಭಾವಂತರಿಗೆ ಅನ್ಯಾಯ ಆಗುತ್ತದೆ

  ಪ್ರತಿಭಾವಂತರಿಗೆ ಅನ್ಯಾಯ ಆಗುತ್ತದೆ

  ವಾಹಿನಿ ಒಂದು ಕಡೆ ತಮ್ಮ ಕಾರ್ಯಕ್ರಮವನ್ನು ಇನ್ನಷ್ಟು, ಚೆಂದವಾಗಿ, ಇನ್ನಷ್ಟು ಇಂಟ್ರೆಸ್ಟಿಂಗ್ ಆಗಿ ಮಾಡುವ ದೃಷ್ಟಿಯಿಂದ ಸ್ಪರ್ಧಿಗಳ ಆಯ್ಕೆಯನ್ನು ಮಾಡುತ್ತದೆ. ಆದರೆ, ಇದರಿಂದ ನಿಜವಾಗಿಯೂ ಪ್ರತಿಭಾವಂತ ಗಾಯಕರಿಗೆ ಅನ್ಯಾಯ ಆಗುತ್ತದೆ. ಒಳ್ಳೆಯ ಹಾಡುಗಾರರಾಗಲು ಶ್ರಮಪಡುವವರು ವೇದಿಕೆಯಿಂದ ವಂಚಿತವಾಗುತ್ತಾರೆ.

  English summary
  Special story about singing show selection process.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X