For Quick Alerts
  ALLOW NOTIFICATIONS  
  For Daily Alerts

  'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಶಾರ್ವರಿ ಯಾರು ಗೊತ್ತಾ..?

  By ಪ್ರಿಯಾ ದೊರೆ
  |

  'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಇರುವ ಪಾತ್ರಗಳು ಕೂಡ ಅದ್ಭುತವಾಗಿವೆ. ಈ ಧಾರಾವಾಹಿಯಲ್ಲಿ ಎರಡು ಪ್ರಮುಖ ಕುಟುಂಬಗಳಿವೆ. ಒಂದು ಮಧ್ಯಮ ವರ್ಗದ ಕುಟುಂಬವಾದರೆ, ಮತ್ತೊಂದು ಕುಟುಂಬ ಶ್ರೀಮಂತವಾಗಿರುತ್ತದೆ.

  ಶ್ರೀಮಂತ ಕುಟುಂಬದಲ್ಲಿ ಮಾಧವ್, ಅವಿ, ಶಾರ್ವರಿ, ಪೂರ್ಣಿ ಸೇರಿದಂತೆ ಹಲವರು ಇದ್ದಾರೆ. ಅಣ್ಣ-ತಮ್ಮ ಒಂದೇ ಮನೆಯಲ್ಲಿದ್ದು, ಅಪಘಾತವೊಂದರಲ್ಲಿ ಮಾಧವ್ ಹೆಂಡತಿ ತೀರಿಕೊಂಡಿರುತ್ತಾರೆ. ಮಾಧವ್ ಸಹೋದರ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿಡುತ್ತಾರೆ.

  ಕನ್ನಡ ಸೀರಿಯಲ್‌ನಲ್ಲಿ ಯಾವ ಧಾರಾವಾಹಿ ಟಾಪ್‌ನಲ್ಲಿದೆಕನ್ನಡ ಸೀರಿಯಲ್‌ನಲ್ಲಿ ಯಾವ ಧಾರಾವಾಹಿ ಟಾಪ್‌ನಲ್ಲಿದೆ

  ಇದರಿಂದ ಅವರ ಪತ್ನಿ ಶಾರ್ವರಿ ದ್ವೇಷ ಸಾಧಿಸುತ್ತಿರುತ್ತಾಳೆ. ಮಾಧವ್ ಕುಟುಂಬ ನೆಮ್ಮದಿಯಾಗಿ ಇರಬಾರದು. ನನ್ನ ಸಂಸಾರವನ್ನು ಹಾಳು ಮಾಡಿದವರು ಎಂದು ವಿಷ ಕಾರುತ್ತಿರುತ್ತಾಳೆ.

  ತಂದೆ ಮೇಲೆ ಮಕ್ಕಳಲ್ಲೇ ವಿರೋಧ

  ತಂದೆ ಮೇಲೆ ಮಕ್ಕಳಲ್ಲೇ ವಿರೋಧ

  ಮಾಧವ್‌ಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ನಿಮ್ಮ ತಂದೆಯೇ ನಿಮ್ಮ ತಾಯಿಯನ್ನು ಕೊಂದಿದ್ದು, ಎಂದು ದ್ವೇಷದಿಂದಲೇ ಬೆಳೆಸಿರುತ್ತಾಳೆ. ಹಾಗಾಗಿ ಮಾಧವ್ ಮಕ್ಕಳು ಅವರ ತಂದೆಗೆ ಗೌರವ ಕೊಡುವುದಿಲ್ಲ. ಆದರೆ, ಮಾಧವ್ ದೊಡ್ಡ ಮಗನ ಪತ್ನಿ ಪೂರ್ಣಿಮಾಳಿಗೆ ಮಾವ ಎಂದರೆ ತುಂಬಾ ಪ್ರೀತಿ. ಇತ್ತ ಮಧ್ಯಮ ವರ್ಗದ ಕುಟುಂಬದಲ್ಲಿ ತುಳಸಿ, ದತ್ತ, ಸಮರ್ಥ್ ಹಾಗೂ ಸಿರಿ ಪಾತ್ರಗಳು ಪ್ರಮುಖವಾಗಿವೆ. ತುಳಸಿ ನಾಯಕಿಯಾಗಿದ್ದು, ಮಾಧವ್ ಧಾರಾವಾಹಿಯ ನಾಯಕ. ಇನ್ನು ಶಾರ್ವರಿ ಪ್ರಮುಖ ವಿಲನ್ ಪಾತ್ರ. ನಟಿ ಸುಧಾರಾಣಿ ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಅಜಿತ್ ಹಂದೆ ನಾಯಕ ಮಾಧವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಟಿ ನೇತ್ರಾ ಜಾಧವ್ ಎಂಬುವರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  'ರಥಸಪ್ತಮಿ' ಧಾರಾವಾಹಿ ನಟಿ

  'ರಥಸಪ್ತಮಿ' ಧಾರಾವಾಹಿ ನಟಿ

  ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನೇತ್ರಾ ಜಾಧವ್ ಅವರು ನಟಿಸಿದ್ದಾರೆ. ಆದರೆ, ಯಾವುದು ಒಳ್ಳೆಯ ಬ್ರೇಕ್ ನೀಡಿಲ್ಲ. ನೇತ್ರಾ ಜಾಧವ್ ಅವರು ಕ್ಯಾಮರಾ ಎದುರು ಬಂದಿರುವುದು ಇದೇ ಮೊದಲೇನಲ್ಲ. ಹತ್ತು ವರ್ಷದ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ 'ರಥ ಸಪ್ತಮಿ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲೂ ಸುಧಾರಾಣಿ, ಜ್ಯೋತಿ ರೈ, ಜಯಶ್ರೀ ಸೇರಿದಂತೆ ಹಲವು ನಟಿಯರು ನಟಿಸಿದ್ದರು. ಇದರಲ್ಲಿ ನೇತ್ರಾ ಜಾಧವ್ ಕೂಡ ಅದ್ಭುತವಾಗಿ ನಟಿಸಿದ್ದರು. ಇದಾದ ಬಳಿಕ 'ಸುಂದರಿ', 'ಸಾಗುತ ದೂರ ದೂರ' ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 'ಆಕೃತಿ' ಎಂಬ ಹಾರರ್ ಧಾರಾವಾಹಿಯಲ್ಲೂ ನೇತ್ರಾ ಜಾಧವ್ ಸೌಮ್ಯ ಸ್ವಾಭಾವದ ಪಾತ್ರವನ್ನು ಮಾಡಿದ್ದರು.

  ಇಂದ್ರಸೇನಾ ಪಾತ್ರದಲ್ಲಿ ಮಿಂಚಿದ ನಟಿ

  ಇಂದ್ರಸೇನಾ ಪಾತ್ರದಲ್ಲಿ ಮಿಂಚಿದ ನಟಿ

  ಇನ್ನು ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ಅವರು ನಟಿಸಿದ್ದಾರೆ. ತೆಲುಗು ಧಾರಾವಾಹಿ 'ರಾವೋಯಿ ಚಂದಮಾಮ'ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಅವರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಒಳ್ಳೆಯವರಿಗೆ ಒಳ್ಳೆಯವಳು, ಕೆಟ್ಟವರಿಗೆ ಕೆಟ್ಟವಳು ಎಂಬಂತೆ ನಟಿಸಿದ್ದಾರೆ. ವಿಲನ್ ರೀತಿ ರೌಡಿ ಪಾತ್ರದಲ್ಲಿ ನಟಿಸಿದ್ದಾರೆ.

  ನೇತ್ರಾ ನಟನೆಯನ್ನು ಮೆಚ್ಚಿದ ಪ್ರೇಕ್ಷಕರು

  ನೇತ್ರಾ ನಟನೆಯನ್ನು ಮೆಚ್ಚಿದ ಪ್ರೇಕ್ಷಕರು

  ಇದೀಗ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಶಾರ್ವರಿಯಾಗಿ ಮಿಂಚುತ್ತಿದ್ದಾರೆ. ಎಲ್ಲರ ಮುಂದೆ ಒಳ್ಳೆಯವರಂತೆ ನಟಿಸುತ್ತಾ, ಒಳಗೊಳಗೆ ಪಿತೂರಿ ಮಾಡುವ ಪಾತ್ರ ಇವರದ್ದಾಗಿದೆ. ಇನ್ನು ನೇತ್ರಾ ಜಾಧವ್ ಅವರ ಕಾಸ್ಟ್ಯೂಮ್, ಆಕ್ಟಿಂಗ್ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೇತ್ರಾ ಅವರಿಗೆ ಯಶಸ್ಸನ್ನು ತಂದುಕೊಡಲಿ ಎಂದು ಆಶಿಸೋಣ.

  English summary
  Srirasthu Shubhamasthu Serial Actress Netrajadhav Biography and Career.
  Monday, January 23, 2023, 21:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X