For Quick Alerts
  ALLOW NOTIFICATIONS  
  For Daily Alerts

  Radhe shyam Serial: ರಾಧಾ ಮನೆಗೆ ತಕ್ಕ ಸೊಸೆ ಮಾತ್ರವಲ್ಲ ಭರತನಾಟ್ಯದಲ್ಲೂ ಪ್ರವೀಣೆ..!

  By ಎಸ್ ಸುಮಂತ್
  |

  ಸ್ಟಾರ್ ಸುವರ್ಣಯಲ್ಲಿ 'ರಾಧೆ ಶ್ಯಾಮ' ಅನ್ನೋ ಧಾರಾವಾಹಿ ಬರುತ್ತಿದೆ. ಆ ಧಾರಾವಾಹಿಯಲ್ಲಿ ರಾಧೆ ಉತ್ತಮ ಶಿಕ್ಷಣ ಪಡೆದಿರುವ ಹುಡುಗಿ, ಶ್ಯಾಮ ಶಿಕ್ಷಣದಲ್ಲಿ ವಂಚಿತ. ಆದರೆ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ತನ್ನದೇ ಚಿಕ್ಕದೊಂದು ಬೇಕರಿ ನಡೆಸುತ್ತಿದ್ದಾನೆ. ಇಂತಹ ವಿಭಿನ್ನ ವ್ಯಕ್ತಿತ್ವದ ರಾಧೆ ಮತ್ತು ಶ್ಯಾಮ ಮದುವೆಯಾಗಿದ್ದೆ ಒಂದು ರೋಚಕ ಘಟನೆ.

  ಅಣ್ಣನ ಕುತಂತ್ರದಿಂದ ಈ ಮದುವೆ ಆಗಿದೆ. ಶ್ಯಾಮ್ ತನ್ನಂತೆ ಓದಿರುವವನು ಎಂದುಕೊಂಡು ಮದುವೆಯಾದ ರಾಧೆಗೆ ಸತ್ಯ ತಿಳಿದು ಎಷ್ಟು ಶಾಕ್ ಆಯಿತೋ, ಶ್ಯಾಮನಿಗೂ ನನ್ನ ಹೆಂಡತಿ ಕೂಡ ಓದಿಲ್ಲ ಎಂದುಕೊಂಡು ಮದುವೆಯಾಗಿದ್ದನ್ನು ನೆನೆದು ಡಬ್ಬಲ್ ಶಾಕ್ ಆಗಿತ್ತು. ಆದರೆ ಈಗ ಇದೆಲ್ಲವೂ ಹಳೆಯ ಘಟನಾವಳಿಗಳಾಗಿ ಸುಖ ಸಂತೋಷದಲ್ಲಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಹಮ್ಮು ಬಿಮ್ಮು ಇಲ್ಲದೆ ಪಕ್ಕಾ ಹೌಸ್ ವೈಫ್ ತರ ವರ್ತಿಸುತ್ತಿರೋ ರಾಧೆ ನಿಜ ಜೀವನದಲ್ಲಿ ಅದೆಷ್ಟು ವಿಭಿನ್ನ ಗೊತ್ತಾ..? ಆ ವಿಚಾರ ತಿಳಿದುಕೊಳ್ಳಲು ಮುಂದೆ ಓದಿ.

  Maayamruga Serial: 'ಮಾಯಾಮೃಗ' ಟೀಂ ನಿಮ್ಮ ಮುಂದೆ ಹಾಜರ್ ಆಗಿದ್ಯಾಕೆ?Maayamruga Serial: 'ಮಾಯಾಮೃಗ' ಟೀಂ ನಿಮ್ಮ ಮುಂದೆ ಹಾಜರ್ ಆಗಿದ್ಯಾಕೆ?

  ತನ್ವಿ ನಿಜ ಜೀವನವೇ ಬೇರೆ

  ತನ್ವಿ ನಿಜ ಜೀವನವೇ ಬೇರೆ

  ಕೆಲವೊಮ್ಮೆ ಧಾರಾವಾಹಿ ಅಥವಾ ಸಿನಿಮಾ ಯಾವುದರಲ್ಲೇ ಆಗಲಿ ಕೆಲವೊಬ್ಬರಿಗೆ ತಾವಿರುವಂತ ಪಾತ್ರಗಳೆ ಅರಸಿ ಬರುತ್ತವೆ. ಅಂದರೆ ವೈಯಕ್ತಿಕ ಜೀವನದಲ್ಲಿ ಯಾವ ರೀತಿ ಇರುತ್ತಾರೋ ಪಾತ್ರದಲ್ಲೂ ಅದೇ ರೀತಿಯ ಹೋಲಿಕೆ ಇರುತ್ತೆ. ಇನ್ನು ಕೆಲವರಿಗೆ ಅದಕ್ಕೆ ತದ್ವಿರುದ್ಧವಾದ ಪಾತ್ರಗಳು ಸಿಗುತ್ತವೆ. ನಿಜ ಜೀವನದಲ್ಲಿ ಸೈಲೆಂಟ್ ಆಗಿರುವವರಿಗೆ ನಟನೆಯಲ್ಲಿ ವೈಲೆಂಟ್ ಪಾತ್ರಗಳು ಸಿಕ್ಕಂತೆ. ಈಗ ರಾಧಾ ಅಲಿಯಾಸ್ ತನ್ವಿಗೂ ಅದೇ ಆಗಿರುವುದು. ತನ್ವಿ ರಾವ್ ಧಾರಾವಾಹಿಯಲ್ಲಿ ಪಕ್ಕಾ ಹೋಂ ಮಿನಿಸ್ಟರ್ ರೀತಿಯ ರೋಲ್ ಪ್ಲೇ ಮಾಡುತ್ತಿದ್ದಾರೆ. ಮನೆ, ಗಂಡ, ಸಂಸಾರ, ಅತ್ತೆಯನ್ನು ಒಪ್ಪಿಸುವುದು, ಮನೆಗೆ ತಕ್ಕ ಸೊಸೆ ಎಂಬುದನ್ನು ಪ್ರೂವ್ ಮಾಡುವ ಭರದಲ್ಲಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಸುಟ್ಟು ಕರಕಲು ಮಾಡಿಕೊಂಡಿದ್ದಾರೆ. ಆದರೆ ತನ್ವಿ ರಿಯಲ್ ಲೈಫ್‌ನಲ್ಲಿ ತುಂಬಾ ಜಾಲಿ ಹುಡುಗಿ. ಯಾವಾಗಲೂ ನಗುಮುಖದ ಈ ಚೆಲುವೆ. ಸ್ನೇಹಿತೆ ಜೊತೆಗೂಡಿ ಸದಾ ಡಾನ್ಸ್ ಮಾಡುತ್ತಲೇ ಇರುತ್ತಾರೆ.

  ತನ್ವಿಗೆ ಪ್ರೀತಿ ಕಶ್ಯಪ್ ಸಾಥ್

  ಡಾನ್ಸ್ ಕ್ರೇಜ್ ಇರುವವರು, ಆಕ್ಟಿಂಗ್ ಕ್ರೇಜ್ ಇರುವವರು ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಟ ನಟಿಯರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ತಮ್ಮ ಟ್ಯಾಲೆಂಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಕಾಮನ್. ಇದೀಗ ರಾಧೆ ಅಲಿಯಾಸ್ ತನ್ವಿ ಕೂಡ ಸಿಕ್ಕಾಪಟ್ಟೆ ಕ್ರೇಜಿಯಾಗಿ ಡಾನ್ಸ್ ಮಾಡಿ ತೋರಿಸಿದ್ದಾರೆ. ರೀಲ್ಸ್ ನಲ್ಲಿ ಇವರಿಗೆ ಜೊತೆಯಾಗಿರುವುದು ಪ್ರೀತಿ ಕಶ್ಯಪ್. ವೆರೈಟಿ ವೆರೈಟಿ ಡಾನ್ಸ್ ಅನ್ನು ಪ್ರೀತಿ ಕಶ್ಯಪ್ ಜೊತೆಗೆ ರಾಧೆ ಮಾಡಿರುವುದನ್ನು ಕಾಣಬಹುದು. ಹೂ ಅಂಟಾವಾ ಮಾಮಾ ಹೂಹೂ ಅಂಟಾವಾ ಹಾಡಿಗೆ ಇವರಿಬ್ಬರೂ ಭರ್ಜರಿಯಾಗಿ ಸೊಂಟ ಕುಣಿಸಿದ್ದಾರೆ.

  ತನ್ವಿ ಭರತನಾಟ್ಯದಲ್ಲಿ ಸಿಕ್ಕಾಪಟ್ಟೆ ಮಿಂಚಿಂಗ್

  ತನ್ವಿ ಭರತ ನಾಟ್ಯದಲ್ಲಿ ಪ್ರವೀಣೆ ಅನ್ನೋದು ಇವರ ಇನ್‌ಸ್ಟಾಗ್ರಾಂ ನೋಡಿದರೆನೇ ಗೊತ್ತಾಗುತ್ತೆ. ಸಾಕಷ್ಟು ಭರತನಾಟ್ಯ ಮಾಡಿರುವ ಫೋಟೊಗಳನ್ನು ತನ್ವಿ ಹಂಚಿಕೊಂಡಿದ್ದಾರೆ. ಅದರಲ್ಲೂ ಕೊಳಲ ಕೃಷ್ಣನ ವೇಷವನ್ನು ಶೇರ್ ಮಾಡಿಕೊಂಡಿದ್ದಾರೆ. ನಮ್ಮ ಸುತ್ತಲೂ ವಾಸಿಸುವ ಮತ್ತು ಉಸಿರಾಡುವ ಎಲ್ಲವೂ ಒಂದೇ ಬೆಳಕಿನಿಂದ ರಚಿಸಲ್ಪಟ್ಟಿದೆ ಮತ್ತು ಅದೇ ಕತ್ತಲೆಯಾಗಿ ಬದಲಾಗುತ್ತದೆ. ನಾವೆಲ್ಲರೂ ಈ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತೇವೆ. ಆದರೆ ನೀವು ಮತ್ತು ನಾನು ಅದರ ಎದೆಯ ಮೇಲೆ ಅಜಾಗರೂಕತೆಯಿಂದ ಹೆಜ್ಜೆ ಹಾಕುತ್ತೇವೆ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

  ತನ್ವಿಗೆ ನಾಟಕ ಇಷ್ಟ

  ತನ್ವಿ ಕೇವಲ ಭರತನಾಟ್ಯ, ಡಾನ್ಸ್ ಅಷ್ಟೇ ಅಲ್ಲ ನಾಟಕದಲ್ಲೂ ಸಕ್ರೀಯವಾಗಿರುತ್ತಾರೆ. ತನ್ವಿ ರಂಗಪ್ರವೇಶ ಮಾಡಿದ್ದು 14 ವರ್ಷಗಳ ಹಿಂದೆ. ಅಂದಿನಿಂದ ಇಲ್ಲಿವರೆಗೂ ಸಾಕಷ್ಟು ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಅವರಿಗೆ ರವೀಂದ್ರನಾಥ ಟ್ಯಾಗೋರ್ ಅವರ "ಅತಿಥಿ" ತುಂಬಾ ಇಷ್ಟವಾದದ್ದು. ಆ ಬಗ್ಗೆ ಹೀಗೆ ಬರೆದುಕೊಳ್ಳುತ್ತಾರೆ. ನನ್ನ ಅತ್ಯಂತ ನೆಚ್ಚಿನ ಪ್ರೇಮಕಥೆಗಳಲ್ಲಿ ಒಂದಾಗಿದೆ. ಪ್ರೀತಿ ಎಂಬ ಸಂಕೀರ್ಣತೆಯನ್ನು ಇಷ್ಟು ಸರಳತೆಯಲ್ಲಿ ಅವರು ಹೇಗೆ ನೀಡುತ್ತಾರೆ ಎಂದು ನಾನು ಆಗಾಗ್ಗೆ ಆಶ್ಚರ್ಯ ಪಡುತ್ತೇನೆ. ಅದು ಅವನೊಳಗೆ ಬಹಳ ಆಳವಾದ ಯಾವುದೋ ಒಂದು ವೈಯಕ್ತಿಕ ಪ್ರತಿಬಿಂಬವಾಗಿರಬೇಕು. ಈ ನಾಟಕವು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಇಲ್ಲಿ ನಾನು ಚಾರು ಪಾತ್ರದಲ್ಲಿ ನಟಿಸಿದ್ದೇನೆ. ಮೊದಲ ಬಾರಿಗೆ ಪ್ರೀತಿಯನ್ನು ಹುಡುಕುವ ಮತ್ತು ಕಳೆದುಕೊಳ್ಳುವ ಈ ಎರಡು ಪಾತ್ರಗಳ ನಿಷ್ಕಪಟತೆಯು ನಿಮಗೆ ನೋವಿನ ನಗುವನ್ನು ನೀಡುತ್ತದೆ ಎಂದಿದ್ದಾರೆ.

  English summary
  Star Suvarna Serial Radhe Shyam Written Update on Radhe Extra Talent. Here is the Details About Radha is a Good Bharath Natya Dancer.
  Tuesday, April 5, 2022, 21:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X