ಮಾರ್ಚ್ 24ರಿಂದ ಈಟಿವಿ ಕನ್ನಡದಲ್ಲಿ ಬಿಗ್ ಬಾಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಕಾರ್ಯಕ್ರಮದ ನಿರೂಪಕರು. ಇದೇ ಮಾರ್ಚ್ 24ರಿಂದ ಈಟಿವಿ ಕನ್ನಡದಲ್ಲಿ ರಾತ್ರಿ 8ಕ್ಕೆ ಪ್ರತಿದಿನ ಬಿಗ್ ಬಾಸ್ ಶೋ ಕಣ್ತುಂಬಿಕೊಳ್ಳಬಹುದು. ಪುಣೆಯ ಲೋನಾವಾಲಾ ಸೆಟ್ಸ್ ನಲ್ಲಿ ನೂರು ದಿನಗಳ ಕಾಲ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಸೆಲೆಬ್ರಿಟಿಗಳ ನಡುವೆ ಬಿರುಸಿನ ಸ್ಪರ್ಧೆ ನಡೆಯಲಿದೆ.
ಕಡೆಯವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದವರೇ ಬಿಗ್ ಬಾಸ್. ಇಪ್ಪತ್ತನಾಲ್ಕು ಗಂಟೆಗಳ ಕಾಲ ಬಿಗ್ ಬಾಸ್ ಮನೆಯಲ್ಲಿರುವವರ ಚಲನವಲನಗಳು ರೆಕಾರ್ಡ್ ಆಗುತ್ತವೆ. ಶುಕ್ರವಾರ ಮತ್ತು ಶನಿವಾರ ಮಾತ್ರ ಸುದೀಪ್ ಇರುತ್ತಾರೆ. ಭಾನುವಾರಗಳಂದು ಎಕ್ಸ್ ಕ್ಲೂಸೀವ್ ದೃಶ್ಯಗಳು ಪ್ರಸಾರ ಮಾಡಲಾಗುತ್ತದೆ.
ಒಟ್ಟು ಹದಿಮೂರು ಮಂದಿ ಈ ಕಾರ್ಯಕ್ರಮದ ಸ್ಪರ್ಧಿಗಳು. ಒಂದು ಮನೆ ಎಂದ ಮೇಲೆ ಜಗಳ, ಮನಸ್ತಾಪ ಇದ್ದೇ ಇರುತ್ತದಲ್ಲಾ. ಅದೇ ರೀತಿ ಬಿಗ್ ಬಾಸ್ ನಲ್ಲೂ ನಡೆಯುತ್ತದೆ. ಈ ಕಾರ್ಯಕ್ರಮ ಸ್ಕ್ರಿಪ್ಟೆಡ್ ಅಲ್ಲ ಎಂದು ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು.
ರಾಜಕಾರಣಿಗಳೆಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಬಿಜಿಯಾಗಿರುವುದರಿಂದ ಶೋನಲ್ಲಿ ಅವರ್ಯಾರು ಇರುವುದಿಲ್ಲ. ಆದರೆ ಕೆಲವರನ್ನು ಅನಿರೀಕ್ಷಿತವಾಗಿ ಶೋಗೆ ಕರೆತರುವ ಉದ್ದೇಶ ಇದೆ ಎಂದಿದ್ದಾರೆ ಈಟಿವಿ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ್ ಗುಂಡ್ಕಲ್.
ಇಷ್ಟಕ್ಕೂ ಈ ಬಾರಿ ಶೋನಲ್ಲಿ ಪಾಲ್ಗೊಳ್ಳಲಿರುವ ಸಂಭಾವ್ಯರ ಪಟ್ಟಿಯಲ್ಲಿ ನರ್ಸ್ ಜಯಲಕ್ಷ್ಮಿ, ಬ್ರಹ್ಮಾಂಡ ಜ್ಯೋತಿಷಿ ನರೇಂದ್ರಬಾಬು ಶರ್ಮಾ, ನಿಖಿತಾ ತುಕ್ರಲ್, ನಟರಾದ ವಿಜಯ ರಾಘವೇಂದ್ರ, ವಿನಾಯಕ ಜೋಷಿ, ಧರ್ಮ, ತಿಲಕ್, ಶೋಭಾರಾಜ್, ವನಿತಾವಾಸು, ಭಾವನಾ ಮುಂತಾದವರಿರುತ್ತಾರೆ. (ಏಜೆನ್ಸೀಸ್)


Click it and Unblock the Notifications











