»   » ಸುದೀಪ್ ಗೆ ಗೌರವ ಕೊಡದ ಸಂಯುಕ್ತ ಹೆಗ್ಡೆ ವಿರುದ್ಧ ಕಿಚ್ಚನ ಫ್ಯಾನ್ಸ್ ಆಕ್ರೋಶ.!

ಸುದೀಪ್ ಗೆ ಗೌರವ ಕೊಡದ ಸಂಯುಕ್ತ ಹೆಗ್ಡೆ ವಿರುದ್ಧ ಕಿಚ್ಚನ ಫ್ಯಾನ್ಸ್ ಆಕ್ರೋಶ.!

Posted By:
Subscribe to Filmibeat Kannada
ಸಂಯುಕ್ತ ಹೆಗ್ಡೆ ಮೇಲೆ ಗರಂ ಆದ ಕಿಚ್ಚ ಅಭಿಮಾನಿಗಳು | Filmibeat Kannada

ಯಾವಾಗ, ಎಲ್ಲಿ, ಯಾರ ಜೊತೆ, ಯಾರ ಮುಂದೆ, ಹೇಗೆ ಮಾತನಾಡಬೇಕು ಅಂತ ಗೊತ್ತಿಲ್ಲದೆ ಹೋದರೆ ಎಡವಟ್ಟು ಆಗೋದು ಗ್ಯಾರೆಂಟಿ. ಸದ್ಯ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ ಇಕ್ಕಟ್ಟಿಗೆ ಸಿಲುಕಿರುವುದು ಇದೇ ಕಾರಣಕ್ಕೆ.!

ನಟಿ ಸಂಯುಕ್ತ ಹೆಗ್ಡೆ 'ಕಿರಿಕ್ ಪಾರ್ಟಿ' ಅಂತ ಸಿನಿಮಾ ಮಾಡಿದ್ದೇ ಮಾಡಿದ್ದು... 'ಕಿರಿಕ್'ಗೂ ನಟಿ ಸಂಯುಕ್ತ ಹೆಗ್ಡೆ ರವರಿಗೂ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿದೆ.

ಕಿಚ್ಚ ಸುದೀಪ್ ಅಡುಗೆ ಮನೆಯಲ್ಲಿ ಕಾಣಿಸಿದ ಕಿರಿಕ್ ಚೆಲುವೆ ಸಂಯುಕ್ತ ಹೆಗ್ಡೆ

ಡೇಟ್ಸ್ ವಿಚಾರವಾಗಿ ಈ ಹಿಂದೆ ವಿವಾದಕ್ಕೀಡಾಗಿದ್ದ ನಟಿ ಸಂಯುಕ್ತ ಹೆಗ್ಡೆ ಮೇಲೆ ಈಗ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಸುದೀಪ್ ರವರಿಗೆ 'ಗೌರವ ಕೊಟ್ಟಿಲ್ಲ' ಎಂಬ ಕಾರಣದಿಂದ ನಟಿ ಸಂಯುಕ್ತ ಹೆಗ್ಡೆ ಇದೀಗ ವಿವಾದದ ಕೇಂದ್ರ ಬಿಂದು. ಮುಂದೆ ಓದಿರಿ...

'ಕಿಚ್ಚನ್ ಟೈಮ್' ನಲ್ಲಿ ಸಂಯುಕ್ತ ಹೆಗ್ಡೆ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್' ಬದಲು 'ಕಿಚ್ಚನ್ ಟೈಮ್' ಪ್ರಸಾರ ಅಗುತ್ತಿದೆ. 'ಕಿಚ್ಚನ್ ಟೈಮ್' ಸಂಚಿಕೆಯ ಮೊದಲ ಅತಿಥಿಯಾಗಿ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ಭಾಗವಹಿಸಿದರು.

ವಿಡಿಯೋ ನೋಡಿ ಕೋಪಿಸಿಕೊಂಡ ಸುದೀಪ್ ಫ್ಯಾನ್ಸ್

'ಕಿಚ್ಚನ್ ಟೈಮ್' ಬಗ್ಗೆ ನಟಿ ಸಂಯುಕ್ತ ಚಿತ್ರೀಕರಿಸಿದ್ದ ಸೆಲ್ಫಿ ವಿಡಿಯೋ ನಿನ್ನೆ 'ಕಲರ್ಸ್ ಸೂಪರ್' ವಾಹಿನಿಯ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಆಗಿತ್ತು. ಆ ವಿಡಿಯೋ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳು ಕೋಪಿಸಿಕೊಂಡಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ವಿಡಿಯೋದಲ್ಲಿ ಸುದೀಪ್ ಗೆ 'ಸರ್' ಎನ್ನದ ಸಂಯುಕ್ತ.!

ಸೆಲ್ಫಿ ವಿಡಿಯೋದಲ್ಲಿ ಕಿಚ್ಚ ಸುದೀಪ್ ರವರಿಗೆ ಸಂಯುಕ್ತ 'ಸರ್' ಎಂದು ಕರೆಯಲಿಲ್ಲ. ಹೀಗಾಗಿ ದೊಡ್ಡ ನಟನಿಗೆ ಸಂಯುಕ್ತ ಗೌರವ ನೀಡಲಿಲ್ಲ ಎಂದು ಸುದೀಪ್ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.

ಮೊದಲ ಗೌರವ ಕೊಡಲಿ

''ದೊಡ್ಡವರಿಗೆ ಮೊದಲು ಗೌರವ ಕೊಡು, ಆಮೇಲೆ ಅಡುಗೆ ಮಾಡುವಂತೆ'' ಎಂದು ಸುದೀಪ್ ಅಭಿಮಾನಿಗಳು 'ಕಲರ್ಸ್ ಸೂಪರ್' ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡಿದ್ದಾರೆ.

ಸಾಲು ಸಾಲು ಕಾಮೆಂಟ್ಸ್ ಇವೆ

ಸುದೀಪ್ ಗೆ 'ಸರ್' ಅಂತ ಕರೆಯಲಿಲ್ಲ ಎಂಬ ಕಾರಣಕ್ಕೆ ಸುದೀಪ್ ಫ್ಯಾನ್ಸ್ ಎಷ್ಟು ಗರಂ ಆಗಿದ್ದಾರೆ ಎಂಬುದಕ್ಕೆ ಈ ಕಾಮೆಂಟ್ಸ್ ಸಾಕ್ಷಿ.

ಕೊಡ್ರೋ ಮಚ್ಚು

'ಮಜಾ ಟಾಕೀಸ್' ಸೃಜನ್ ಲೋಕೇಶ್ ಸ್ಟೈಲ್ ನಲ್ಲಿ ಸುದೀಪ್ ಆಭಿಮಾನಿಗಳು ಸಂಯುಕ್ತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಹೀಗೆ...

ಸಂಚಿಕೆಯಲ್ಲಿ 'ಸರ್' ಅಂತ ಹೇಳಿದ್ದಾರೆ

ನಿನ್ನೆ ರಾತ್ರಿ ಪ್ರಸಾರವಾದ ಸಂಚಿಕೆಯಲ್ಲಿ ನಟಿ ಸಂಯುಕ್ತ ಹೆಗ್ಡೆ, ಸುದೀಪ್ ರವರಿಗೆ 'ಸರ್' ಎನ್ನುತ್ತಲೇ ಮಾತನಾಡಿಸಿದ್ದಾರೆ. ಹೀಗಾಗಿ, ಮೊದಲು ಗರಂ ಆಗಿದ್ದ ಸುದೀಪ್ ಫ್ಯಾನ್ಸ್ ನಂತರ ತಣ್ಣಗಾದರು.

English summary
Kiccha Sudeep fans annoyed with Kannada Actress Samyuktha Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada