»   » 'ಬಿಗ್ ಬಾಸ್' ಫಲಿತಾಂಶದಲ್ಲಿ ಸುದೀಪ್ 'ಕೈ'ಗಳ ಪವಾಡ

'ಬಿಗ್ ಬಾಸ್' ಫಲಿತಾಂಶದಲ್ಲಿ ಸುದೀಪ್ 'ಕೈ'ಗಳ ಪವಾಡ

Posted By:
Subscribe to Filmibeat Kannada
'ಬಿಗ್ ಬಾಸ್' ಫಲಿತಾಂಶದಲ್ಲಿ ಸುದೀಪ್ 'ಕೈ'ಗಳ ಪವಾಡ | Filmibeat Kannada

'ಬಿಗ್ ಬಾಸ್' ಫೈನಲ್ ಯಾರು ಗೆಲ್ಲಬಹುದು ಎಂಬ ನಿರೀಕ್ಷೆಯ ಜೊತೆ ಸುದೀಪ್ ಅವರ ಮೇಲೆ ಬಹುತೇಕರ ಕಣ್ಣು ಬಿದ್ದಿತ್ತು. ಪ್ರತಿ ಬಾರಿಯೂ ಸುದೀಪ್ ಅವರ ಆಪ್ತರೊಬ್ಬರು ಫಿನಾಲೆಯಲ್ಲಿ ಇದ್ದೇ ಇರುತ್ತಿದ್ದರು. ಈ ಸಲ ಕಾರ್ತಿಕ್ ಜಯರಾಂ ಇದ್ದರು. ಆದ್ರೆ, ಜೆಕೆ, ಬಿಗ್ ಬಾಸ್ ಮನೆಯಲ್ಲೇ ಎಲಿಮಿನೇಟ್ ಆಗಿ, ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ವಿಷ್ಯ ಅದಲ್ಲ. ಬಿಗ್ ಬಾಸ್ ಅಂತಿಮ ಕ್ಷಣದಲ್ಲಿ ಇಬ್ಬರು ಇರ್ತಾರೆ. ಇವರಿಬ್ಬರ ಕೈಗಳನ್ನ ಸುದೀಪ್ ಹಿಡಿದುಕೊಂಡು, ವಿನ್ನರ್ ಯಾರು ಎಂದು ಒಬ್ಬರ ಕೈ ಮೇಲೆ ಎತ್ತಿ ಜಯಶಾಲಿ ಹೆಸರನ್ನ ಘೋಷಣೆ ಮಾಡುತ್ತಾರೆ. ಹೀಗೆ, ನಾಲ್ಕು ವರ್ಷ ಇತಿಹಾಸದಲ್ಲಿ ಸುದೀಪ್ ಅವರ ಎಡ ಭಾಗದಲ್ಲಿದ್ದ ಸ್ಪರ್ಧಿಗಳೇ ಬಿಗ್ ಬಾಸ್ ಗೆದ್ದಿದ್ದಾರೆ. ವಿಜಯರಾಘವೇಂದ್ರ ಹೊರತು ಪಡಿಸಿ.

ಫಿನಾಲೆ ಮುಗಿದ ಕೂಡಲೆ 'ಬಿಗ್ ಬಾಸ್' ಮನೆಯೊಳಗೆ ಗ್ರ್ಯಾಂಡ್ ಪಾರ್ಟಿ.!

ಹೀಗಾಗಿ, ಈ ಬಾರಿಯೂ ಇದೇ ನಿರೀಕ್ಷೆ ಮಾಡಲಾಗಿತ್ತು. ಇದು ಸುದೀಪ್ ಅವರ ಗಮನಕ್ಕೂ ಬಂತು. ಅದಕ್ಕೆ ಯಾವ ಭಾಗದಲ್ಲಿ ನಿಲ್ಲಬೇಕು ಎಂಬ ಆಯ್ಕೆಯನ್ನ ಸ್ವತಃ ಸ್ಪರ್ಧಿಗಳಿಗೆ ಬಿಟ್ಟುಕೊಟ್ಟರು. ಹಾಗಿದ್ರೆ, ಈ ಬಾರಿ ಆಗಿದ್ದೇನು? ಸುದೀಪ್ ಅವರ ಎಡಗೈ ಅದೃಷ್ಟ ಮತ್ತೆ ಪ್ರೂವ್ ಆಯ್ತಾ? ಇದಕ್ಕು ಮುಂಚೆ ಸ್ಪರ್ಧಿಗಳ ಫೈನಲ್ ಹೇಗಿತ್ತು? ಮುಂದೆ ಓದಿ.....

'ಬಿಗ್ ಬಾಸ್ ಕನ್ನಡ 4' ಫಿನಾಲೆ

'ಬಿಗ್ ಬಾಸ್ ಕನ್ನಡ 4' ರಲ್ಲಿ ಗ್ರ್ಯಾಂಡ್ ಫಿನಾಲೆಯಲ್ಲಿ ಕೀರ್ತಿ ಹಾಗೂ ಪ್ರಥಮ್ ಫಿನಾಲೆಯಲ್ಲಿದ್ದರು. ಇಬ್ಬರನ್ನ ವೇದಿಕೆಗೆ ಕರೆತಂದ ಸುದೀಪ್ ವೇದಿಕೆ ಬಲ ಭಾಗದಲ್ಲಿ ಕೀರ್ತಿ, ಎಡ ಭಾಗದಲ್ಲಿ ಪ್ರಥಮ್ ಅವರನ್ನ ನಿಲ್ಲಿಸಿಕೊಂಡರು. ಕೊನೆಗೆ ಸುದೀಪ್ ಎಡಗೈ ಮೇಲುತ್ತುವ ಮೂಲಕ ಪ್ರಥಮ್ ವಿನ್ನರ್ ಎಂದು ಘೋಷಿಸಿಬಿಟ್ಟರು.

'ಬಿಗ್ ಬಾಸ್ ಕನ್ನಡ 3' ಫೈನಲ್

ಬಿಗ್ ಬಾಸ್ ಕನ್ನಡ-3ನೇ ಆವೃತ್ತಿಯಲ್ಲೂ ಇದು ಸಾಬೀತಾಗಿದೆ. ಶೃತಿ ಮತ್ತು ಚಂದನ್ ಫಿನಾಲೆ ತಲುಪಿದ್ದರು. ಅಲ್ಲಿಯೂ ಸುದೀಪ್ ಅವರ ಬಲ ಭಾಗದಲ್ಲಿ ಚಂದನ್ ಹಾಗೂ ಎಡ ಭಾಗದಲ್ಲಿ ಶೃತಿ ನಿಂತಿದ್ದರು. ಕಾಕತಾಳೀಯ ಅಂದ್ರೆ, ಮೂರನೇ ಸೀಸನ್ ನಲ್ಲೂ ಸುದೀಪ್ ಅವರ ಎಡಗೈ ಮೇಲುತ್ತುವ ಮೂಲಕ ಶೃತಿ ವಿನ್ನರ್ ಎಂದು ಘೋಷಿಸಿದರು.

'ಬಿಗ್ ಬಾಸ್ ಕನ್ನಡ 2'

'ಬಿಗ್ ಬಾಸ್ ಕನ್ನಡ' ಸೀಸನ್ 3ರಲ್ಲಿ ಸೃಜನ್ ಲೋಕೇಶ್ ಹಾಗೂ ಅಕುಲ್ ಬಾಲಾಜಿ ಫಿನಾಲೆಗೆ ಬಂದಿದ್ದರು. ಸುದೀಪ್ ಅವರ ಬಲ ಭಾಗದಲ್ಲಿ ಸೃಜನ್ ಲೋಕೇಶ್ ಹಾಗೂ ಎಡ ಭಾಗದಲ್ಲಿ ಅಕುಲ್ ಬಾಲಾಜಿ ನಿಂತಿದ್ದರು. ಆಗಲೂ ಎಡಗೈ ಮೇಲಿತ್ತಿದ ಸುದೀಪ್, ಅಕುಲ್ ಬಾಲಾಜಿ ಅವವರನ್ನ ಜಯಶಾಲಿ ಎಂದು ಘೋಷಿಸಿದರು.

ಮೊದಲ ಬಿಗ್ ಬಾಸ್ ಫೈನಲ್

'ಬಿಗ್ ಬಾಸ್ ಕನ್ನಡ 1, ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಹಾಗೂ ಅರುಣ್ ಸಾಗರ್ ಫಿನಾಲೆ ತಲುಪಿದ್ದರು. ಸುದೀಪ್ ಅವರ ಬಲಭಾಗದಲ್ಲಿ ವಿಜಯರಾಘವೇಂದ್ರ, ಎಡ ಭಾಗದಲ್ಲಿ ಅರುಣ್ ಸಾಗರ್ ನಿಂತಿದ್ದರು. ಆದ್ರೆ, ಸೀಸನ್ ಒಂದರಲ್ಲಿ ಕಿಚ್ಚ ಸುದೀಪ್ ಬಲಗೈಯನ್ನ ಮೇಲುತ್ತುವುದರ ಮೂಲಕ ವಿಜಯರಾಘವೇಂದ್ರ ವಿನ್ನರ್ ಎಂದು ಘೋಷಿಸಿದ್ದರು.

ನಂಬಿಕೆ ಬದಲಿಸಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಕನ್ನಡ 5ನೇ ಸೀಸನ್ ನಲ್ಲೂ ಈ ವಿಷ್ಯ ಹೆಚ್ಚು ಗಮನ ಸೆಳೆದಿತ್ತು. ಎಡ ಭಾಗನಾ ಅಥವಾ ಬಲಭಾಗನಾ ಅಂತ ಪ್ರೇಕ್ಷಕರು ಕಾಯುತ್ತಿದ್ದರು. ಕೊನೆಗೆ ಬಲ ಭಾಗದಲ್ಲಿ ನಿಂತಿದ್ದ ಚಂದನ್ ಶೆಟ್ಟಿ ವಿನ್ ಆಗುವ ಮೂಲಕ ಈ ಚರ್ಚೆಗೆ ಬ್ರೇಕ್ ಹಾಕಿದರು.

ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!

ಕಿಚ್ಚನ ಕೈಗಳ ಬಗ್ಗೆ ಟ್ರೋಲ್

ಹೀಗೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ 3 ಸೀಸನ್ ನಲ್ಲೂ ಸುದೀಪ್ ಅವರ ಎಡ ಭಾಗದಲ್ಲಿದ್ದವರೇ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಮೊದಲ ಆವೃತ್ತಿ ಯಲ್ಲಿ ವಿಜಯ ರಾಘವೇಂದ್ರ ಅವರು ಬಿಟ್ಟರೇ, ಈಗ ಐದನೇ ಆವೃತ್ತಿಯಲ್ಲಿ ಚಂದನ್ ಶೆಟ್ಟಿ ಬಲಭಾಗದಲ್ಲಿ ನಿಂತಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಸುದೀಪ್ ಎಡಗೈಯಲ್ಲಿ ಅಡಗಿದೆ 'ಬಿಗ್ ಬಾಸ್' ಗೆಲುವಿನ ಅದೃಷ್ಟ!

English summary
kannada actor, Bigg boss kannada host Kiccha Sudeep's hands are lucky at the Big Boss Final stage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada