»   » ನಟಿ ಸುಧಾರಾಣಿ ಕುರಿತು ಕೇಳಿಬಂದಿರುವ ಸುದ್ದಿ ಇಷ್ಟೇ.!

ನಟಿ ಸುಧಾರಾಣಿ ಕುರಿತು ಕೇಳಿಬಂದಿರುವ ಸುದ್ದಿ ಇಷ್ಟೇ.!

Posted By:
Subscribe to Filmibeat Kannada

ಚಿತ್ರರಂಗಕ್ಕೂ-ರಾಜಕೀಯಕ್ಕೂ ಒಂಥರಾ ಬಿಡಿಸಲಾರದ ನಂಟು. ಕನ್ನಡ ಬೆಳ್ಳಿಪರದೆ ಮೇಲೆ ಮಿನುಗಿ ರಾಜಕೀಯಕ್ಕೆ ಧುಮುಕಿದ ಅನೇಕರನ್ನ ನೀವೆಲ್ಲ ನೋಡಿದ್ದೀರಾ. ಇವರ ಸಾಲಿಗೆ ಈಗ ನಟಿ ಸುಧಾರಾಣಿ ಕೂಡ ಸೇರ್ಪಡೆ ಆಗಲಿದ್ದಾರೆ ಎಂಬುದು ಲೇಟೆಸ್ಟ್ ಗಾಸಿಪ್.!

ಹದಿಹರೆಯದಲ್ಲಿಯೇ ಗಾಂಧಿನಗರಕ್ಕೆ ಕಾಲಿಟ್ಟು ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಸುಧಾರಾಣಿ ಈಗ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಸದ್ಯ ವಿಧಾನ ಸೌಧದಲ್ಲಿ ಗಿರಕಿ ಹೊಡೆಯುತ್ತಿದೆ. ಅಸಲಿಗೆ ಈ ಸುದ್ದಿ ನಿಜವೇ.?

ಸುದ್ದಿ ನಿಜ, ಆದ್ರೆ....

ನಟಿ ಸುಧಾರಾಣಿ ರಾಜಕೀಯ ಪ್ರವೇಶ ಸುದ್ದಿ ನಿಜ. ಆದ್ರೆ ನಿಜ ಜೀವನದಲ್ಲಿ ಅಲ್ಲ. ಬದಲಾಗಿ 'ಬಣ್ಣದ ಲೋಕದಲ್ಲಿ'.['ಸಂಭಾವನೆ' ವಿಚಾರದ ಬಗ್ಗೆ ಸಿಡಿದೆದ್ದ ನಟಿ ಸುಧಾರಾಣಿ]

ಕಿರುತೆರೆಯಲ್ಲಿ ನಟಿ ಸುಧಾರಾಣಿ

ನಟಿ ಸುಧಾರಾಣಿ ಕಿರುತೆರೆಗೆ ಕಾಲಿಟ್ಟಿದ್ದಾರೆ. 'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಗಂಗಾ' ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿರುವವರಿಗೆ ಶಿಕ್ಷಣ ಸಚಿವೆಯ ಪರಿಚಯ ಈಗಾಗಲೇ ಆಗಿದೆ. ಹಾಗೆ 'ಗಂಗಾ' ಧಾರಾವಾಹಿಯಲ್ಲಿ ಶಿಕ್ಷಣ ಸಚಿವೆ ಪಾತ್ರ ನಿರ್ವಹಿಸುತ್ತಿರುವವರು ನಟಿ ಸುಧಾರಾಣಿ.

'ಗಂಗಾ'ಗಾಗಿ ಬರುತ್ತಿರುವ ಸುಧಾರಾಣಿ

ಗಂಗಾ ಧೈರ್ಯ ಮೆಚ್ಚಿ, ಅವಳ ದೂರಿಗೆ ಪರಿಹಾರ ನೀಡಲು ಶಿಕ್ಷಣ ಸಚಿವೆ ಅನುರಾಧಾ ಫಲ್ಗುಣಿ ಪಾತ್ರಕ್ಕಾಗಿ ನಟಿ ಸುಧಾರಾಣಿ ಬಣ್ಣ ಹಚ್ಚಿದ್ದಾರೆ. 'ಗಂಗಾ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ-ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

ಸುದ್ದಿ ಇಷ್ಟೇ.!

ಸೀರಿಯಲ್ ಒಂದರಲ್ಲಿ ನಟಿ ಸುಧಾರಾಣಿ ರಾಜಕಾರಣಿ ಆಗಿ ಮಿಂಚಲಿದ್ದಾರೆ ಹೊರತು ರಾಜಕೀಯ ಪ್ರವೇಶ ಮಾಡುತ್ತಿಲ್ಲ. ರೀಲ್ ಸುದ್ದಿಯನ್ನ ಕೆಲವರು ಕನ್ ಫ್ಯೂಸ್ ಮಾಡಿಕೊಂಡು 'ರಿಯಲ್' ಅಂತ ಭಾವಿಸಿರುವುದರಿಂದ ಇಂದು ಎಲ್ಲೆಡೆ 'ಸುಧಾರಾಣಿ ರಾಜಕೀಯ ಪ್ರವೇಶ' ಎಂಬ ಸುದ್ದಿ ಹಬ್ಬಿದೆ. ಆ ಗಾಳಿಸುದ್ದಿಗೆ ಇದು ಕ್ಲಾರಿಟಿ ಅಷ್ಟೇ.

English summary
Kannada Actress Sudha Rani is not entering Politics. But she is playing the role of Education Minister in 'Ganga' serial which is being telecasted in Zee Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada