»   » ಸ್ಟಾರ್ ಸುವರ್ಣ 'ಸೂಪರ್ ಜೋಡಿ-2: ಈ ಬಾರಿ ಯಾರೆಲ್ಲ ಇದ್ದಾರೆ?

ಸ್ಟಾರ್ ಸುವರ್ಣ 'ಸೂಪರ್ ಜೋಡಿ-2: ಈ ಬಾರಿ ಯಾರೆಲ್ಲ ಇದ್ದಾರೆ?

Posted By:
Subscribe to Filmibeat Kannada

'ಸೂಪರ್ ಜೋಡಿ' ರಿಯಾಲಿಟೀ ಶೋ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಿದ್ದ ಸ್ಟಾರ್ ಸುವರ್ಣ ವಾಹಿನಿ, ಈಗ ಸೀಸನ್-2 ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತಿದೆ.

ಕಳೆದ ಆವೃತ್ತಿಯಲ್ಲಿ ಹತ್ತು ಜೋಡಿಗಳನ್ನಿಟ್ಟುಕೊಂಡು ಮಸ್ತ್ ಮನರಂಜನೆ ನೀಡಿದ್ದ 'ಸೂಪರ್ ಜೋಡಿ' ಈಗ ಹೊಸ ಹತ್ತು ಜೋಡಿಗಳ ಜೊತೆ ಅದ್ಧೂರಿ ಎಂಟ್ರಿ ಕೊಡ್ತಿದೆ.[ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೂಪರ್ ಜೋಡಿ-2' ರಿಯಾಲಿಟಿ ಶೋ]

ಕಳೆದ ಬಾರಿಗಿಂತ ಈ ಬಾರಿಯ ಜೋಡಿಗಳು ವಿಶೇಷವೆನಿಸಿದ್ದು, ಕಾಳಿಸ್ವಾಮಿ, ಹುಚ್ಚ ವೆಂಕಟ್, ನಟ ಆದಿ ಲೋಕೇಶ್ ಸೇರಿದಂತೆ ಹಲವು ಕಿರುತೆರೆ ತಾರೆಯರು ಭಾಗಿಯಾಗಿದ್ದಾರೆ. ಹಾಗಾದ್ರೆ, ಈ ಸೀಸನ್ ನಲ್ಲಿ ಯಾವೆಲ್ಲ ಸ್ಟಾರ್ ಗಳು ಭಾಗಿಯಾಗಿದ್ದಾರೆ. ಯಾರಿಗೆ ಯಾರು ಜೋಡಿಗಳು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.....

ರಮೇಶ್ ಅರವಿಂದ್ ಚಾಲನೆ

'ಸೂಪರ್ ಜೋಡಿ ಸೀಸನ್-2' ಕಾರ್ಯಕ್ರಮಕ್ಕೆ ನಟ ರಮೇಶ್ ಅರವಿಂದ್ ಚಾಲನೆ ನೀಡಿದರು. ಅಷ್ಟೇ ಅಲ್ಲದೇ ಸೂಪರ್ ಜೋಡಿಗಳ ಜೊತೆ ಭರ್ಜರಿ ಸ್ಟೆಪ್ ಕೂಡ ಹಾಕಿದರು.

ಅಕುಲ್ ಬಾಲಾಜಿ ನಿರೂಪಣೆ

'ಸೂಪರ್ ಜೋಡಿ' ರಿಯಾಲಿಟಿ ಶೋವನ್ನ ನಿರೂಪಣೆ ಮಾಡಿದ್ದ ಅಕುಲ್ ಬಾಲಾಜಿ ಈಗ 'ಸೂಪರ್ ಜೋಡಿ-2' ಕಾರ್ಯಕ್ರಮವನ್ನ ನಿರೂಪಣೆ ಮಾಡಲಿದ್ದಾರೆ.

ಹುಚ್ಚ ವೆಂಕಟ್ ಮತ್ತು ಜೋಡಿ!

ಈ ಆವೃತ್ತಿಯ ಪ್ರಮುಖ ಆಕರ್ಷಣೆ ಹುಚ್ಚ ವೆಂಕಟ್ ಜೋಡಿ. 'ಸೂಪರ್ ಜೋಡಿ-2' ನಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಸ್ವರ್ಧಿಯಾಗಿದ್ದು, ವೆಂಕಟ್ ಗೆ ಮಾಡೆಲ್ ರಚನಾ ಸಾಥ್ ಕೊಡಲಿದ್ದಾರೆ.

ನಟ ಆದಿ ಲೋಕೇಶ್ ಜೋಡಿ!

ಈ ಬಾರಿಯ ಸೂಪರ್ ಜೋಡಿಯಲ್ಲಿ ನಟ ಆದಿ ಲೋಕೇಶ್ ಕೂಡ ಸ್ವರ್ಧಿಯಾಗಿದ್ದಾರೆ. ಆದಿಗೆ ಆಂಜ್ಯಲೀನ ಜೊತೆಯಾಗಿದ್ದಾರೆ.

ಕಾಳಿಸ್ವಾಮಿ ಜೋಡಿ

'ಸೂಪರ್ ಜೋಡಿ-2' ಕಾರ್ಯಕ್ರಮಕ್ಕೆ ಮತ್ತಷ್ಟು ಮೆರೆಗು ಹೆಚ್ಚಿಸಲಿದ್ದಾರೆ ಕಾಳಿಸ್ವಾಮಿ ಮತ್ತು ಅವರ ಜೋಡಿ. ವಿಶೇಷ ಅಂದ್ರೆ, ಕಾಳಿಸ್ವಾಮಿಗೆ ಅವರ ಪತ್ನಿ ಬಬಿತಾ ಅವರೇ ಜೋಡಿಯಾಗಿದ್ದಾರೆ.

ಅಬ್ದಲ್ ಮತ್ತು ಕೃಪಾ

ಮೈಸೂರಿನ ಅಪ್ಪಟ ಕನ್ನಡದ ಹುಡುಗಿ ಕೃಪಾ ಮತ್ತು ನೈಜಿರಿಯಾ ಮೂಲದ ಕನ್ನಡ ಬಲ್ಲ ಆಡೋ ಅಬ್ದಲ್ ಸೂಪರ್ ಜೋಡಿಯಾಗಿ ಬರಲಿದ್ದಾರೆ.

ವಿಕ್ರಮ್ ಸೂರಿ ಮತ್ತು ನಮಿತಾ ಜೋಡಿ

ಕಿರುತೆರೆಯ ಕಲಾವಿದರಾದ ವಿಕ್ರಮ್ ಸೂರಿ ಮತ್ತು ನಮಿತಾ ಜೋಡಿಗಳು ಕೂಡ ಸೂಪರ್ ಜೋಡಿಯ ಸ್ವರ್ಧಿಗಳಾಗಿ ಕಣಕ್ಕಿಳಿದಿದ್ದಾರೆ.

ಅನಿಲ್ ಮತ್ತು ಸ್ವಾತಿ ಜೋಡಿ

'ಅಮೃತವರ್ಷಿಣಿ' ಖ್ಯಾತಿಯ ಅನಿಲ್ ಮತ್ತು ಸ್ವಾತಿ ಜೋಡಿಗಳಾಗಿ ಅಖಾಡಕ್ಕೀಳಿದಿದ್ದಾರೆ.

ಸೌಮ್ಯ ಮತ್ತು ಭಾನು ಪ್ರಕಾಶ್

'ಸೈ ಮಾಮ್ಸ್' ಖ್ಯಾತಿಯ ಸೌಮ್ಯ ಮತ್ತು ಭಾನು ಪ್ರಕಾಶ್ ಈ ಬಾರಿಯ ಸೂಪರ್ ಜೋಡಿಯಾಗಳಲ್ಲಿ ಒಬ್ಬರಾಗಿದ್ದಾರೆ.

ನಿಶಿತಾ ಗೌಡ ಮತ್ತು ಪ್ರಸನ್ನ

'ಗೀತಾಂಜಲಿ' ಧಾರವಾಹಿಯ ನಿಶಿತಾ ಗೌಡ ಮತ್ತು ಪ್ರಸನ್ನ ಕೂಡ ಕಾಂಪಿಟೇಶನ್ ಗೆ ರೆಡಿಯಾಗಿದ್ದಾರೆ

ಅರುಣ್ ಮತ್ತು ಮಾಧುರ್ಯ

ಇನ್ನೂ ಕಿರುತೆರೆ ನಟ ಅರುಣ್ ಹಾಗೂ ಮಾಧುರ್ಯ ಅವರ ಜೋಡಿ ಕಾಣಿಸಿಕೊಳ್ಳಲಿದ್ದಾರೆ.

ಸಂಗೀತ ಮತ್ತು ಕಾರ್ತಿಕ

'ಹರ ಹರ ಮಹಾದೇವ' ಧಾರವಾಹಿ ಖ್ಯಾತಿಯ ಸಂಗೀತ ಮತ್ತು ಕಾರ್ತಿಕ ಜೋಡಿ ಸೂಪರ್ ಜೋಡಿ ಆಟದಲ್ಲಿ ಸ್ವರ್ಧಿಗಳಾಗಿದ್ದಾರೆ.

ಜನವರಿ 7 ರಿಂದ ಶುರು!

ಇದೇ ಜನವರಿ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

English summary
After the success of Super Jodi, Star Suvarna is all set to air Super Jodi -2 on Suvarna channel, hosted by Akul Balaji. This season well known small screen actors and film actors are expected to be part of the show. here the full details of 'Super Jodi-2' contestant

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada