»   » 'ಮಜಾ ಟಾಕೀಸ್', 'ಮಜಾ ಭಾರತ'ದ ನಂತರ ಮತ್ತೊಂದು 'ಟಿವಿ ಶೋ' ಅಂತ್ಯ

'ಮಜಾ ಟಾಕೀಸ್', 'ಮಜಾ ಭಾರತ'ದ ನಂತರ ಮತ್ತೊಂದು 'ಟಿವಿ ಶೋ' ಅಂತ್ಯ

Posted By:
Subscribe to Filmibeat Kannada

ಟಿವಿ ಪ್ರೇಕ್ಷಕರಿಗೆ ಮತ್ತೊಂದು ಕಹಿ ಸುದ್ದಿ. ವಾರಾಂತ್ಯದಲ್ಲಿ ಮನೆ ಮಂದಿಯನ್ನೆಲ್ಲಾ ರಂಜಿಸುತ್ತಿದ್ದ 'ಮಜಾ ಟಾಕೀಸ್' ಮತ್ತು 'ಮಜಾ ಭಾರತ' ಕಾರ್ಯಕ್ರಮಗಳು ಅಧಿಕೃತವಾಗಿ ಅಂತ್ಯವಾಗಿದೆ ಎಂದು ಸ್ವತಃ ಅಯೋಜಕರೇ ಸ್ಪಷ್ಟಪಡಿಸಿದ್ದಾರೆ.

ಈ ಎರಡು ಕಾರ್ಯಕ್ರಮಗಳನ್ನ ಮಿಸ್ ಮಾಡಿಕೊಂಡ್ರಲ್ಲ ಎನ್ನುವಷ್ಟರಲ್ಲೇ ಮತ್ತೊಂದು ಖ್ಯಾತ ಟಿವಿ ಕಾರ್ಯಕ್ರಮ ತನ್ನ ಕೊನೆ ಪ್ರದರ್ಶನಕ್ಕೆ ಸಿದ್ದವಾಗಿದೆ.

ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ಆರಂಭವಾಗುತ್ತಿದ್ದು, ಸದ್ಯ, ಪ್ರಸಾರವಾಗುತ್ತಿರುವ ಟಿವಿ ಶೋ ಕೊನೆಗೊಳ್ಳುತ್ತಿದೆ. ಅಷ್ಟಕ್ಕೂ ಆ ಕಾರ್ಯಕ್ರಮ ಯಾವುದು? ಕಾರಣವೇನು? ಎಂದು ಮುಂದೆ ಓದಿ.....

ಟಾಕ್ ಶೋ ಅಂತ್ಯ

ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಟಾಕ್ ಶೋ 'ಸೂಪರ್ ಟಾಕ್ ಟೈಮ್' ಕೊನೆಗೊಳ್ಳುತ್ತಿದೆ. ಈ ಸುದ್ದಿಯನ್ನ ಸ್ವತಃ ನಿರೂಪಕ ಅಕುಲ್ ಬಾಲಾಜಿ ಅವರೇ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಚಿತ್ರಗಳು: ಹುಬ್ಬಳ್ಳಿಯಲ್ಲಿ ನಡೆದ ವರ್ಣರಂಜಿತ 'ಮಜಾಭಾರತ' ಭರ್ಜರಿ ಫಿನಾಲೆ

ಈ ವಾರ ಕೊನೆಗೊಳ್ಳಲಿದೆ

'ಸೂಪರ್ ಟಾಕ್ ಟೈಮ್' ಯಾವಾಗ ಅಂತ್ಯವಾಗಲಿದೆ ಎಂದು ಯೋಚಿಸಬೇಡಿ. ಈ ವಾರವೇ ಕೊನೆ ಶೋ ಆಗಲಿದೆ. ಪ್ರತಿ ಗುರುವಾರ ಮತ್ತು ಶುಕ್ರವಾರ ಪ್ರಸಾರವಾಗುತ್ತಿದ್ದ ಟಾಕ್ ಶೋ ಅಕ್ಟೋಬರ್ 13 ರಂದು ಶುಭಂ ಆಗಲಿದೆ.

ಕೊನೆ ಅತಿಥಿಗಳು ಯಾರು?

'ಸೂಪರ್ ಟಾಕ್ ಟೈಮ್' ಟಾಕ್ ಶೋನಲ್ಲಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಸಾಕಷ್ಟು ಕಲಾವಿದರು ಭಾಗವಹಿಸಿದ್ದರು. ಮೊದಲ ಆವೃತ್ತಿಯ ಕೊನೆ ಅತಿಥಿಗಳಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್ ಆಗಮಿಸುತ್ತಿದ್ದಾರೆ.

ಟಾಕ್ ಶೋ ಬದಲು 'ಬಿಗ್ ಬಾಸ್'

ಇನ್ಮುಂದೆ 'ಸೂಪರ್ ಟಾಕ್ ಟೈಮ್' ಪ್ರಸಾರವಾಗುತ್ತಿದ್ದ ಸಮಯದಲ್ಲಿ 'ಬಿಗ್ ಬಾಸ್ ಕನ್ನಡ 5' ಪ್ರಸಾರವಾಗಲಿದೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದ್ದ ಬಿಗ್ ಬಾಸ್ ಈ ಆವೃತ್ತಿಯಿಂದ ಕಲರ್ಸ್ ಸೂಪರ್ ನಲ್ಲಿ ನೋಡಬಹುದು.

ಟಾಕ್ ಶೋ ನಿಲ್ಲಿಸಲು 'ಬಿಗ್ ಬಾಸ್' ಕಾರಣ

ಅಂದ್ಹಾಗೆ, 'ಸೂಪರ್ ಟಾಕ್ ಟೈಮ್' ಶೋ ಯಶಸ್ವಿಯಾಗಿತ್ತು. ಆದ್ರೆ, ದಿಢೀರ್ ಅಂತ ನಿಲ್ಲಿಸಲು ಕಾರಣ 'ಬಿಗ್ ಬಾಸ್' ಅಷ್ಟೇ. ಬಿಗ್ ಬಾಸ್ ಪ್ರಸಾರದ ಸಮಯವನ್ನ ಕೂಡ ಬದಲಾಯಿಸಲಾಗಿದ್ದು, ಪ್ರತಿ ದಿನ ರಾತ್ರಿ 8 ರಿಂದ 9 ಗಂಟೆಗೆ ಪ್ರಸಾರವಾಗಲಿದೆ. ಹೀಗಾಗಿ, ಆ ಸಮಯದಲ್ಲಿ ಬರುತ್ತಿದ್ದ ಟಾಕ್ ಶೋಗೆ ಬ್ರೇಕ್ ಹಾಕಲಾಗಿದೆ.

ನಗುವಿನ ಟಾಕೀಸ್ ಆಗಿದ್ದ 'ಮಜಾ ಟಾಕೀಸ್' ಮುಚ್ಚಿದ ಸೃಜನ್ ಲೋಕೇಶ್!

English summary
Colours Super Channel popular show 'Super talk time' ends on friday (October 13th) last episode with Golden star Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada