»   » ಬಿಗ್ ಬಾಸ್ ನಿಂದ ಬಾಲೆ ನಿರೀಕ್ಷಿತ ನಿರ್ಗಮನ

ಬಿಗ್ ಬಾಸ್ ನಿಂದ ಬಾಲೆ ನಿರೀಕ್ಷಿತ ನಿರ್ಗಮನ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2ನಲ್ಲಿ ನಟಿ ನೀತೂ ಶೆಟ್ಟಿ ಅವರ ನಿರೀಕ್ಷಿತ ನಿರ್ಗಮನದಂತೆ ನಿರೂಪಕಿ ಮಂಗಳೂರಿನ ಬಾಲೆ ಅನುಪಮಾ ಭಟ್ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಅಯ್ಯೋ ಪಾಪ ಗ್ರ್ಯಾಂಡ್ ಫಿನಾಲೆ ತನಕನಾದರೂ ಇರಬೇಕಿತ್ತು ಎಂದು ಮಂಗಳೂರಿನ ಜನ ಲೊಚಗುಟ್ಟಿದ್ದಾರೆ.

ನಿರೂಪಕ ಸುದೀಪ್ ಅವರು ಕಳೆದ ವಾರದ ಟಾಸ್ಕ್ ಗಳನ್ನು ಮತ್ತೊಮ್ಮೆ ಸ್ಪರ್ಧಿಗಳಿಂದ ರಿಪೀಟ್ ಮಾಡಿಸಿ ಸಕತ್ ಮಜಾ ತೆಗೆದುಕೊಂಡರು. ಮುಂದಿನ ವಾರ ಗ್ರ್ಯಾಂಡ್ ಫಿನಾಲೆಗೆ ದೀಪಿಕಾ ಕಾಮಯ್ಯ, ಅಕುಲ್ ಬಾಲಾಜಿ, ಶ್ವೇತಾ ಜಂಗಪ್ಪ ಹಾಗೂ ಸಂಭಾವ್ಯ ವಿನ್ನರ್ ಸೃಜನ್ ಲೋಕೇಶ್ ಎಲ್ಲಾ ರೀತಿಯಿಂದಲೂ ಸಿದ್ದರಾದಂತೆ ಕಂಡು ಬಂದಿತು.

ಕೊನೆ ವಾರದಲ್ಲಿ ಹಲವು ಅಚ್ಚರಿಯ ಸಂಗತಿಗಳನ್ನು ಸ್ಪರ್ಧಿಗಳ ಮುಂದಿಡಲು ಬಿಗ್ ಬಾಸ್ ತಂಡ ಮುಂದಾಗಿದೆ. ಸೆಲೆಬ್ರಿಟಿಗಳ ಎಂಟ್ರಿ, ಮನೆಯವರಿಂದ ಕರೆ. ಟಾಸ್ಕ ರಹಿತ ನೆಮ್ಮದಿ ಹೀಗೆ ಏನಾದರೂ ಒಂದು ರೀತಿಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ಖುಷಿ ಕೊಡಲು ಬಿಗ್ ಬಾಸ್ ನಿರ್ಧರಿಸಿದ್ದರಂತೆ. [ಡಿಕೋಡಿಂಗ್ ಡೈರೆಕ್ಟರ್ ಗುರು, ಔಟ್ ಆಗಿದ್ದೇಕೆ?]

ಲಿವಿಂಗ್ ಏರಿಯಾದಲ್ಲಿ ಮಲಗುವ ಅಧಿಕಾರ ಕಳೆದುಕೊಳ್ಳುವರನ್ನು ಸೂಚಿಸಿ ಎಂದು ಬಿಗ್ ಬಾಸ್ ಅನುಪಮಾರನ್ನು ಕೇಳಿದರು. ಅಕುಲ್ ಬಾಲಾಜಿ ಅವರು ಹೊರಗೆ ಮಲಗಲಿ ಎಂದು ಅನುಪಮಾ ಹೇಳಿದರು. ಒಟ್ಟಾರೆ 90ದಿನಗಳ ಕಾಲ ಅನುಪಮ ಅವರು ಸ್ಪರ್ಧಿಯಾಗಿ ಮನೆಯಲ್ಲಿ ಉಳಿದಿದ್ದರು. ಮನೆಯ ಕ್ಯಾಪ್ಟನ್ ಆಗಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಲ್ಲಿತ್ತು. ಮನೆಯ ಇತರ ಸದಸ್ಯರನ್ನು ನನ್ನನ್ನು ಇನ್ನೂ ಪುಟ್ಟ ಹುಡುಗಿಯಂತೆ ಟ್ರೀಟ್ ಮಾಡುತ್ತಾರೆ ಎಂಬ ಅಸಮಾಧಾನ ಅನು ಅವರಲ್ಲಿತ್ತು.

Sudeep

ಗ್ರ್ಯಾಂಡ್ ಫಿನಾಲೆ ವಾರದ ತನಕವೂ ನಾಮಿನೇಟ್ ಆಗಿದ್ದು ಅನು ಅವರಿಗೆ ಮುಳುವಾಯಿತು ಇದರಿಂದ ಕ್ಯಾಪ್ಟನ್ ಕೂಡಾ ಆಗಲಿಲ್ಲ. ಮನೆಯಲ್ಲಿ ಸ್ಪರ್ಧಿಗಿಂತ ಹೆಚ್ಚಾಗಿ ಮನೆಯ ಮುದ್ದಿನ ಕೂಸಾಗಿ, ಅತಿಥಿಯಾಗಿ ಅನು ಕಾಲ ದೂಡಬೇಕಾಯಿತು. ಗುರು ಅವರಂತೆ ತಂತ್ರಗಾರಿಕೆ ಮಾಡಲು ತಿಳಿಯದಿದ್ದರೂ ಇದ್ದಷ್ಟು ಕಾಲ ಯಾರನ್ನು ನೋಯಿಸಿದೆ ಜಾಗರೂಕತೆ ಅಟವಾಡಿದ ಅನುಗೆ ಸುದೀಪ್ ಕೂಡಾ ಪ್ರಶಂಸೆ ನೀಡಿದರು. ಮುಂದಿನ ವಾರ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿ ಎಂದು ಕಿಚ್ಚನ ಕಥೆ ಎಪಿಸೋಡ್ ಮುಗಿಸಿದರು.

English summary
With just a week left for the grand finale of 'Big Boss Season 2', TV anchor Anupama Bhat has been eliminated, hereby leaving only four contestants in the last week of the hugely popular reality show telecasted in Suvarna Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada