»   » ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ 'ಅಂಬಾರಿ'

ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ 'ಅಂಬಾರಿ'

Posted By:
Subscribe to Filmibeat Kannada

ಪ್ರತಾಪ ಸೂರ್ಯವಂಶಿ ಒಬ್ಬ ಶ್ರೀಮಂತ ವ್ಯಾಪಾರಿ. ತನ್ನ ಬಾಲ್ಯದಲ್ಲಿಯೇ ಮದುವೆಯಾದ ಹೆಂಡತಿ ಪಾರ್ವತಿಗೆ ವಿಚ್ಛೇದನ ನೀಡಲೆಂದು ಹಳ್ಳಿಗೆ ಮರಳುತ್ತಾನೆ. ಆದರೆ ಪಾರು ಈಗ ಸುಶಿಕ್ಷಿತೆ. ಒಬ್ಬ ಉತ್ತಮ ಟೂರಿಸ್ಟ್ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿರತ್ತಾಳೆ. ಹಾಗೂ ತನ್ನ ಗಂಡ ಬರುವನೆಂಬ ನಿರೀಕ್ಷೆಯಲ್ಲಿ ಕಾಯುತ್ತಿರುತ್ತಾಳೆ.

ಯಾವಾಗ ಪ್ರತಾಪ ಅವಳನ್ನು ನೋಡಲೆಂದು ಹಳ್ಳಿಗೆ ಬರುತ್ತಾನೋ ಆಗಲೇ ಅವನಿಗೆ ಪಾರ್ವತಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಬೇಕೆಂಬ ಒತ್ತಾಯ ಬಂದು, ವಿಧಿಯಿಲ್ಲದೇ ಬಾಲ್ಯದಲ್ಲಿ ಮದುವೆಯಾದ ವಧುವನ್ನು ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೊದಗುತ್ತದೆ.

ಬಾಲ್ಯದಲ್ಲಿಯೇ ಮದುವೆಯಾದರೂ ಅವಳನ್ನು ತನ್ನ ಮನೆಗೆ ಕರೆದೊಯ್ಯಲು ಪ್ರತಾಪ ನಿರಾಕರಿಸಿ ವಿಚ್ಛೇದನ ನೀಡಬೇಕೆಂಬ ಮನಸ್ಥಿತಿ ಯಾಕೆ? ಅದಕ್ಕೆ ಕಾರಣಗಳೇನಿರಬಹುದೆಂಬುದು? ಸ್ಲೈಡ್ ನಲ್ಲಿ ನೋಡಿ ವಿವರಗಳು!

ಹೊಚ್ಚ ಹೊಸ ಧಾರಾವಾಹಿ 'ಅಂಬಾರಿ'

ಇದಿಷ್ಟು ಗೊತ್ತಾಗಬೇಕಾದರೆ ಸ್ಟಾರ್ ನೆಟ್ ವರ್ಕ್ ನ ಕನ್ನಡ ಮನೊರಂಜನಾ ಸುವರ್ಣ ವಾಹಿನಿಯ ಹೊಚ್ಚ ಹೊಸ ಧಾರಾವಾಹಿ 'ಅಂಬಾರಿ' ನೀವು ನೋಡಲೇಬೇಕು. ಇದೇ ಜುಲೈ 28 , 2014 ರಂದು ಈ ಸೀರಿಯಲ್ ಪ್ರಾರಂಭವಾಗುತ್ತಿದೆ.

ಪ್ರತಾಪನ ಪ್ರೀತಿ ಹುಡುಕಿ ಹೊರಟವಳು

ಸುಂದರಿಯಾದ, ಸುಶಿಕ್ಷಿತೆಯಾದ ಹಳ್ಳಿಯ ಹುಡುಗಿ ಪ್ರತಾಪನ ಪ್ರೀತಿ ಹುಡುಕಿ ಹೊರಟವಳು ಅವನ ಮನ ಗೆಲ್ಲಬಲ್ಲಳೇ, ನಗರದ ವಾತಾವರಣ, ಶ್ರೀಮಂತ ವ್ಯಾಪಾರಿಯ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಚಾಣಾಕ್ಷತೆ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ನಮ್ಮ ಪಾರ್ವತಿಯಲ್ಲಿ ಇದೆಯೇ ಎಂಬುದರೊಂದಿಗೆ ಸಾಕಷ್ಟು ಸುಳಿಗಳನ್ನು ತೆರೆದಿಡುತ್ತಾ ಸಾಗುವ ಕತೆ 'ಅಂಬಾರಿ.

ರಂಜಿತ್ ರಾವ್ ಈ ಧಾರಾವಾಹಿ ನಿರ್ದೇಶಕರು

'ಅಂಬಾರಿ' ಧಾರಾವಾಹಿ ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6:30 ಕ್ಕೆ ಪ್ರಸಾರವಾಗಲಿದೆ. ರಂಜಿತ್ ರಾವ್ ಈ ಧಾರಾವಾಹಿನ್ನು ನಿರ್ದೇಶಿಸುತ್ತಿದ್ದಾರೆ. ಹರ್ಷಪ್ರಿಯ ಬರೆದ ಶೀರ್ಷಿಕೆ ಗೀತೆಯನ್ನು ಉಷಾ ಗಣೇಶ ಹಾಗೂ ವಿಜಯ್ ಕೃಷ್ಣ ಹಾಡಿದ್ದಾರೆ. ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ವಿನಯ್ ಗೌಡ ಮತ್ತು ದಿವ್ಯಾ ಅಭಿನಯಿಸುತ್ತಿದ್ದಾರೆ.

ಇದೊಂದು ವಿಭಿನ್ನ ಕಥೆ: ಅನೂಪ್ ಚಂದ್ರಶೇಖರ್

ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರ್ ಹೇಳುವಂತೆ, "ಇದೊಂದು ವಿಭಿನ್ನ ಕಥೆಯಾಗಿದೆ. ನಾವು ಈ ರೀತಿಯ ಥೀಮ್ ಗಾಗಿ ಸಾಕಷ್ಟು ಕೆಲಸ ಮಾಡಿದ್ದು, ಇಲ್ಲಿ ಬರುವ ಪಾತ್ರ, ಮುಖ್ಯ ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದೆ. ನಮ್ಮ ವೀಕ್ಷಕರು ಖಂಡಿತ ನೋಡಿ ಆನಂದಿಸ್ತಾರೆ ಅನ್ನೋ ನಂಬಿಕೆ ನನ್ನದು ಹಾಗೂ ಈ ಧಾರಾವಾಹಿಯನ್ನು ಮನೆಮಂದಿಯೆಲ್ಲಾ ಕುಳಿತು ನೋಡಬಹುದು" ಎಂದರು.

ಹಲವು ಹೊಸತುಗಳ ಸಂಗಮ ಸುವರ್ಣ

'ಅಂಬಾರಿ' ಸುವರ್ಣವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಅರಗಿಣಿ, ಮಿಲನ, ಆಕಾಶದೀಪ, ಮೀರಾ ಮಾಧವ, ಪರಿಣಿತ, ಅವನು ಮತ್ತೆ ಶ್ರಾವಣಿ ಹಾಗೂ ಪಂಚರಂಗಿ ಪೋಂ ಪೋಂ ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತಿದೆ.

English summary
The Star Networks Kannada General Entertainment Channel Suvarna announces the launch of its new serial “Ambari” from July 28 th 2014. The soap will go on air from Monday to Saturday 06:30 PM
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada