For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಸುದ್ದಿ ವಾಹಿನಿಯಿಂದ ಹೊಸ ಸ್ಟುಡಿಯೋ

  |

  ಸುವರ್ಣ ನ್ಯೂಸ್ 24x7 ವಾಹಿನಿಯ ಹೊಸ ಸ್ಟುಡಿಯೋ ಇಂದು (19 ಆಗಸ್ಟ್ 2012) ಉದ್ಘಾಟನೆಯಾಯಿತು. ಶಿವಾನಂದ ಸರ್ಕಲ್ ಬಳಿಯ ಹೊಸ ಸ್ಟುಡಿಯೋಗೆ ಬಂದಿರುವ ಸುವರ್ಣ ಸುದ್ದಿವಾಹಿನಿಯ ಬಳಗ ಇಂದು ಹೊಸ ರೀತಿಯ ಕಾರ್ಯಕ್ರಮ ನೀಡುವಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಹೊಸ ಸ್ಟುಡಿಯೋವನ್ನು ಮಾನ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸುದ್ದಿ ಮುಖ್ಯಾಂಶಗಳನ್ನು ಓದುವ ಮೂಲಕ ಉದ್ಘಾಟಿಸಿದರು.

  ನಂತರ ನಡೆದ ಪ್ಯಾನಲ್ ಚರ್ಚೆಯಲ್ಲಿ ಸುವರ್ಣ 24x7 ಸುದ್ದಿ ವಾಹಿನಿಯ ಮುಖ್ಯಸ್ಥರಾದ ವಿಶ್ವೇಶ್ವರ ಭಟ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ನಟಿ ತಾರಾ, ನಟ ರಮೇಶ್ ಅರವಿಂದ್ ಭಾಗವಹಿಸಿದ್ದರು. ದೇಶದ ಅತ್ಯುನ್ನತ ಸ್ಟುಡಿಯೋಗಳಲ್ಲಿ ಇದೂ ಒಂದು ಎಂಬ ಮಾತನ್ನು ಎಲ್ಲರೂ ಈ ವೇಳೆ ಸ್ಪಷ್ಟಪಡಿಸಿದರು.

  ಹೊಸ ಸ್ಟುಡಿಯೋ ಉದ್ಘಾಟನೆ ನಿಮಿತ್ತ ಇಂದು ಇಡೀ ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಯಾಂಡಲ್ ವುಡ್ ತಾರೆಗಳಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ತಾರಾ, ಭಾವನಾ ಹಾಗೂ ಉಪೇಂದ್ರ ಅವರುಗಳು ಇಂದಿನ ವಿಶೇಷ ಸುದ್ದಿಯನ್ನು ಓದಲಿದ್ದಾರೆ. ಅವುಗಳ ಮಧ್ಯೆ ಎಂದಿನ ಕಾರ್ಯಕ್ರಮಗಳು ಹೊಸ ರೂಪುರೇಷೆಯೊಂದಿಗೆ ಪ್ರಸಾರವಾಗಲಿರುವುದು ವಿಶೇಷ.

  ಅಂದಹಾಗೆ, ಸುವರ್ಣ ವಾಹಿನಿಯ ಸ್ಟುಡಿಯೋ ಮುಂಭಾಗದಲ್ಲಿ 'ಬ್ರೇಕಿಂಗ್ ನ್ಯೂಸ್' ಪ್ರಸಾರ ವೀಕ್ಷಣೆ ಲಭ್ಯವಿದೆ. ಅತ್ಯುನ್ನತ ತಂತ್ರಜ್ಞಾನ ಆಧಾರಿತ ಹೊಸ ಸ್ಟುಡಿಯೋದ ಮೊದಲ ಮಹಡಿಯಲ್ಲಿ 'ಕನ್ನಡಪ್ರಭ' ಪತ್ರಿಕೆಯ ಕಚೇರಿ ಇದ್ದು ಎರಡನೇ ಮಹಡಿಯಲ್ಲಿ ಸುವರ್ಣ ಸುದ್ದಿ ವಾಹಿನಿಯ ಕಚೇರಿ ಇದೆ. 'ನಾವು ಬದಲಾಗಿದ್ದೇವೆ, ಬದಲಾವಣೆ ಜಗದ ನಿಯಮ' ಎಂಬ ಘೋಷವಾಕ್ಯದಡಿ ಸುವರ್ಣ ಸುದ್ದಿ ವಾಹಿನಿ ಮುಂದೆ ಕಾರ್ಯ ನಿರ್ವಹಿಸಲಿದೆ. (ಒನ್ ಇಂಡಿಯಾ ಕನ್ನಡ)

  English summary
  Suvarna News 24x7 Kannada Channel has got a new look, new building, new studio. Karnataka Chief Minister Jagadish Shettar inaugurated the studio and read the first news. On this occasion Karnataka film stars will be reading the Kannada news and will be interviewing the TV journalists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X