»   » ಸುವರ್ಣ ನೆಚ್ಚಿನ ಧಾರಾವಾಹಿ 'ಅಮೃತ ವರ್ಷಿಣಿ'

ಸುವರ್ಣ ನೆಚ್ಚಿನ ಧಾರಾವಾಹಿ 'ಅಮೃತ ವರ್ಷಿಣಿ'

Posted By:
Subscribe to Filmibeat Kannada

ಸ್ಟಾರ್ ನೆಟ್‍ವರ್ಕ್ ನ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಈಗ ಅದರ ದ್ವಿತೀಯ ವರ್ಷದ "ಸುವರ್ಣ ಪರಿವಾರ ಅವಾಡ್ರ್ಸ್-2013" ಇದೇ ಸೆ.14 ಮತ್ತು 15 ರಂದು ಸಂಜೆ 6 ಗಂಟೆಗೆ ಪ್ರಸಾರ ಮಾಡುತ್ತಿದೆ. ಸುವರ್ಣ ಪರಿವಾರದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಇತರೆ ಸದಸ್ಯರೆಲ್ಲರುಗಳು ಒಂದೆಡೆ ನೆರೆದ ರಸಸಂಜೆಗೆ ಸುವರ್ಣ ಪರಿವಾರ್ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಗಿತ್ತು.

ಸುವರ್ಣ ಪರಿವಾರದ ತಾರೆಗಳಾದ ಅಮೃತ - ವಿಜಯ್, ನಂದಿನಿ-ಕಿಶೋರ್, ಆಕಾಶ್-ದೀಪಾ, ಚುಕ್ಕಿ, ಮೈಲಾರಿ - ರೇಣುಕಾ, ಮೀನಾನಾಥ್ ಹಾಗೂ ಮೊದಲಾದವರು ತಮ್ಮ ನೃತ್ಯ, ನಾಟಕದಿಂದ ನೆರೆದ ಪ್ರೇಕ್ಷಕರನ್ನು ರಂಜಿಸಿದರು.

ಅಲ್ಲದೇ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದರುಗಳಾದ ಹೇಮಾಚೌದರಿ, ವನಿತಾವಾಸು ಮೊದಲಾದವರನ್ನೊಳಗೊಂಡ ಸುವರ್ಣ ಪರಿವಾರವೇ ಮೇಳೈಸಿದ್ದ ರಸಮಯ ಕ್ಷಣವನ್ನು ಪರಿವಾರ್ ಅವಾಡ್ರ್ಸ್ -2013 ಸೃಷ್ಟಿಸಿತ್ತು. ಸುವರ್ಣ ಪರಿವಾರ್ ಅವಾಡ್ರ್ಸ್2013 ರ ಪ್ರಾಯೋಜಕತ್ವವನ್ನು ಪೆಪ್ಸೊಡೆಂಟ್ ವಹಿಸಿದೆ.

ನೆಚ್ಚಿನ ಧಾರಾವಾಹಿ ಅಮೃತ ವರ್ಷಿಣಿ

ಪೆಪ್ಸೊಡೆಂಟ್ ಸುವರ್ಣ ಪರಿವಾರ್ ಅವಾಡ್ರ್ಸ್ 32 ವಿಭಾಗಗಳನ್ನು ಹೊಂದಿದ್ದು ಅದರಲ್ಲಿ ಕೆಲವು ಪ್ರಶಸ್ತಿ ವಿಜೇತರುಗಳು ಕೆಳಗಿನಂತಿವೆ: ನೆಚ್ಚಿನ ಧಾರಾವಾಹಿ : ಅಮೃತ ವರ್ಷಿಣಿ; ನೆಚ್ಚಿನ ಪತಿ-ಪತ್ನಿ ಜೋಡಿ: ಅಮೃತ -ವಿಜಯ್ (ಅಮೃತವರ್ಷಿಣಿ)

ಸುವರ್ಣ ನೆಚ್ಚಿನ ನಟಿ ಅಮೃತಾ

ಪರಿವಾರದ ನೆಚ್ಚಿನ ನಟಿ : ಅಮೃತಾ (ಅಮೃತವರ್ಷಿಣಿ); ನೆಚ್ಚಿನ ಹಾಸ್ಯ ನಟ: ಮೀನಾನಾಥ್ ( ಪಂಚರಂಗಿ ಪೊಂ ಪೊಂ); ನೆಚ್ಚಿನ ಅತ್ತೆ-ಸೊಸೆ : ಅಮೃತ- ಶಕುಂತಲಾದೇವಿ(ಅಮೃತವರ್ಷಿಣಿ); ನೆಚ್ಚಿನ ಕಲಾವಿದ : ಆಕಾಶ್(ಆಕಾಶದೀಪ).

ಅನೂಪ್ ಚಂದ್ರಶೇಖರನ್ ಏನು ಹೇಳುತ್ತಾರೆ?

ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರನ್ ಹೇಳುವ ಹಾಗೆ, "ಕಳೆದ ಕೆಲವು ವರ್ಷಗಳಿಂದ ನಮ್ಮ ವೀಕ್ಷಕರು ಈ ಎಲ್ಲ ಕಲಾವಿದರುಗಳ ಅಭಿನಯಿಸಿರುವ ಪ್ರತ್ಯೇಕ ಕಾರ್ಯಕ್ರಮಗಳನ್ನು ನೋಡುತ್ತಾ , ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಆದರೆ ಈ ಸಮಾರಂಭವು ಸಂಪೂರ್ಣ ಸುವರ್ಣ ಪರಿವಾರದ ಪ್ರತಿಭೆಗಳು ಒಂದೆಡೆ ಸೇರಿದ ಏಕೈಕ ಕಾರ್ಯಕ್ರಮ ಇದಾಗಿದೆ.

ರಸಸಂಜೆ ಪ್ರಸಾರದ ನಿರೀಕ್ಷೆಯಲ್ಲಿ ವೀಕ್ಷಕರು

ಈ ರಸಸಂಜೆಯ ಕಾರ್ಯಕ್ರಮ ಪ್ರಸಾರವನ್ನು ನಮ್ಮ ವೀಕ್ಷಕರು ಉತ್ಸಾಹದಿಂದ ನೋಡಿ ಸಂತಸ ಪಡುವರೆಂಬ ವಿಶ್ವಾಸ ನನ್ನದು. ಇಂಥಹ ಅದ್ಭುತ ವೇದಿಕೆಯಲ್ಲಿ ಸುವರ್ಣ ಪರಿವಾರವನ್ನು ಒಟ್ಟಾಗಿ ನೋಡುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ".

ವಿಭಿನ್ನ ಮನರಂಜನಾ ಕಾರ್ಯಕ್ರಮಗಳ ಸಮ್ಮಿಲನ

ಸುವರ್ಣ ವಾಹಿನಿಯು ವಿನೂತನ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವಾಹಿನಿಯಾಗಿದೆ. ಕುಟುಂಬಸಮೇತರಾಗಿ ಕುಳಿತು ವೀಕ್ಷಿಸುವ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದು ಕಾರ್ಯಕ್ರಮಗಳಾದ ಕನ್ನಡದ ಕೊಟ್ಯಾಧಿಪತಿ, ಸುವರ್ಣ ಸೂಪರ್ ಜೋಡಿ, ಮನೆ ಅಡುಗೆಮನೆ, ಅಮೃತ ವರ್ಷಿಣಿ, ಚುಕ್ಕಿ, ಪಲ್ಲವಿ ಅನುಪಲ್ಲವಿ, ಆಕಾಶದೀಪ,ಅರಗಿಣಿ, ಪ್ರಿಯದರ್ಶಿನಿ,ಮಿಲನ, ಸರಸ್ವತಿ, ಕರ್ಪೂರದ ಗೊಂಬೆ ಮತ್ತು ಪಂಚರಂಗಿ ಪೊಂ ಪೊಂ ಮೊದಲಾದವುಗಳು.

English summary
Suvarna Pariwar Awards -2013 which will telecast on this Sep 14 & 15 6pm. Suvarna favorite serial Amruta Varshini, favorite comedy actor Meenanath (Pancharagi Pom pom). Here is the list.
Please Wait while comments are loading...