»   » ಸ್ಟಾರ್ ಸಿಂಗರ್ ನಲ್ಲಿ ಉಸ್ತಾದ್ ಫಯಾಜ್ ಖಾನ್

ಸ್ಟಾರ್ ಸಿಂಗರ್ ನಲ್ಲಿ ಉಸ್ತಾದ್ ಫಯಾಜ್ ಖಾನ್

Posted By:
Subscribe to Filmibeat Kannada

ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ "ಸ್ಟಾರ್ ಸಿಂಗರ್"ನಲ್ಲಿ ಹಿಂದೂಸ್ಥಾನಿ ಸಂಗೀತದ ಗಾನಸುಧೆ. ಇದೇ ಏಪ್ರಿಲ್ 13 ರ ಭಾನುವಾರ ಸಂಜೆ 9 ಗಂಟೆಗೆ ಪ್ರಸಾರವಾಗಲಿದೆ.

ಹಿಂದೂಸ್ಥಾನಿ ಸಂಗೀತ ಎಂದಾಕ್ಷಣ ಸರ್ವೇಸಾಮಾನ್ಯವಾಗಿ ನೆನಪಾಗುವ ವ್ಯಕ್ತಿ ಉಸ್ತಾದ್ ಫಯಾಜ್ ಖಾನ್. ಹಿಂದೂಸ್ಥಾನಿ ಸಂಗೀತದಲ್ಲಿ ಅವರ ಸಾಧನೆ ಶ್ಲಾಘನೀಯ. ಈ ಮಹನೀಯ ವ್ಯಕ್ತಿ ಈ ವಾರದ ಸ್ಟಾರ್ ಸಿಂಗರ್ ಸಂಚಿಕೆಯ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. [ಕ್ರೈಂ ಫೈಲ್ 2 - ನಾವ್ ಕಥೆ ಹೇಳ್ತೀವಿ, ನೀವ್ ಎಚ್ಚರವಾಗಿರಿ]

ಸ್ಟಾರ್ ಸಿಂಗರ್ ನ ಸೆಮಿ ಕ್ಲಾಸಿಕಲ್ ರೌಂಡ್ ನಲ್ಲಿ ಟಾಪ್ 7 ಸ್ಪರ್ಧಿಗಳು ಭಕ್ತಿರಸ ತುಂಬಿ ಗಾನಸುಧೆ ಹರಿಸಲಿದ್ದಾರೆ ಮತ್ತು ವಿಶೇಷವಾಗಿ ಹಿಂದೂಸ್ಥಾನಿ ಸಂಗೀತ ವಾದ್ಯಗಳಾದ ಸೀತಾರ್, ಮೊರ್ಚಂಗ್, ಮೃದಂಗ ಮೊದಲಾದ ಉಪಕರಣಗಳನ್ನೂ ಬಳಸಲಾಗುತ್ತಿದೆ.

ಭಕ್ತಿರಸವನ್ನೇ ತುಂಬಿ ಹರಿಸುವ ಸಂಚಿಕೆ

ಭಕ್ತಿರಸವನ್ನೇ ತುಂಬಿ ಹರಿಸುವ ಈ ವಾರದ ಸಂಚಿಕೆಯ ಸಮಸ್ತ ಕನ್ನಡಿಗರೆಲ್ಲರೂ ಮೆಚ್ಚುವಂತಹದ್ದು.

ಯಾರಿಗುಂಟು ಯಾರಿಗಿಲ್ಲ ಈ ಸೌಭಾಗ್ಯ

ಈ ವಾರದ ಸಂಚಿಕೆಗೆ ಆಗಮಿಸಿದ ಅಪರೂಪದ ಮಹನೀಯ ಉಸ್ತಾದ್ ಫಯಾಜ್ ಖಾನ್ ರ ಹಾಡು ಕೇಳುವ ಸೌಭಾಗ್ಯ ಯಾರಿಗುಂಟು ಯಾರಿಗಿಲ್ಲ.

ಸ್ಪರ್ಧಿಗಳಿಗೆ ಸಲಹೆ, ಪ್ರೋತ್ಸಾಹ, ಆಶೀರ್ವಾದ

ಸ್ಪರ್ಧಿಗಳ ಫರ್ಫಾರ್ಮೆನ್ಸ್ ಗೆ ಸೂಕ್ತವಾದ ಸಲಹೆ, ಪ್ರೋತ್ಸಾಹ ಹಾಗೂ ಆಶೀರ್ವಾದದ ಸುರಿಮಳೆ ಹರಿಸಿದ ಭಾಗ್ಯವೂ ಜೊತೆಗಿರುತ್ತದೆ.

ವಿಜಯ್ ಪ್ರಕಾಶ್ ಅವರಿಂದ ಕ್ಲಾಸಿಕಲ್ ಸಂಗೀತ

ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರಿಂದಲೂ ಕ್ಲಾಸಿಕಲ್ ಸಂಗೀತ ಕೇಳಬಹುದು.

ಭಕ್ತಿರಸ ಪ್ರಧಾನವಾದ ಸೆಮಿ ಕ್ಲಾಸಿಕಲ್ ರೌಂಡ್

ಇಂತಹ ಎಷ್ಟೋ ವಿಷಯಗಳ ವಿಶೇಷತೆಗಳನ್ನು ತಿಳಿಯುವ ಭಕ್ತಿರಸ ಪ್ರಧಾನವಾದ ಸೆಮಿ ಕ್ಲಾಸಿಕಲ್ ರೌಂಡ್ ಅನ್ನು ತಪ್ಪದೇ ನೋಡ್ತೀರಲ್ಲಾ!

English summary
Kannada general entertainment channel Suvarna popular music reality show 'Idea Star Singer' Special Guest Ustad Faiyaz Khan Special episode which will telecast on April 13th Sunday 9 Pm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada