ಜಯಮಾಲಾ ನಿರೂಪಣೆಯಲ್ಲಿ 'ಕಥೆಯಲ್ಲ ಜೀವನ'
ಸುವರ್ಣ ವಾಹಿನಿ ತನ್ನ ವಿಭಿನ್ನ ರಿಯಾಲಿಟಿ ಶೋ 'ಕಥೆಯಲ್ಲ ಜೀವನ' ಕಾರ್ಯಕ್ರಮದ ಮೂಲಕ 2009 ರಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಸಂಚಲನವನ್ನು ಸೃಷ್ಟಿ ಮಾಡಿತ್ತು. ಇಂತಹ ಅದ್ಭುತ ಕಾರ್ಯಕ್ರಮದ ದ್ವಿತೀಯ ಆವೃತ್ತಿ 'ಕಥೆಯಲ್ಲ ಜೀವನ ಸೀಸನ್-2' ಇದೇ ನವೆಂಬರ್ 1 ರಂದು ಪ್ರಸಾರ ಪ್ರಾರಂಭಿಸುತ್ತಿದೆ.
ನೊಂದವರ ಬಾಳಲ್ಲಿ ಆಶಾಕಿರಣ ಮೂಡಿಸುತ್ತಾ, ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಪರಿಹಾರ ಸೂಚಿಸುತ್ತಾ, ಗಂಡ ಹೆಂಡತಿಯರ ಮುನಿಸು, ಅಣ್ಣ ತಮ್ಮಂದಿರ ದಾಯಾದಿತನ, ತಂದೆಮಕ್ಕಳ ಜಗಳ ಹೀಗೆ ಸಂಬಂಧಗಳ ಬೆಲೆಯೇ ಗೊತ್ತಿಲ್ಲದವರಿಗೆ ಅವರುಗಳ ಮಹತ್ವವನ್ನು ತಿಳಿಪಡಿಸುವುದರ ಮೂಲಕ ಪ್ರೇಕ್ಷಕರ ಮನದಾಳಕ್ಕಿಳಿದ ಕಾರ್ಯಕ್ರಮ ಕಥೆಯಲ್ಲ ಜೀವನ.

ಕಥೆಯಲ್ಲ ಜೀವನ ಕಾರ್ಯಕ್ರಮದ ದ್ವಿತೀಯ ಅವತರಣಿಕೆಯು ಖ್ಯಾತ ನಟಿ, ನಿರ್ಮಾಪಕಿ ಜಯಮಾಲಾರವರ ನಿರೂಪಣೆಯಲ್ಲಿ ಮೂಡಿಬರುತ್ತಿರುವುದು ವಿಶೇಷ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಥಮ ಮಹಿಳಾ ಅದ್ಯಕ್ಷರಾಗಿದ್ದ ಜಯಮಾಲಾ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ.


ಸಾಕಷ್ಟು ವಿಶಿಷ್ಟತೆಗಳೊಂದಿಗೆ ಹೊರಬರುತ್ತಿರುವ 2ನೇ ಆವೃತ್ತಿಯು ಜನಸಾಮಾನ್ಯರ ಮನಗೆದ್ದು ವಾಹಿನಿಯನ್ನು ಉತ್ತುಂಗಕ್ಕೇರಿಸುತ್ತದೆಂಬ ನಂಬಿಕೆ ನಮ್ಮದು ಎಂಬ ಅಚಲ ವಿಶ್ವಾಸ ಅನೂಪ್ ಅವರದು. (ಫಿಲ್ಮಿಬೀಟ್ ಕನ್ನಡ)
More from Filmibeat
English summary
Star Network's Suvarna TV Launches a new show "Katheyalla Jeevana season 2". The new Season will be air on November 1 st 2014 Saturday, Sunday 8pm. The show will be hosted by the well-known actress Jayamala, who is known for her versatility and her popularity across borders.


Click it and Unblock the Notifications











