»   » ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಸೀರಿಯಲ್

ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಸೀರಿಯಲ್

Posted By:
Subscribe to Filmibeat Kannada

ಸ್ಟಾರ್ ನೆಟ್ ವರ್ಕ್ ಒಡೆತನದ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯು 'ಪರಿಣೀತ' ಮತ್ತು 'ಅವನು ಮತ್ತೆ ಶ್ರಾವಣಿ' ಎಂಬ ಎರಡು ಹೊಸ ಧಾರಾವಾಹಿಗಳನ್ನು ಇದೇ ಜೂನ್ 16, 2014 ರಿಂದ ಪ್ರಾರಂಭಿಸುತ್ತಿದೆ.

'ಪರಿಣೀತ' ಧಾರಾವಾಹಿಯು ಪ್ರಣತಿ ಎಂಬ ಸುಂದರ ಹಾಗೂ ಬುದ್ಧಿವಂತ ಹುಡುಗಿಯ ಕಥೆ. ಅವಳು ಮತ್ತು ಅರ್ಜುನ್ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುವ ಬಯಕೆಯಲ್ಲಿರುತ್ತಾರೆ. ಆದರೆ 7 ಜನ ಪುರುಷರಿಂದ ಕೂಡಿರುವ, ಮಹಿಳೆಯರನ್ನು ದ್ವೇಷಿಸುವ ಕುಟುಂಬ ಅರ್ಜುನದು.

ಕಾಲಕ್ರಮೇಣ ಎರಡೂ ಕುಟುಂಬದವರನ್ನು ಒಪ್ಪಿಸಿ ಪ್ರಣತಿ ಅರ್ಜುನನನ್‍ನ್ನು ಮದುವೆಯಾಗುತ್ತಾಳೆ. ಅರ್ಜುನ್ ಕುಟುಂಬಕ್ಕೆ ಹೊಸ ಸೇರ್ಪಡೆಯಾದ ಪ್ರಣತಿ ಮಹಿಳೆಯರ ಬಗ್ಗೆ ಅವರಲ್ಲಿದ್ದ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತಾಳೆ ಎಂಬುದೇ ಈ ಕಥೆ. ಇಲ್ಲಿ ಸ್ವಲ್ಪ ನಗು- ರೋಮಾನ್ಸ್, ಭಾವನೆಗಳ ಏರಿಳಿತಗಳ ಸಮ್ಮಿಲನವಿದೆ ಇದೊಂದು ರೋಲರ್ ಕೋಸ್ಟರ್ ಕಥೆಯಾಗಿದೆ.

ಭಾವನಾತ್ಮಕವಾದ ಕಥೆ 'ಪರಿಣೀತ'

ಪಂಚರಂಗಿ ಪೋಂ ಪೋಂ ಖ್ಯಾತಿಯ ನಿರ್ದೇಶಕ ಪೃಥ್ವಿ ರಾಜ್ ಕುಲಕರ್ಣಿ ಪ್ರಪ್ರಥಮ ಬಾರಿಗೆ ಭಾವನಾತ್ಮಕವಾದ ಕಥೆ 'ಪರಿಣೀತ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಈ ಧಾರಾವಾಹಿಯು ಜೂ.16 ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಅವನು ಮತ್ತೆ ಶ್ರಾವಣಿ ಕಥೆ ಏನು?

'ಅವನು ಮತ್ತೆ ಶ್ರಾವಣಿ' ಧಾರಾವಾಹಿಯು ಸೂರ್ಯನ ಪುಟ್ಟ ಮಗಳು ದೀಕ್ಷಾಳ ಮೇಲಿರುವ ಸಹಜ ಪ್ರೀತಿಯಿಂದ ಸೂರ್ಯ ಮತ್ತು ಶ್ರಾವಣಿ ಸಂಪರ್ಕದಲ್ಲಿರುತ್ತಾರೆ. ಶ್ರಾವಣಿ ತಮಿಳಿನವರಾದರೆ, ಸೂರ್ಯ ಕನ್ನಡದ ಗೌಡ.

ಶ್ರಾವಣಿಗೆ ಮಕ್ಕಳೆಂದರೆ ಹುಚ್ಚು ಪ್ರೀತಿ

ತಾಯ್ತನವನ್ನು ಪಡೆಯಲು ನತದೃಷ್ಟೆಯಾದ ಶ್ರಾವಣಿಗೆ ಮಕ್ಕಳೆಂದರೆ ಹುಚ್ಚು ಪ್ರೀತಿ. ತಾಯಿಯಿಲ್ಲದ ತಬ್ಬಲಿಯಾದ ದೀಕ್ಷಾಳಿಗೆ ಅಮ್ಮನ ಪ್ರೀತಿಯನ್ನು ಧಾರೆಯೆರೆದು ತಾಯ್ತನದ ಸುಖವನ್ನು ಕಾಣುತ್ತಾ ಅಮ್ಮ ಮಗಳ ಸಂಬಂಧ ಬೆಸೆದಿದ್ದಳು ಶ್ರಾವಣಿ. ಆದರೆ ಮದುವೆಯಿಂದ ವಿಚ್ಛೇದನ ಪಡೆದಂದಿನಿಂದ ಸೂರ್ಯ ಮಾತ್ರ ಸ್ವಲ್ಪ ಕಠೋರ ಮನಸ್ಕನಾಗಿದ್ದ.

ಕಡೆಗೆ ಕಥೆ ಏನಾಗುತ್ತದೆಂದರೆ...

ಸೂರ್ಯ ಮತ್ತು ಶ್ರಾವಣಿಯರು ಹೇಗೆ ಒಂದಾಗಿ ಒಬ್ಬರನ್ನೊಬ್ಬರು ಅರಿತು ನಡೆಯುತ್ತಾರೆ ಎಂಬುದರ ಸುತ್ತ ಸಾಗುವ ಕಥೆ ಇದಾಗಿದೆ.

'ಅವನು ಮತ್ತೆ ಶ್ರಾವಣಿ' ಇದೇ ಜೂನ್ 16 ರಂದು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ರವಿ ಆರ್ ಗರಣಿ ನಿರ್ಮಿಸಿರುವ ಧಾರಾವಾಹಿ

'ಅವನು ಮತ್ತೆ ಶ್ರಾವಣಿ' ಧಾರಾವಾಹಿಯನ್ನು ರವಿ.ಆರ್.ಗರಣಿ ನಿರ್ಮಿಸುತ್ತಿದ್ದಾರೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಈ ಎರಡೂ ಕಥೆಗಳು ವಿಭಿನ್ನವಾಗಿದ್ದು ಖಂಡಿತವಾಗಿಯೂ ನಮ್ಮ ವೀಕ್ಷಕರ ಮನಗೆಲ್ಲುತ್ತವೆ ಎಂಬ ವಿಶ್ವಾಸ ನನ್ನದು. ನಮ್ಮ ವೀಕ್ಷಕರಿಗೋಸ್ಕರ ಸದಾ ಅತ್ಯುತ್ತಮವಾದ ಕಥೆಗಳನ್ನೇ ಕೊಡಲು ಪ್ರಯತ್ನಿಸುತ್ತಿದ್ದೇವೆ. ನಿಜವಾಗಿಯೂ ಈ ಎರಡು ಹೊಸ ಧಾರಾವಾಹಿಗಳು ಕನ್ನಡ ಮಾರುಕಟ್ಟೆಯಲ್ಲಿರುವ ಸುವರ್ಣ ವಾಹಿನಿಯ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುತ್ತವೆ ಎಂಬುದರಲ್ಲಿ ಸಂದೇಹವಿಲ್ಲ" ಎಂದಿದ್ದಾರೆ.

ಹಲವು ಜನಪ್ರಿಯ ಕಾರ್ಯಕ್ರಮಗಳ ಪ್ರಸಾರ

ಸುವರ್ಣ ವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಮಿಲನ, ಅರಗಿಣಿ, ಪಂಚರಂಗಿ ಪೋಂಪೋಂ, ಆಕಾಶದೀಪ, ಮೀರಾ ಮಾಧವ ಮತ್ತು ಸಿಂಗಾರಿ ಬಂಗಾರಿ. ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತಿವೆ ಈ ಎರಡು ನೂತನ ಧಾರಾವಾಹಿಗಳು.

English summary
Star Network's Kannada General Entertainment channel Suvarna to air Two new fiction shows 'Parineetha' & 'Avanu Matte Shravani' from June 16 th 2014. The serials will go on air from Monday to Friday from 7 pm and 9pm respectively.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada