»   » ಸುವರ್ಣ ಟಿವಿಯಲ್ಲಿ ದಿನೇಶ್ ಬಾಬು ನಿರ್ದೇಶದ ಹೊಸ ಧಾರವಾಹಿ

ಸುವರ್ಣ ಟಿವಿಯಲ್ಲಿ ದಿನೇಶ್ ಬಾಬು ನಿರ್ದೇಶದ ಹೊಸ ಧಾರವಾಹಿ

Posted By:
Subscribe to Filmibeat Kannada

ಸ್ಟಾರ್ ನೆಟ್ವರ್ಕಿನ ಸುವರ್ಣ ಮನೋರಂಜನಾ ವಾಹಿನಿಯು ಇದೇ ಜನವರಿ 20ರಿಂದ ಹೊಸ ಧಾರವಾಹಿಯನ್ನು ಪ್ರಾರಂಭಿಸುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ, ಸಿನಿಮಾಟೋಗ್ರಾಫರ್ ದಿನೇಶ್ ಬಾಬು ಈ ಧಾರವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಈ ಧಾರವಾಹಿಗೆ 'ಸ್ವಾತಿಮುತ್ತು' ಎಂದು ನಾಮಕರಣ ಮಾಡಲಾಗಿದೆ. ಪ್ರತಿ ಸೋಮವಾರದಿಂದ ಶನಿವಾರದ ವರೆಗೆ ಸಂಜೆ 7.30ಕ್ಕೆ ಧಾರವಾಹಿ ಪ್ರಸಾರವಾಗಲಿದೆ.

ಸ್ವಾತಿಮುತ್ತು ಒಂದು ವಿಭಿನ್ನವಾದ ಕಥೆ. ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದೆ. ಮುಖ್ಯ ಪಾತ್ರಧಾರಿಯ ಕಥೆ ವಿಶಿಷ್ಟವಾಗಿದ್ದು, ಈ ರೀತಿ ಕಥೆ ಇರುವ ಧಾರವಾಹಿಯು ಕನ್ನಡ ಮನೋರಂಜನಾ ವಾಹಿನಿಯಲ್ಲಿ ಇದುವರೆಗೆ ಬಂದಿಲ್ಲ ಎನ್ನುತ್ತಾರೆ ಸುವರ್ಣ ವಾಹಿನಿಯ ಬ್ಯೂಸಿನೆಸ್ ಹೆಡ್ ಅನೂಪ್ ಚಂದ್ರಶೇಖರನ್.

ಒಬ್ಬ ಶ್ರೀಮಂತ, ಸುಂದರ ಮತ್ತು ಮುಗ್ದ ಹುಡುಗ ಮುತ್ತು ಸುತ್ತ ಹಣೆದಿರುವ ಕಥೆಯನ್ನಾಧರಿಸಿದ ಧಾರವಾಹಿ ಇದು. ಶಿಕ್ಷಕಿ ರುಕ್ಮಿಣಿ ಮತ್ತು ಬುದ್ದಿಮಾಂದ್ಯ ಹುಡುಗಿ ಭಾಮಾ ಮುತ್ತುವಿನ ಜೀವನದಲ್ಲಿ ಪ್ರವೇಶ ಮಾಡುವುದರ ನಂತರ ಕಥೆ ಸಾಕಷ್ಟು ಆಕಸ್ಮಿಕ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.

Suvarna TV new serial Swathi Muttu from Jan 20

ಸ್ವಾತಿಮುತ್ತು ಧಾರವಾಹಿ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸ್ಟಾರ್ ಸಿಂಗರ್, ಅಮೃತವರ್ಷಿಣಿ, ಪ್ರಿಯದರ್ಶಿನಿ, ಮಿಲನ, ಅರಗಿಣಿ, ಪಂಚರಂಗಿ ಪೋಂ ಪೋಂ, ಆಕಾಶದೀಪ, ಸರಸ್ವತಿ, ಕರ್ಪೂರದ ಗೊಂಬೆ, ಮೀರಾ ಮಾಧವ ಮುಂತಾದ ಧಾರವಾಹಿಗಳ ಗುಂಪಿಗೆ ಸ್ವಾತಿ ಮುತ್ತು ಹೊಸ ಸೇರ್ಪಡೆ.

ಸ್ವಾತಿಮುತ್ತು ಧಾರವಾಹಿ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಧಾರವಾಹಿ. ಇದು ಪ್ರಚಲಿತ ಧಾರವಾಹಿಗಳೊಂದಿಗೆ ಎದ್ದು ನಿಂತು ಯಶಸ್ಸನ್ನು ಹೊಂದುತ್ತದೆ ಎನ್ನುವುದು ಸುವರ್ಣ ವಾಹಿನಿಯ ವಿಶ್ವಾಸದ ಮಾತು.

English summary
Suvarna TV entertainment channel's new serial Swathi Muttu from Jan 20. This serial will telecast from 7.30PM onwards.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada