»   » ನೆಚ್ಚಿನ ರಿಯಾಲಿಟಿ ಶೋ: ಕನ್ನಡದ ಕೋಟ್ಯಾಧಿಪತಿ

ನೆಚ್ಚಿನ ರಿಯಾಲಿಟಿ ಶೋ: ಕನ್ನಡದ ಕೋಟ್ಯಾಧಿಪತಿ

Posted By:
Subscribe to Filmibeat Kannada
ಕನ್ನಡದ ಮನೋರಂಜನಾ ವಾಹಿನಿಯಾದ ಸುವರ್ಣ ಈಗ ಅದರ ಪ್ರಥಮ ವರ್ಷದ "ಸುವರ್ಣ ಪರಿವಾರ ಅವಾರ್ಡ್ಸ್ -2012" ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ಶನಿವಾರ ಸೆಪ್ಟೆಂಬರ್ 29 ಮತ್ತು ಭಾನುವಾರ 30 ರಂದು ಸಂಜೆ 6 ಗಂಟೆಗೆ ಪ್ರಸಾರ ಮಾಡುತ್ತಿದೆ.

ಕಲಾವಿದರುಗಳಿಂದ ತುಂಬಿ ತುಳುಕುತ್ತಿದ್ದ ಈ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್‍ ರಾಜ್ ಕುಮಾರ್, ಭಾರತಿ ವಿಷ್ಣುವರ್ಧನ್ , ಲಕ್ಷ್ಮೀ, ಹೇಮಾ ಚೌಧುರಿ, ಅಂಬಿಕಾ ಮೊದಲಾದವರುಗಳನ್ನೊಳಗೊಂಡ ಕಲಾವಿದರ ಬಳಗವೇ ನೆರೆದಿತ್ತು.

ಅಲ್ಲದೇ ಸುವರ್ಣದ ವಾಹಿನಿಯಲ್ಲಿ ಬರುವ ಹಲವು ಕಲಾವಿದರುಗಳು ತಮ್ಮ ನೃತ್ಯದಿಂದ ನೆರೆದ ಪ್ರೇಕ್ಷಕರನ್ನು ರಂಜಿಸಿದರು. "ಸುವರ್ಣ ಪರಿವಾರ್ ಅವಾರ್ಡ್ 2012" ರ ಪ್ರಾಯೋಜಕತ್ವವನ್ನು ಸನ್ ಫೀಸ್ಟ್ ವಹಿಸಿದೆ.

ವಾಹಿನಿಯ ಬಿಸಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಈ ಸಂದರ್ಭದಲ್ಲಿ ಮಾತನಾಡುತ್ತಾ, "ಕಳೆದ ಕೆಲವು ವರ್ಷಗಳಿಂದ ನಮ್ಮ ವೀಕ್ಷಕರು ಈ ಎಲ್ಲ ಕಲಾವಿದರುಗಳು ಅಭಿನಯಿಸಿರುವ ಪ್ರತ್ಯೇಕ ಕಾರ್ಯಕ್ರಮಗಳನ್ನು ನೋಡುತ್ತಾ , ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಆದರೆ ಈ ಸಮಾರಂಭವು ಸಂಪೂರ್ಣ ಸುವರ್ಣ ಪರಿವಾರದ ಪ್ರತಿಭೆಗಳು ಒಂದೆಡೆ ಸೇರಿದ ಏಕೈಕ ಕಾರ್ಯಕ್ರಮ ಎಂದಿರುವ ಅವರು...

ಈ ರಸಸಂಜೆಯ ಕಾರ್ಯಕ್ರಮ ಪ್ರಸಾರವನ್ನು ನಮ್ಮ ವೀಕ್ಷಕರು ಉತ್ಸಾಹದಿಂದ ನೋಡಿ ಸಂತಸ ಪಡುವರೆಂಬ ವಿಶ್ವಾಸ ನಮಗಿದೆ. ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ತುಂಬ ಸಂತಸವಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ" ಎಂದು ಈ ಸಂದರ್ಭದಲ್ಲಿ ಹೇಳಿದರು.

ಸುವರ್ಣ ವಾಹಿನಿಯು ವಿನೂತನ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವಾಹಿನಿಯಾಗಿದೆ. ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸುವ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ.

ಕನ್ನಡದ ಕೊಟ್ಯಾಧಿಪತಿ, ಕಿಚನ್ ಕಿಲಾಡಿಗಳು, ಬೊಂಬಾಟ್ ಭೋಜನ, ಕೃಷ್ಣ ರುಕ್ಮಿಣಿ, ಅಮೃತ ವರ್ಷಿಣಿ, ಚುಕ್ಕಿ, ಚೆಲುವಿ, ಪಲ್ಲವಿ ಅನುಪಲ್ಲವಿ, ಆಕಾಶದೀಪ, ಕೆಳದಿ ಚೆನ್ನಮ್ಮ, ಭಾಗ್ಯವಂತರು ಮತ್ತು ಪಂಚರಂಗಿ ಪೊಂ ಪೊಂ ಮುಂತಾದ ಕಾರ್ಯಕ್ರಮಗಳು ವೈವಿಧ್ಯತೆಯನ್ನು ಹೊಂದಿದೆ ಎಂದು ಅನೂಪ್ ಚಂದ್ರಶೇಖರನ್ ಹೇಳಿದ್ದಾರೆ.

ಸನ್ ಫೀಸ್ಟ್ ಸುವರ್ಣ ಪರಿವಾರ್ ಅವಾರ್ಡ್ 33 ವಿಭಾಗಗಳಲ್ಲಿ ಪ್ರಶಸ್ತಿ ನೀಡಿತ್ತಿದ್ದು, ಅದರಲ್ಲಿ ಕೆಲವು ಪ್ರಶಸ್ತಿ ವಿಜೇತ ವಿಭಾಗಗಳ ವಿವರಗಳು ಕೆಳಗಿನಂತಿವೆ :

ನೆಚ್ಚಿನ ಧಾರಾವಾಹಿ : ಕೃಷ್ಣ ರುಕ್ಮಿಣಿ
ನೆಚ್ಚಿನ ರಿಯಾಲಿಟಿ ಶೋ: ಕನ್ನಡದ ಕೋಟ್ಯಾಧಿಪತಿ
ನೆಚ್ಚಿನ ಹಾಸ್ಯ ಕಲಾವಿದ : ಮೀನಾನಾಥ್ ( ಪಂಚರಂಗಿ ಪೊಂ ಪೊಂ)
ನೆಚ್ಚಿನ ನಿರೂಪಕ: ಅಕುಲ್
ನೆಚ್ಚಿನ ಕಲಾವಿದ : ಅಮಯ್ (ಪ್ರೀತಿಯಿಂದ)
ನೆಚ್ಚಿನ ಕಲಾವಿದೆ: ಅಮೃತ ( ಅಮೃತವರ್ಷಿಣಿ)

English summary
Suvarna TV Parivaar Awards 2012 will telecast on Sept 29th & 30th 6pm. Kannadada Kotyadhipathi programme selected as favourite reality show. Krishna Rukmini selected as favourite serial. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada