»   » ಬಿಗ್ ಬಾಸ್ ರಿಯಾಲಿಟಿ ಶೋಗೆ ಸ್ವಾಮಿ ನಿತ್ಯಾನಂದ?

ಬಿಗ್ ಬಾಸ್ ರಿಯಾಲಿಟಿ ಶೋಗೆ ಸ್ವಾಮಿ ನಿತ್ಯಾನಂದ?

Posted By:
Subscribe to Filmibeat Kannada
ಭಾರತದ ಅತಿದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಾರ್ಯಕ್ರಮ 'ಬಿಗ್ ಬಾಸ್'. ಸಾಕಷ್ಟು ವಾದ ವಿವಾದ, ಚರ್ಚೆಗೂ ಗ್ರಾಸವಾಗಿರುವ ಈ ಶೋ ಸೀಸನ್ ನಿಂದ ಸೀನಸ್ ಗೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.

ಸಿನಿಮಾ ತಾರೆಗಳು, ಹಾಟ್ ಬೆಡಗಿಯರು, ಸ್ವಾಮೀಜಿಗಳು, ವಿವಾದಾತ್ಮಕ ವ್ಯಕ್ತಿಗಳನ್ನು ಕರೆತರುವಲ್ಲಿ ಶೋನ ನಿರ್ವಾಹಕರು ಉಳಿದೆಲ್ಲಾ ರಿಯಾಲಿಟಿ ಶೋಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದೇ ಹೇಳಬೇಕು.

ಈಗ ಈ ಶೋನ 6ನೇ ಸೀಸನ್ ಗೆ ವಿವಾದಾತ್ಮಕ ದೇವಮಾನವ ಎಂದೇ ಕರೆಸಿಕೊಂಡಿರುವ ಸ್ವಾಮಿ ನಿತ್ಯಾನಂದ ಅವವರನ್ನು ಕರೆತರಲು ಶೋನ ಆಯೋಜಕರು ಮುಂದಾಗಿದ್ದಾರೆ. ಸ್ವಾಮಿ ನಿತ್ಯಾನಂದರ ಪರಿಚಯ ಎಲ್ಲರಿಗೂ ಇದ್ದೇ ಇದೆ ಎಂದು ಭಾವಿಸುತ್ತೇನೆ. ಇಲ್ಲಿ ಅವರ ಹಳೆಯ ವಿಡಿಯೋ ಕಥೆಯನ್ನು ಮತೊಮ್ಮೆ ನೆನಪಿಸುವ ಗೋಜಿಗೆ ನಾವು ಹೋಗುತ್ತಿಲ್ಲ.

ಹೌದೆ ಸ್ವಾಮಿಜಿಗಳು 'ಬಿಗ್ ಬಾಸ್ 6'ಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರಂತೆ ಎಂದು ಈ ಬಗ್ಗೆ ನಿತ್ಯಾನಂದ ಅವರ ವಕ್ತಾರ ದಲೆ ಭಗ್ವಾಗರ್ ಅವರನ್ನು ಕೇಳಲಾಗಿ ಅವರು, "ಈ ಹಿಂದೆ ಸಾಕಷ್ಟು ಸಲ ಸ್ವಾಮಿಜೀಗಳನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಭಾಗವಹಿಸುತ್ತಾರೋ ಇಲ್ಲವೋ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ" ಎಂದು ಮೌನಕ್ಕೆ ಶರಣಾಗಿದ್ದಾರೆ.

'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸುವವರ ಬಗ್ಗೆ ತುಂಬಾ ರಹಸ್ಯ ಕಾಪಾಡಿಕೊಂಡುಬರಲಾಗುತ್ತಿದೆ. ಸ್ವಾಮಿ ನಿತ್ಯಾನಂದ ಅವರ ವಿಷಯದಲ್ಲೂ ಹೀಗಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸತ್ಯಾಸತ್ಯತೆಗಳು ಇನ್ನಷ್ಟೇ ಗೊತ್ತಾಗಬೇಕು.

'ಬಿಗ್ ಬಾಸ್ 6' ರಿಯಾಲಿಟಿ ಶೋ ಅಕ್ಟೋಬರ್ 7, 2012ರಿಂದ ಜನವರಿ 2013ರವರೆಗೆ ನಡೆಯಲಿದೆ. ರಾತ್ರಿ 9 ಗಂಟೆ ಈ ಶೋ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಾರಿಯ ಶೋ ನಟ ಸಲ್ಮಾನ್ ಖಾನ್ ಸಮರ್ಪಿಸಲಿದ್ದಾರೆ. (ಏಜೆನ್ಸೀಸ್)

English summary
If rumours are to be believed, India's most controversial spiritual leader Swami Nithyananda might be entering the country's biggest reality show Bigg Boss 6.
Please Wait while comments are loading...