»   » 'ಬಿಗ್ ಬಾಸ್ ಸೀಸನ್ 2' ಶೋಗೆ ಸ್ವಾಮಿ ನಿತ್ಯಾನಂದ?

'ಬಿಗ್ ಬಾಸ್ ಸೀಸನ್ 2' ಶೋಗೆ ಸ್ವಾಮಿ ನಿತ್ಯಾನಂದ?

By: ಉದಯರವಿ
Subscribe to Filmibeat Kannada

ಕನ್ನಡದ ಬಿಗ್ ರಿಯಾಲಿಟಿ ಶೋ 'ಬಿಗ್ ಬಾಸ್ 2'ಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಬಾರಿ ಯಾರೆಲ್ಲಾ ಪ್ರಮುಖರು ಶೋನಲ್ಲಿ ಇರುತ್ತಾರೆ ಎಂಬ ಬಗ್ಗೆ ಕುತೂಹಲವಂತೂ ಇದ್ದೇ ಇದೆ. ಈಗಾಗಲೆ ಹಲವಾರು ಹೆಸರುಗಳು ಕೇಳಿಬಂದಿದ್ದು ಈಗ ಹೊಸ ಸ್ವಾಮೀಜಿಯ ಹೆಸರು ಕೇಳಿಬಂದಿದೆ.

ಮೊದಲ ಆವೃತ್ತಿಯಲ್ಲಿ ಇಬ್ಬರು ಸ್ವಾಮೀಜಿಗಳಾದ ಬ್ರಹ್ಮಾಂಡ ಗುರೂಜಿ ಹಾಗೂ ಕಾಳಿಮಠದ ರಿಷಿಕುಮಾರ ಸ್ವಾಮೀಜಿ ಇಬ್ಬರೂ ಕಾಣಿಸಿಕೊಂಡು ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿದ್ದರು. ಈಗ ಬಿಗ್ ಬಾಸ್ 2ಗೆ ಕೇಳಿಬಂದಿರುವ ಸ್ವಾಮೀಜಿ ಹೆಸರು ಬಿಡದಿಯ ನಿತ್ಯಾನಂದ. ['ಬಿಗ್ ಬಾಸ್ 2' ಶೋನಲ್ಲಿ ಇವರೆಲ್ಲಾ ಇರ್ತಾರಾ?]

Swami Nityananda

ಈಗಾಗಲೆ ಸುವರ್ಣ ವಾಹಿನಿ ನಿತ್ಯಾನಂದ ಅವರನ್ನು ಸಂಪರ್ಕಿಸಿದ್ದು ಇನ್ನು ಅವರು ಗ್ರೀನ್ ಸಿಗ್ನಲ್ ಕೊಡುವುದೊಂದು ಬಾಕಿ ಇದೆ. ಒಂದು ವೇಳೆ ನಿತ್ಯಾನಂದ ಸ್ವಾಮೀಜಿ ಶೋಗೆ ಅಡಿಯಿಟ್ಟರೆ ಕಿರುತೆರೆಯಲ್ಲಿ ಭೂಕಂಪ ಗ್ಯಾರಂಟಿ.

ಹಲವಾರು ಆರೋಪ, ಅನೇಕ ಅನಿರೀಕ್ಷಿತ ಘಟನೆಗಳ ಕಾರಣ ಸ್ವಾಮಿ ನಿತ್ಯಾನಂದ ಅವರು ವಿವಾದಾಸ್ಪದ ಸ್ವಾಮಿ ಎನ್ನಿಸಿಕೊಂಡಿದ್ದಾರೆ. ಈಗ ಅವರು ಅಷ್ಟೋ ಇಷ್ಟೋ ರಿಲ್ಯಾಕ್ಸ್ ಆಗಲು 'ಬಿಗ್ ಬಾಸ್' ಶೋ ಅವರ ಪಾಲಿಗೆ ಹೇಳಿ ಮಾಡಿಸಿದಂತಿದೆ.

ಬಿಗ್ ಬಾಸ್ 2 ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಾಗಿಣಿ, ಜಗ್ಗೇಶ್, ರೇಣುಕಾಚಾರ್ಯ, ಪ್ರೇಮಕುಮಾರಿ (ರಾಮದಾಸ್ ಪ್ರಕರಣ), ಮಾಸ್ಟರ್ ಆನಂದ್, ರಾಧಿಕಾ ಕುಮಾರಸ್ವಾಮಿ, ಸುಮನ್ ರಂಗನಾಥ್ ಮುಂತಾದವರ ಹೆಸರುಗಳು ಕೇಳಿಬಂದಿವೆ.

English summary
Controversial spiritual leader Swami Nithyananda is likely to be a part of reality show Bigg Boss 2 Kannada this season. The second season of Kannada's most loved reality show Bigg Boss 2 is starting soon on Suvarna Channel. Get ready for a roller coaster ride buddies.
Please Wait while comments are loading...