Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನರಂಜನಾ ಕ್ಷೇತ್ರದಲ್ಲಿ 18 ವರ್ಷ ಪೂರೈಸಿದ ನಟಿ ಶ್ವೇತಾ ಚೆಂಗಪ್ಪ; ಪತಿಯಿಂದ ಸರ್ಪ್ರೈಸ್ ಗಿಫ್ಟ್
ಕಿರುತೆರೆ ಮತ್ತು ಬೆಳ್ಳಿ ಪರದೆ ಮೇಲೆ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಅವರಿಗೆ ಜನವರಿ 26 ವಿಶೇಷವಾದ ದಿನ. ಧಾರಾವಾಹಿಯಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ನಟಿ ಶ್ವೇತಾ ಟಿವಿ, ಸಿನಿಮಾ, ನಿರೂಪಣೆ ಬಿಗ್ ಬಾಸ್ ರಿಯಾಲಿಟಿ ಶೋ, ಸದ್ಯ ಮಜಾ ಟಾಕೀಸ್ ರಾಣಿಯಾಗಿ ಮಿಂಚುತ್ತಿರುವ ನಟಿ ಶ್ವೇತಾ ಬಣ್ಣದ ಲೋಕಕ್ಕೆ ಕಾಲಿಟ್ಟು 18 ವರ್ಷಗಳಾಗಿದೆ.
18 ವರ್ಷದ ಪಯಣದ ಬಗ್ಗೆ ನಟಿ ಶ್ವೇತಾ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಶ್ವೇತಾ ಅವರ ಅದ್ಭುತ ಪಯಣದ ಬಗ್ಗೆ ವಿಡಿಯೋ ಮಾಡಿರುವುದು ಪತಿ ಕಿರಣ್. ವಿಡಿಯೋವನ್ನು ಶೇರ್ ಮಾಡಿ, ತನ್ನ ದೀರ್ಘ ಪಯಣದ ಬಗ್ಗೆ ಭಾವುಕ ಸಂದೇಶ ರವಾಸಿದ್ದಾರೆ.
ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..

18 ವರ್ಷದ ಪಯಣಕ್ಕೆ ಪತಿಯಿಂದ ವಿಶೇಷ ವಿಡಿಯೋ ಗಿಫ್ಟ್
'ಹರುಷ, ಆನಂದಭಾಷ್ಪ ಎಲ್ಲ ಒಟ್ಟಾಗಿ ಈ ವಿಡಿಯೋ ನೋಡಿದ ಮೇಲೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಈ ವಿಡಿಯೋ ಮಾಡಿದ್ದು ನನ್ನ ಗಂಡ. ಇವತ್ತು ಬೆಳ್ಳಿಗೆ ಆನಂದ ಭಾಷ್ಪದಿಂದ ನನಗೆ ಮಾತೇ ಹೊರಡಲಿಲ್ಲ. ಒಂದೂವರೆ ದಶಕಕ್ಕಿಂತಲೂ ಹೆಚ್ಚಿನ ಸತತ ಸಿನಿಮಾ, ಟಿವಿ ಇಂಡಸ್ಟ್ರಿಯಲ್ಲಿ ಪಯಣ.'

ಜನವರಿ 26 ಶ್ವೇತಾ ಪಾಲಿನ ವಿಶೇಷ ದಿನ
'ಜನವರಿ 26 ನನ್ನ ಜೀವನದಲ್ಲಿ ಮರೆಯಲಾರದ ದಿನ. ನನ್ನ ಪರಿಚಯ ಈ ಪ್ರಪಂಚಕ್ಕೆ ಆದ ಮೊದಲ ದಿನ, ಕ್ಯಾಮರಾ ಎದುರಿಸಿದ ಮೊದಲ ದಿನ. ನನ್ನನ್ನು ಪರಿಚಯಿಸಿದ ಎಸ್. ನಾರಾಯಣ್ ಸರ್ ಗೆ ನನ್ನ ಕೋಟಿ ನಮನ. ನನಗೆ ಯಾವಾಗಲೂ ಬೆಂಗಾವಲಾಗಿ ನಿಂತ ನನ್ನ ತಾಯಿಗೆ ಕೋಟಿ ನಮನ. ನನಗೆ ಯಾವಾಗಲೂ ಬೆಂಬಲವನ್ನು ಕೊಟ್ಟ ನನ್ನ ಕುಟುಂಬದವರಿಗೆ ನನ್ನ ಕೋಟಿ ನಮನ.'

ಕೋಟಿ ನಮನ ಸಲ್ಲಿಸಿದ ಶ್ವೇತಾ
'ಜೊತೆ ಜೊತೆಯಾಗಿ ನನ್ನ ಕನಸನ್ನು ನನಸು ಮಾಡುತ್ತಿರುವ ನನ್ನ ಪತಿಗೆ ನನ್ನ ಕೋಟಿ ನಮನ. ಇಷ್ಟು ವರ್ಷಗಳ ಕಾಲ ನನಗೆ ಊಟ ಕೊಟ್ಟ ಪ್ರೊಡಕ್ಷನ್ ಹುಡುಗರಿಂದ ನಿರ್ಮಾಪಕರವರೆಗೂ, ಎಲ್ಲಾ ಡೈರೆಕ್ಟರ್ಸ್, ನಿರ್ದೇಶನ ತಂಡ, ತಾಂತ್ರಿಕ ತಂಡ, ಕಾಸ್ಟ್ಯೂಮ್ ಡಿಸೈನರ್, ಛಾಯಾಗ್ರಾಹಕರು ಎಲ್ಲರಿಗೂ, ಪ್ರತಿಯೊಬ್ಬರಿಗೂ ಹಾಗೂ ನನ್ನ ಏಳಿಗೆಯನ್ನು ಬಯಸಿದ ನನ್ನ ನಿಜವಾದ ಸ್ನೇಹಿತರಿಗೂ ಕೋಟಿ ನಮನ. ಕೊನೆಯದಾಗಿ ನನ್ನ ಕಲೆಯನ್ನು ಇಷ್ಟ ಪಟ್ಟು, ಹರಿಸಿ, ಹಾರೈಸಿ ಇಷ್ಟು ಬೆಳೆಸಿದ ಪ್ರತಿಯೊಬ್ಬ ಕನ್ನಡಿಗರಿಗೂ, ನಿಮ್ಮೆಲ್ಲರಿಗೂ ನನ್ನ ಕೋಟಿ ಕೋಟಿ ನಮನ' ಎಂದು ಬರೆದುಕೊಂಡಿದ್ದಾರೆ.
ಮಗನೊಂದಿಗೆ ಮೊದಲ ಬಾರಿ ಪುತ್ತರಿ ಹಬ್ಬ ಆಚರಿಸಿದ ಶ್ವೇತಾ ಚೆಂಗಪ್ಪ

ಸುಮತಿ ಧಾರಾವಾಹಿ ಮೂಲಕ ಎಂಟ್ರಿ
ನಟಿ ಶ್ವೇತಾ ಚೆಂಗಪ್ಪ ಸುಮತಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಎಸ್ ನಾರಾಯಣ್ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿಬಂದಿದೆ. ಈ ಧಾರಾವಾಹಿ ಬಳಿಕ ಶ್ವೇತಾ ಸಾಕಷ್ಟು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಅರುಂಧತಿ, ಯರಿಗುಂಟು ಯಾರಿಗಿಲ್ಲ, ತಂಗಿಗಾಗಿ ಸಿನಿಮಾ ಶ್ವೇತಾಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದೆ.

ಮಜಾ ಟಾಕೀಸ್ ರಾಣಿಯಾಗಿ ಮಿಂಚುತ್ತಿರುವ ಶ್ವೇತಾ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಶ್ವೇತಾ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಶ್ವೇತಾ ಮಗುವಿಗೆ ಜನ್ಮ ನೀಡಿದ ಬಳಿಕ ಬಣ್ಣದ ಲೋಕದಿಂದ ಸ್ವಲ್ಪ ಅಂತರ ಕಯ್ದುಕೊಂಡಿದ್ದರು. ಇದೀಗ ಮತ್ತೆ ಮಜಾ ಟಾಕೀಸ್ ರಾಣಿಯಾಗಿ ಮಿಂಚುತ್ತಿದ್ದಾರೆ.