For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲಿ ಬಂದೆ ಬಿಡ್ತು 'ಟಗರು' ಸಿನಿಮಾ, ಯಾವಾಗ.?

  By Bharath Kumar
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ 'ಟಗರು' ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. 25 ವಾರಗಳನ್ನ ಸಂಭ್ರಮಿಸಿರುವ 'ಟಗರು' ಕೊನೆಗೂ ಟಿವಿಯಲ್ಲಿ ಮೂಡಿ ಬರುತ್ತಿದೆ.

  ಚಿತ್ರಮಂದಿರಗಳಲ್ಲಿ 'ಟಗರು' ಸಿನಿಮಾವನ್ನ ಮಿಸ್ ಮಾಡಿಕೊಂಡಿದ್ದ ಕನ್ನಡ ಕಲಾಭಿಮಾನಿಗಳಿಗೆ ಉದಯ ಟಿವಿ ಸರ್ಪ್ರೈಸ್ ನೀಡಲಿದೆ. ಅತಿ ಶೀಘ್ರದಲ್ಲಿ 'ಟಗರು' ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  ಗುರು.. 25 ವಾರ ಆದ್ರೂ ಇನ್ನೂ ಓಡ್ತಿದೆ ಈ 'ಟಗರು'ಗುರು.. 25 ವಾರ ಆದ್ರೂ ಇನ್ನೂ ಓಡ್ತಿದೆ ಈ 'ಟಗರು'

  ದಿನಾಂಕ ಮತ್ತು ಸಮಯವನ್ನ ಗೌಪ್ಯವಾಗಿಟ್ಟಿರುವ ಉದಯ ಟಿವಿ ಸದ್ಯ ಟಗರು ಪ್ರೀಮಿಯರ್ ಇದೆ ಎಂಬ ಪ್ರೋಮೋ ಟೆಲಿಕಾಸ್ಟ್ ಮಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಗೌರಿ-ಗಣೇಶ್ ಹಬ್ಬದ ಪ್ರಯುಕ್ತ ಟಗರು ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ.

  ಫೆಬ್ರವರಿ 23 ರಂದು ಬಿಡುಗಡೆಯಾಗಿದ್ದ ಟಗರು ಈ ವರ್ಷದ ಬಹುದೊಡ್ಡ ಹಿಟ್ ಸಿನಿಮಾ. ಹಾಗೂ ಶತದಿನ ಆಚರಿಸಿಕೊಂಡ ಚಿತ್ರ ಕೂಡ ಹೌದು. ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಅದ್ಭುತವಾದ ಸ್ಕ್ರೀನ್ ಪ್ಲೇಯಿಂದ ಬಹುದೊಡ್ಡ ಯಶಸ್ಸು ಕಂಡಿದೆ.

  'ದಿ ವಿಲನ್' ನಾಯಕ ಶಿವಣ್ಣನ ಬಾಯಲ್ಲಿ ಬಂದ 'ವಿಲನ್' ಇವರು'ದಿ ವಿಲನ್' ನಾಯಕ ಶಿವಣ್ಣನ ಬಾಯಲ್ಲಿ ಬಂದ 'ವಿಲನ್' ಇವರು

  ನಟ ಶಿವರಾಜ್ ಕುಮಾರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಟ ಧನಂಜಯ್, ವಸಿಷ್ಠ ಸಿಂಹ ಖಳನಾಯಕರಾಗಿ ಮಿಂಚಿದ್ದಾರೆ. ಜಾಕಿ ಭಾವನಾ ಮತ್ತು ಮಾನ್ವಿತಾ ಹರೀಶ್ ಇಬ್ಬರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಕೆಪಿ ಶ್ರೀಕಾಂತ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದರು.

  English summary
  Hatrick hero shiva raj kumar, dhananjay, manvitha harish, vasishta simha starrer tagaru movie will telecast in Udaya Tv at soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X