»   » ಮಲ್ಲಿಕಾ ಶೆರಾವತ್ ಮೇಲೆ ಅವಾಚ್ಯ ಶಬ್ದ ಪ್ರಯೋಗ

ಮಲ್ಲಿಕಾ ಶೆರಾವತ್ ಮೇಲೆ ಅವಾಚ್ಯ ಶಬ್ದ ಪ್ರಯೋಗ

Posted By:
Subscribe to Filmibeat Kannada

ಬಾಲಿವುಡ್ ಜಿಲೇಬಿ ಗರ್ಲ್ ಮಲ್ಲಿಕಾ ಶೆರಾವತ್ ಗೆ ಸೆಟ್ಸ್ ನಲ್ಲಿ ಭಾರಿ ಅಪಮಾನವಾಗಿದೆ. The Bachelorette India - Mere Khaylaon Ki Mallika ಶೋನಲ್ಲಿ ಸ್ಪರ್ಧಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಈ ಡೇಟಿಂಗ್ ಶೋ ಆರಂಭವಾದ ಮೂರೇ ದಿನಕ್ಕೆ ಈ ರೀತಿಯ ಬೆಳವಣಿಗೆಯಾಗಿರುವುದು ಮುಂದೆ ಹೇಗೋ ಏನೋ ಎಂಬ ಆತಂಕ ಎದುರಾಗಿದೆ. ಮಲ್ಲಿಕಾ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕಾದರೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದು ಕಡೆಗೆ ಅದು ಮಲ್ಲಿಕಾ ಕಡೆಗೆ ಹೊರಳಿದೆ.


ಶೋನ ಸ್ಪರ್ಧಿಯೊಬ್ಬ ಮಲ್ಲಿಕಾರನ್ನು ಮನಬಂದಂತೆ ನಿಂದಿಸಿದ್ದಾನೆ. ಇದರಿಂದ ಧೃತಿಗೆಟ್ಟ ಆಕೆ ಸೆಟ್ಸ್ ನಲ್ಲೇ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ. ಈ ಸಂದರ್ಭದಲ್ಲಿ ಶೋನ ಸೆಲೆಬ್ರಿಟಿ ಗೆಸ್ಟ್ ಮಹೇಶ್ ಭಟ್ ಸಹ ಇದ್ದರಂತೆ. ಆದರೆ ಅವರು ಮಧ್ಯೆಪ್ರವೇಶಿಸದೆ ಮೂಕ ಪ್ರೇಕ್ಷಕರಾಗಷ್ಟೇ ಉಳಿದಿದ್ದಾರೆ.

ಈ ಘಟನೆಯಿಂದ ತೀವ್ರ ಅಸಮಾಧನಕ್ಕೆ ಒಳಗಾದ ಮಲ್ಲಿಕಾ ಸೆಟ್ಸ್ ನಿಂದ ಹೊರಟು ಹೋಗಿದ್ದಾರೆ. ಮುಂದಿನ ಎಪಿಸೋಡ್ ಗಳನ್ನು ಮಾಡಲು ನಿರಾಕರಿಸಿರುವುದಾಗಿಯೂ ಹೇಳಿದ್ದಾರೆ. ಸೆಟ್ಸ್ ನಲ್ಲಿದ್ದವರು ಎಷ್ಟೇ ಹೇಳಿದರೂ ಮಲ್ಲಿಕಾ ಮಾತ್ರ ಸಮಾಧಾನಗೊಳ್ಳಲಿಲ್ಲವಂತೆ.

ಇದರ ಒಟ್ಟಾರೆ ಪರಿಣಾಮ ಎಂದರೆ The Bachelorette India ಶೋ ಚಿತ್ರೀಕರಣ ಮೂರು ದಿನಗಳ ಕಾಲ ಕ್ಯಾನ್ಸಲ್ ಆಗಿದೆ. ಕಡೆಗೆ ಹಾಗೂ ಹೀಗೂ ಮಾಡಿ ಶೋನ ದೊಡ್ಡ ತಲೆಗಳ ಮಧ್ಯಪ್ರವೇಶದಿಂದ ಮಲ್ಲಿಕಾ ಕೋಪ ತಣ್ಣಗಾಯಿತಂತೆ. ಆಕೆ ಮತ್ತೆ ಶೋನಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ. (ಪಿಟಿಐ)

English summary
Actress Mallika Sherawat halted the shoot of her show The Bachelorette India – Mere Khaylaon Ki Mallika for three complete days after one of the contestants reportedly used a cuss word against her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada