'ಸ್ಟಾರ್ ಸುವರ್ಣ' ಪ್ರೀಮಿಯರ್ : ಭಾನುವಾರ ಸಂಜೆ 6ಕ್ಕೆ 'ಲಾಸ್ಟ್ ಬಸ್'
ನಿಮ್ಮನ್ನೆಲ್ಲಾ 'ಲಾಸ್ಟ್ ಬಸ್' ನಲ್ಲಿ ಸವಾರಿ ಕರೆದುಕೊಂಡು ಹೋಗಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಯಶಸ್ವಿ ಚಿತ್ರ 'ಲಾಸ್ಟ್ ಬಸ್'. ಅದ್ಭುತ ಛಾಯಾಗ್ರಹಣ ಹಾಗೂ ಕಲಾ ನಿರ್ದೇಶನದ ಈ ಚಿತ್ರ ನೋಡುಗರನ್ನು ಭಾವನಾಲೋಕಕ್ಕೆ ಕರೆದುಕೊಂಡು ಹೋಗಿ, ನಂಬಿಕೆಯ ಒಳ-ಹೊರ ಪದರವನ್ನು ಬಿಚ್ಚಿಡುತ್ತದೆ.
ಒಂದೆಡೆ ಟಿ.ಆರ್.ಪಿಗಾಗಿ ರಿಯಾಲಿಟಿ ಶೋ ನಡೆಸುವ ತಂಡ, ಮತ್ತೊಂದೆಡೆ ದಾರಿಯಲ್ಲಿ ಸಿಕ್ಕ ಕೊನೆ ಬಸ್ ನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು. ಎರಡು ತಂಡಗಳು ವಾಸ್ತವದಲ್ಲಿ ಹೇಗೆ ಒಂದಾಗುತ್ತಾರೆ? ಎನ್ನುವುದೇ ಈ ಸಿನಿಮಾದ ಕಥಾಹಂದರ.

ಫ್ರೆಂಚ್ ಭಾಷೆಗೆ ಡಬ್ಬಿಂಗ್ ಆಗಿರುವ ಮೊಟ್ಟಮೊದಲ ಕನ್ನಡ ಚಿತ್ರ ಇದಾಗಿದ್ದು, ಅವಿನಾಶ್ ನರಸಿಂಹರಾಜು, ಮಾನಸ ಜೋಶಿ, ಪ್ರಕಾಶ್ ಬೆಳವಾಡಿ ಹಾಗೂ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. [ಹಾರರ್-ಥ್ರಿಲ್ಲರ್ 'ಲಾಸ್ಟ್ ಬಸ್' ಗೆ ವಿಮರ್ಶಕರು ಜೈಕಾರ ಹಾಕಿದ್ರಾ?]
ಅರವಿಂದ್ ರವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಅನಂತ್ ಅರಸುರವರ ಕ್ಯಾಮರಾ ಕೈಚಳಕ ಹೊಸ ಆಯಾಮ ನೀಡಿದೆ.
'ಲಾಸ್ಟ್ ಬಸ್' ಚಲನಚಿತ್ರ ಇದೇ ಮೊದಲ ಬಾರಿಗೆ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಇದೇ ಭಾನುವಾರ (ನವೆಂಬರ್ 13) ಸಂಜೆ 6ಕ್ಕೆ ಪ್ರಸಾರವಾಗಲಿದೆ.


Click it and Unblock the Notifications











