Just In
Don't Miss!
- Automobiles
23 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಸ್ವಿಫ್ಟ್
- Sports
'ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಯೋಜನೆ ಸಿದ್ಧವಾಗಿದೆ'
- Education
IIMB Recruitment 2021: 4 ರಿಸೋರ್ಸ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ವಿಸ್ತಾರವಾದ ಲ್ಯಾಪ್ಟಾಪ್, ಟ್ಯಾಬ್ಗಳಿಗೆ ಹೆಚ್ಚಿದ ಬೇಡಿಕೆ
- News
ಸತ್ತ ಮಗನ ವೀರ್ಯ ಸಂಗ್ರಹಕ್ಕೆ ಕೋರ್ಟ್ ಮೊರೆ ಹೋದ ತಂದೆ; ಕೋರ್ಟ್ ಹೇಳಿದ್ದೇನು?
- Lifestyle
ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಈ ಲಿಂಬೆ ತೈಲ..
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚೆನ್ನಮ್ಮ ಸರ್ಕಲ್ ನಲ್ಲಿ 'ಆಕಸ್ಮಿಕ' ಹಾಡನ್ನು ಶೂಟ್ ಮಾಡಿದ್ದೇ ರೋಚಕ ಕಥೆ!
ಒಂದು ಹಾಡಿನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಒಂದು ಹಾಡಿನ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ವಿಷಯ ಅಡಗಿರುತ್ತದೆ. ಅದೇ ರೀತಿ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು..' ಹಾಡಿನ ಹಿಂದೆಯೂ ರೋಚಕ ಕಥೆ ಇದೆ.
'ಆಕಸ್ಮಿಕ' ಸಿನಿಮಾದ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು...' ಹಾಡು ಕನ್ನಡಿಗರ ಹೃದಯದಲ್ಲಿ ಸದಾ ಕಾಲ ಇರುವ ಹಾಡು. ಹಂಸಲೇಖ ಸಾಹಿತ್ಯ ಮತ್ತು ಸಂಗೀತದ ಶ್ರೇಷ್ಠತೆಯನ್ನು ಈ ಹಾಡು ಮತ್ತೆ ಸಾರಿ ಕೇಳಿತ್ತು.
ಇಂತಹ ಹಾಡಿನ ಚಿತ್ರೀಕರಣ ಆಗಿರುವುದು ಹುಬ್ಬಳಿಯ ಚೆನ್ನಮ್ಮ ಸರ್ಕಲ್ ನಲ್ಲಿ. ಈ ಹಾಡು ಇಲ್ಲಿ ಚಿತ್ರೀಕರಣ ಆಗಿದ್ದು ಹೇಗೆ ಎನ್ನುವುದನ್ನು ನಿರ್ದೇಶಕ ಟಿ ಎಸ್ ನಾಗಾಭರಣ ತಿಳಿಸಿದ್ದಾರೆ.
'ಹುಟ್ಟಿದರೆ ಕನ್ನಡ ನಾಡಿನಲ್ಲಿಹುಟ್ಟಬೇಕು' ಹಾಡು ಹುಟ್ಟಿದ ರೋಚಕ ಕಥೆ
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದ ನಿರ್ದೇಶಕ ಟಿ ಎಸ್ ನಾಗಾಭರಣ ಈ ಹಾಡಿನ ಶೂಟಿಂಗ್ ಮಾಡಿದ್ದ ಕಥೆಯನ್ನು ಹಂಚಿಕೊಂಡರು. ಮುಂದೆ ಓದಿ...

ಹಾಡು ಬೇಕೆ ಬೇಕು ಎಂದಿದ್ದರು ವರದಪ್ಪ
''ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟುಬೇಕು..' ಹಾಡು 'ಆಕಸ್ಮಿಕ' ಚಿತ್ರದಲ್ಲಿ ಮೊದಲು ಇರಲಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹಾಡು ಬೇಡ ಎಂದು ನಾಗಾಭರಣ ನಿರ್ಧಾರ ಮಾಡಿದ್ದರು. ಆದರೆ, ವರದಪ್ಪ ಚಿತ್ರದ ಆ ಸಂದರ್ಭಕ್ಕೆ ಹಾಡು ಬೇಕೆ ಬೇಕು ಎಂದು ಹೇಳಿದರು. ಬಳಿಕ ಹಂಸಲೇಖರಿಗೆ ಒಂದು ಹಾಡು ಬರೆಯಲು ತಿಳಿಸಿದರು.

ಮೂರು ಬಾರಿ ಹಾಡು ಹಾಡಿದ್ದರು ರಾಜ್
''ಕನ್ನಡದ ಬಗ್ಗೆ ಒಂದು ಹಾಡು ಮಾಡಲು ಹಂಸಲೇಖ ಸಿದ್ಧತೆ ನಡೆಸಿದ್ದರು. ರಾಜ್ ಕುಮಾರ್, ಹಂಸಲೇಖ ಮತ್ತು ನಾಗಾಭರಣ ಮೂವರು ಕೂತು ಚರ್ಚೆ ಮಾಡಿದರು. ಹಂಸಲೇಖ ಹಾಡು ಬರೆದು ಸಂಗೀತ ನೀಡಿದರು. ಸಣ್ಣ ಪುಟ್ಟ ತಪ್ಪೂ ಆಗಬಾರದು ಎಂದು ರಾಜ್ ಮೂರು ಬಾರಿ ಹಾಡು ಹಾಡಿದರು. ಅಂತೂ ಹಾಡು ಸಿದ್ಧವಾಯಿತು.''

ಹಾಡಿನ ಶೂಟಿಂಗ್ ಮಾತ್ರ ಆಗಿರಲಿಲ್ಲ
''ಹಾಡಿನ ಚಿತ್ರೀಕರಣವನ್ನು ಹುಬ್ಬಳಿಯ ಚೆನ್ನಮ್ಮ ಸರ್ಕಲ್ ಮಾಡಬೇಕು ಎನ್ನುವುದು ನಾಗಾಭರಣ ಅವರ ಆಸೆ ಆಗಿತ್ತು. ರಾಜ್ ಕುಮಾರ್ ರನ್ನು ಇಟ್ಟುಕೊಂಡು ಅಲ್ಲಿ ಹಾಡಿನ ಶೂಟಿಂಗ್ ಮಾಡಿವುದು ಕಷ್ಟ ಎಂದು ಪಾರ್ವತಮ್ಮ ರಾಜ್ ಕುಮಾರ್ ಒಪ್ಪಲಿಲ್ಲ. ಕೊನೆಗೆ ಇಡೀ ಸಿನಿಮಾ ಮುಗಿದರೂ, ಈ ಹಾಡಿನ ಶೂಟಿಂಗ್ ಮಾತ್ರ ಆಗಿರಲಿಲ್ಲ.

ಪಾರ್ವತಮ್ಮ ಕೂಡ ಒಪ್ಪಿಕೊಂಡರು
''ಒಂದು ದಿನ ಸಂಜೆ ಅಣ್ಣಾವ್ರು ವಾಕಿಂಗ್ ಮಾಡುತ್ತಿದ್ದರಂತೆ. ಆಗ ನಾಗಾಭರಣ ಹೋಗಿ ಹಾಡನ್ನು ಹುಬ್ಬಳಿಯ ಚೆನ್ನಮ್ಮ ಸರ್ಕಲ್ ನಲ್ಲಿಯೇ ಮಾಡಿದರೆ ತುಂಬ ಚೆನ್ನಾಗಿ ಇರುತ್ತದೆ ಎಂದು ವಿವರಿಸಿದರಂತೆ. ಬಳಿಕ ಅಣ್ಣಾವ್ರು ಪಾರ್ವತಮ್ಮನವರಿಗೆ ಹೇಳಿ ಅವರು ಕೂಡ ಒಪ್ಪಿದರು. ಆದರೆ, ಈ ಮೂಲಕ ದೊಡ್ಡ ಸವಾಲು ನಾಗಾಭರಣ ಅವರ ಹೆಗಲಿಗೆ ಬಿತ್ತು.

ಎರಡೇ ಕ್ಯಾಮರಾದಲ್ಲಿ ಒಂದುವರೆ ದಿನದಲ್ಲಿ ಹಾಡಿನ ಚಿತ್ರೀಕರಣ
''890 ಪೊಲೀಸರ ಸಹಕಾರದೊಂದಿಗೆ ಹಾಡಿನ ಚಿತ್ರೀಕರಣದ ನಡೆಯಿತು. ಪೊಲೀಸರಿಗೆ ಖಾಕಿ ಹಾಕಿ ಬರಬೇಡಿ ಏಕೆಂದರೆ ಫ್ರೆಮ್ ತುಂಬ ನೀವೆ ಕಾಣುತ್ತೀರಿ ಎಂದು ನಾಗಾಭರಣ ಮನವಿ ಮಾಡಿದ್ದರು. ಬರೀ 2 ಕ್ಯಾಮರಾ ಇಟ್ಟುಕೊಂಡು, ಒಂದುವರೆ ದಿನದಲ್ಲಿ ಹಾಡಿನ ಶೂಟಿಂಗ್ ಮುಗಿಸಿದರು. ಶ್ರೀಕಾಂತ್ ಕ್ಯಾಮರಾ ವರ್ಕ್ ಹಾಗೂ ಉಡುಪಿ ಜಯರಾಂ ನೃತ್ಯ ಸಂಯೋಜನೆ ಮಾಡಿದ್ದರು. ಸಾವಿರಾರೂ ಜನರು ಹಾಡಿನ ಚಿತ್ರೀಕರಣ ನೋಡಲು ಸೇರಿದ್ದರು. ಹೀಗೆ ಈ ಹಾಡು ಸಿದ್ಧವಾಯಿತು.''