twitter
    For Quick Alerts
    ALLOW NOTIFICATIONS  
    For Daily Alerts

    'ಆ್ಯಂಡಿ ಪಿರ್ಕಿ' ಯಾಗಿ ಪೋಗೋದಲ್ಲಿ ಬರಲಿರುವ ತುಳುವಿನ "ಅಂಡೆಪಿರ್ಕಿ"

    By Harshitha
    |

    ಮಂಗಳೂರು : 'ಮೋಟು ಪತ್ಲು', 'ಚೋಟಾ ಭೀಮ್', 'ಡೊರೆಮೋನ್', 'ಮೈಟಿ ರಾಜು'... ಈ ಆನಿಮೇಷನ್ ಪಾತ್ರಗಳು ಚಿಣ್ಣರ ಅಚ್ಚುಮೆಚ್ಚು. ಆದರೆ, ಈ ಎಲ್ಲಾ ದೈತ್ಯ ಪಾತ್ರಗಳಿಗೆ ಕರಾವಳಿಯ ತುಳು ಆನಿಮೇಷನ್ ಪಾತ್ರ ಒಂದು ಸೆಡ್ಡು ಹೊಡೆದಿದೆ. ತುಳುನಾಡಿನ ಆಡು ಭಾಷೆಯಿಂದ ಸೃಷ್ಟಿಯಾದ ಆನಿಮೇಷನ್ ಪಾತ್ರವೊಂದು ಸದ್ಯ ಪ್ರಚಲಿತದಲ್ಲಿರುವ ಪ್ರಸಿದ್ದ ಆನಿಮೇಷನ್ ಪಾತ್ರಗಳಿಗೆ ಪೈಪೋಟಿ ಒಡ್ಡಿದೆ.

    ತುಳುನಾಡಿನ ಅದರಲ್ಲೂ ಮಂಗಳೂರಿನ ಆನಿಮೇಷನ್ ಪಾತ್ರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿದೆ. ಕಳೆದ 3 ವರ್ಷಗಳಿಂದ ಈ ಆನಿಮೇಷನ್ ಪಾತ್ರ ಭಾರತದ ಆನಿಮೇಷನ್ ಕ್ಷೇತ್ರದ ಪ್ರಶಸ್ತಿ ಬಾಚಿಕೊಳ್ಳುತ್ತಿದೆ. ಇತ್ತೀಚೆಗೆ ಟಿವಿ ಪರದೆಯ ಮೇಲೆ ವಿಜೃಂಭಿಸುತ್ತಿರುವ ಘಟಾನುಘಟಿ ಆನಿಮೇಷನ್ ಪಾತ್ರಗಳಾದ ಮೋಟು ಪತ್ಲು, ಚೋಟಾ ಭೀಮ್, ಮೇಟಿ ರಾಜು ಪಾತ್ರಗಳಿಗೆ ಸೆಡ್ಡು ಹೊಡೆದು ಕರಾವಳಿಯ "ಅಂಡೆಪಿರ್ಕಿ" ಪ್ರಶಸ್ತಿ ಗಳಿಸಿದೆ.

    Tulu slang Ande pirki is now show on POGO

    ಅಂತರಾಷ್ಟ್ರೀಯ ಮಟ್ಟದಲ್ಲಿ ಟೋಕಿಯೋ ಹಾಗು ಇಟಲಿಯಲ್ಲಿ ನಡೆದ ಶೋ ಗಳಲ್ಲಿ ಈ ಅಂಡೆಪಿರ್ಕಿ ಪ್ರಶಸ್ತಿ ಬಾಚಿಕೊಂಡಿದೆ. ಮಂಗಳೂರಿನ ಓಂ ಆನಿಮೇಷನ್ ಸ್ಟುಡಿಯೋ ಈ "ಅಂಡೆಪಿರ್ಕಿ" ಪಾತ್ರಕ್ಕೆ ಜೀವ ತುಂಬಿದ್ದು, ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರತಿಷ್ಟಿತ ಅಂತಾರಾಷ್ಟ್ರೀಯ ಕಾರ್ಟೂನ್ ಚಾನಲ್ ಪೋಗೋ ಈ ಅಂಡೆಪಿರ್ಕಿ ಯನ್ನು ತೆರೆಯ ಮೇಲೆ ತರಲು ಸಿದ್ಧವಾಗಿದೆ.

    ಮಂಗಳೂರಿನ ಓಂ ಆನಿಮೇಷನ್ ತಂಡದ ಶ್ರಮ ಸಾಕಾರಗೊಂಡಿದ್ದು ಡಿಸೆಂಬರ್ 3 ರಂದು ತುಳುವಿನ "ಅಂಡೆಪಿರ್ಕಿ", ಅಂತರಾಷ್ಟ್ರೀಯ ಮಟ್ಟದಲ್ಲಿ "ಆ್ಯಂಡಿ ಪಿರ್ಕಿ"ಯಾಗಿ ಟಿವಿ ತೆರೆಯ ಮೇಲೆ ಮಿಂಚಲಿದ್ದಾರೆ. ಭಾರತ ಸೇರಿದಂತೆ ಸಾರ್ಕ್ ದೇಶಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ಸೇರಿದಂತೆ ಪಾಕಿಸ್ತಾನದ ಚಿಣ್ಣರನ್ನು ಡಿಸೆಂಬರ್ 3 ರಿಂದ ಆಂಡಿ ಮತ್ತು ಪಿರ್ಕಿ ರಂಜಿಸಲಿದ್ದಾರೆ. ಆಂಡಿ ಮತ್ತೊಬ್ಬ ಪಿರ್ಕಿ, ಮಿಕ್ಕವು ಸಹಾಯಕ ಮಾತ್ರಗಳು ಈ ಚಿತ್ರದಲ್ಲಿವೆ.

    Tulu slang Ande pirki is now show on POGO

    ಆನಿಮೇಷನ್ ಚಾನೆಲ್ ಪೋಗೋದಲ್ಲಿ ಭಾನುವಾರ ಪ್ರೈಮ್ ಟೈಮ್ ನಲ್ಲಿ ಈ "ಆ್ಯಂಡಿ ಪಿರ್ಕಿ" ಪ್ರಸಾರ ಆರಂಭವಾಗಲಿದೆ. ಟಾಮ್ ಆ್ಯಂಡ್ ಜೆರ್ರಿ, ಚೋಟಾ ಭೀಮ್ ನಂತೆಯೇ ಅಂಡೆಪಿರ್ಕಿ ಆನಿಮೇಟೆಡ್ ಚಿತ್ರ. ಇತಿಹಾಸ ಪೂರ್ವದ ಕಲ್ಪನೆಯಲ್ಲಿ ಚಿತ್ರ ಮೂಡಿ ಬಂದಿದೆ. ಯಾವುದೇ ಸಂಸ್ಕೃತಿ ಅನುಕರಣೆ ಮಾಡದಿರುವುದರಿಂದ ವಿಶ್ವದ ಯಾವುದೇ ವ್ಯಕ್ತಿ ಇದನ್ನು ಅರ್ಥ ಮಾಡಿಕೊಂಡು ನೋಡಬಹುದಾಗಿದೆ. ಚಿತ್ರದಲ್ಲಿ ಸಂಭಾಷಣೆ ಇರದ ಕಾರಣ ಯಾರು ಬೇಕಾದರೂ ನೋಡಬಹುದಾಗಿದೆ.

    ಆ್ಯಂಡಿ ಪಿರ್ಕಿ ಚಿತ್ರ ಇಬ್ಬರು ಗೆಳೆಯರ ನಡುವಿನ ಹಾಸ್ಯ ಭರಿತ ಪ್ರಸಂಗದ ಸುತ್ತ ಹಣೆಯಲಾಗಿದೆ. ಆ್ಯಂಡಿ ಒಂದು ಡೈನೋಸರ್ ಪಾತ್ರ ಹಾಗೂ ಪಿರ್ಕಿ ಗುಹೆಯಲ್ಲಿ ವಾಸಿಸುವ ಆದಿ ಮಾನವನ ಪಾತ್ರ. ಒಬ್ಬ ಪೆದ್ದು ಪೆದ್ದಾಗಿ ವರ್ತಿಸುವ ಪಾತ್ರವಾದರೆ ಮತ್ತೊಂದು ಅತೀ ಬುದ್ಧಿವಂತ. ಈ ಇಬ್ಬರ ಚೇಷ್ಟೆ ಮಕ್ಕಳನ್ನು ನಗಿಸುವುದರಲ್ಲಿ ಸಂಶಯವಿಲ್ಲ.

    ಮಂಗಳೂರಿನ ಓಂ ಆನಿಮೇಷನ್ ನ ವಿವೇಕ್ ಬೋಳಾರ್ ಅವರ ತಂಡ ಈ ಆ್ಯಂಡಿ ಪಿರ್ಕಿ ಪಾತ್ರಗಳಿಗೆ ಜೀವ ತುಂಬಿದ್ದು 78 ಕಂತುಗಳ ಈ ಸೀರಿಯಲ್ ಪೋಗೋ ಚಾನಲ್ ನಲ್ಲಿ ಪ್ರಸಾರವಾಗಿ ಮಕ್ಕಳ ಮನ ಗೆಲ್ಲಲಿದೆ. ಈಗಾಗಲೇ 20ಕ್ಕೂ ಹೆಚ್ಚು ಎಪಿಸೋಡ್ ಗಳು ಸಿದ್ಧವಾಗಿದ್ದು ಪ್ರತಿ ಎಪಿಸೋಡ್ ಸಿದ್ದಪಡಿಸಲು ಓಂ ಆನಿಮೇಷನ್ ತಂಡ 3 ತಿಂಗಳ ಶ್ರಮವಹಿಸಿದೆ. ಪೋಗೋ ವಾಹಿನಿ 78 ಎಪಿಸೋಡ್ ನೀಡಬೇಕಾಗಿದ್ದು ಓಂ ತಂಡ ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದೆ.

    "ಅಂಡೆ ಪಿರ್ಕಿ" ಹೆಸರಿನ ಹಿಂದಿರುವ ಕತೆ ಈ ಪ್ರಾಜೆಕ್ಟ್ ಆರಂಭಿಸಿದಾಗ ಓಂ ತಂಡಕ್ಕೆ ಸರ್ವರ್ ನಲ್ಲಿ ಹಾಕಲು ಹೆಸರೊಂದು ಬೇಕಿತ್ತು. ಈ ಚಿತ್ರ ನೋಡಿ ಸಂಗೀತಗಾರರೊಬ್ಬರು ಈ ಚಿತ್ರವನ್ನು ಅವಾರ್ಡ್ ಗೆ ಕಳುಹಿಸಲು ಹೇಳಿದ್ದರು. ಅವಾರ್ಡ್ ಗೆ ಕಳುಹಿಸಲು ಪ್ರಾಜೆಕ್ಟ್ ಗೆ ಹೆಸರೊಂದು ನೀಡಬೇಕಿತ್ತು. ಆದರೆ ಯೋಚಿಸುವಷ್ಟು ಸಮಯ ಇರಲಿಲ್ಲ. ಆ ಕಾರಣ ತುಳು ಆಡುಭಾಷೆಯಲ್ಲಿ ಪ್ರಚಲಿತದಲ್ಲಿರುವ ಅಂಡೆಪಿರ್ಕಿ ಎಂದೇ ಹೆಸರಿಡಲಾಯಿತು.

    ಅಂಡೆ ಪಿರ್ಕಿ ಅಂದರೆ ತುಳು ಭಾಷೆಯಲ್ಲಿ ಪೆದ್ದು ಪೆದ್ದಾಗಿ ವರ್ತಿಸುವವ ಎಂದರ್ಥ. ಪ್ರಾಜೆಕ್ಟ್ ಗೆ ಹೆಸರಿಡುವ ಧಾವಂತದಲ್ಲಿ ತಕ್ಷಣಕ್ಕೆ ಹುಡುಗಾಟಿಕೆಗೆ ಈ ಅಂಡೆಪಿರ್ಕಿ ಎಂದು ಹೆಸರಿಡಲಾಯಿತು. ಆದರೆ ಅದೇ ಅಂಡೆ ಪಿರ್ಕಿ ಈಗ ವಿಶ್ವದಲ್ಲಿಯೇ ತನ್ನ ಛಾಪು ಮೂಡಿಸಲು ಹೊರಟಿದೆ.

    English summary
    Mangalore based animation studio is all set to produce a show for kids channel Pogo, titled "Andy pirki " which draws direct inspiration from one of Tulu nadu's most famous slang "Ande pirki" meaning Mad cap.
    Wednesday, December 20, 2017, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X