Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತುನಿಶಾ ಶರ್ಮಾ ಆತ್ಮಹತ್ಯೆ: ತನಿಖೆ ವೇಳೆ ಕುತೂಹಲಕಾರಿ ಮಾಹಿತಿ ಬಿಚ್ಚಟ್ಟ ಬಾಯ್‌ಫ್ರೆಂಡ್
ಜನಪ್ರಿಯ ಟಿವಿ ನಟಿ ತುನಿಶಾ ಶರ್ಮಾ (20) ಶೂಟಿಂಗ್ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸದ್ದು ಮಾಡುತ್ತಿದ್ದು, ನಟಿಯ ಡೆತ್‌ನೋಟ್ ಆಧರಿಸಿ ನಟಿಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಅನ್ನು ನಿನ್ನೆಯೇ ಪೊಲೀಸರು ಬಂಧಿಸಿದ್ದಾರೆ.
ತುನಿಶಾ ಶರ್ಮಾರ ಬಾಯ್‌ಫ್ರೆಂಡ್ ಶೀಜಾನ್ ಸಹ ನಟನೇ ಆಗಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಆಸಕ್ತಿಕರ ವಿಷಯಗಳು ಹೊರಬಿದ್ದಿವೆ.
ಶೀಜಾನ್ ತನಿಖೆ ವೇಳೆ ಇಬ್ಬರ ನಡುವಿನ ಬ್ರೇಕ್‌ಅಪ್‌ಗೆ ಏನು ಕಾರಣ ಎಂಬ ವಿಷಯ ತಿಳಿಸಿರುವುದಲ್ಲದೆ, ಈ ಹಿಂದೆ ಇಬ್ಬರ ನಡುವೆ ಆಗಿದ್ದ ಜಗಳ ಹಾಗೂ ಅದಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.
ಟೈಮ್ಸ್ ನೌ ವರದಿ ಮಾಡಿರುವಂತೆ, ಶೀಜಾನ್ ಹಾಗೂ ತುನಿಶಾ ನಡುವೆ ವಯಸ್ಸಿನ ಅಂತರದ ಕಾರಣಕ್ಕೆ ತುಸು ಭಿನ್ನಾಭಿಪ್ರಾಯಗಳಿದ್ದವಂತೆ. ಶೀಜಾನ್ ವಯಸ್ಸು 28 ಆಗಿದ್ದರೆ, ತುನಿಶಾ ವಯಸ್ಸು ಕೇವಲ 20 ಆಗಿತ್ತು. ಜೊತೆಗೆ ಇವರ ನಡುವೆ ಧರ್ಮದ ಕಾರಣಕ್ಕೂ ಕೆಲವು ಭಿನ್ನಾಭಿಪ್ರಾಯಗಳಿದ್ದವಂತೆ.
ಈ ಹಿಂದೆಯೂ ಒಮ್ಮೆ ಇವರಿಬ್ಬರ ನಡುವೆ ಜಗಳವಾಗಿ ತುನಿಶಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಆದರೆ ಆಗ ಶೀಜಾನ್‌ರೇ ಆಕೆಯನ್ನು ರಕ್ಷಿಸಿದ್ದರಂತೆ. ಆ ವಿಷಯವನ್ನು ಶೀಜಾನ್‌ರ ತಾಯಿಯ ಗಮನಕ್ಕೂ ತಂದಿದ್ದರಂತೆ. ಈ ಬಗ್ಗೆ ಕೆಲವು ಮೊಬೈಲ್ ಸಂದೇಶಗಳ ದಾಖಲೆಗಳನ್ನೂ ಶೀಜಾನ್ ಒದಗಿಸಿರುವುದಾಗಿ ಹೇಳಲಾಗಿದೆ.
ಆದರೆ ತುನಿಶಾರ ಪೋಷಕರು ತಮ್ಮ ಪುತ್ರಿಯ ಸಾವಿಗೆ ಶೀಜಾನ್ ಕಾರಣ, ಆಕೆಯನ್ನು ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಪೊಲೀಸರು ಸಹ ಶೀಜಾನ್ ನ ವಿಚಾರಣೆ ಬಳಿಕ ತುನಿಶಾರ ಪೋಷಕರು ಹಾಗೂ ಕೆಲವು ಗೆಳೆಯರ ವಿಚಾರಣೆ ನಡೆಸಲಿದ್ದಾರೆ.
ನೇಣು ಬಿಗಿದುಕೊಂಡ ಕಾರಣಕ್ಕೆ ಉಸಿರಾಡಲು ಸಾಧ್ಯವಾಗದೇ ಆಕೆ ಕೊನೆಯುಸಿರೆಳೆದಿರುವುದಾಗಿ ಹೇಳಿದ್ದಾರೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ತುನಿಷಾ ಶರ್ಮಾ ಆತ್ಮಹತ್ಯೆಯ ಹಿಂದೆ ಯಾವುದೇ ಲವ್ ಜಿಹಾದ್ ಅಂಶ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವರು ಆಕೆ ಗರ್ಭಿಣಿ ಆಗಿದ್ದಳು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದು ಸುಳ್ಳು ಎನ್ನುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗೊತ್ತಾಗಿದೆ. ಈಗಾಗಲೇ ಆಕೆಯ ಮಾಜಿ ಪ್ರಿಯಕರ ಷಿಜಾನ್ ಅಹ್ಮದ್ ಖಾನ್‌ನ ಪೊಲೀಸರು ಬಂಧಿಸಿದ್ದಾರೆ. ಆತನನ್ನು 4 ದಿನಗಳ ಕಾಲ ಜ್ಯುಡಿಷಿಯಲ್ ಕಸ್ಟಡಿಗೆ ನೀಡಲಾಗಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM