»   » ಜೆಡಿಎಸ್ ಟಿಕೆಟ್ ಪಕ್ಕಾ ಎಂದ ಕಲಾವಿದ ರವಿಕಿರಣ್

ಜೆಡಿಎಸ್ ಟಿಕೆಟ್ ಪಕ್ಕಾ ಎಂದ ಕಲಾವಿದ ರವಿಕಿರಣ್

Posted By:
Subscribe to Filmibeat Kannada
Actor Ravikiran
ನಟ, ನಿರ್ಮಾಪಕ ಹಾಗೂ ಕನ್ನಡ ಕಿರುತೆರೆ ಕ್ಷೇತ್ರದ 'ಕನಸುಗಾರ' ರವಿಕಿರಣ್ ಅವರು ಮುಂಬರಲಿರುವ ವಿಧಾಸಭಾ ಕಣಕ್ಕೆ ಜಿಗಿಯುತ್ತಿರುವುದು ಗೊತ್ತೇ ಇದೆ. ಅವರು ಈಗಾಗಲೆ ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದವನ್ನೂ ಪಡೆದಿದ್ದಾರೆ. ಈಗ ಅವರಿಗೆ ಜೆಡಿಎಸ್ ಟಿಕೆಟ್ ಸಿಗುವುದು ಪಕ್ಕಾ ಆಗಿದೆಯಂತೆ.

ಕೆಂಗೇರಿಯ ಮಾಧ್ಯಮ ಕೇಂದ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದನ ವರ್ಚಸ್ಸಿನಿಂದ ಚುನಾವಣೆ ಎದುರಿಸಿ ರಾಜಕೀಯ ವಲಯದಲ್ಲಿ ಏನನ್ನಾದರೂ ಸಾಧಸಿಬೇಕೆಂಬ ಬಯಕೆ ತಮ್ಮದು ಎಂದಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರವಿಕಿರಣ್ ಅವರ ಕ್ಲಾಸ್ ಮೇಟ್ ಅಂತೆ. ವಿಜಯ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿರಬೇಕಾದರೆ ಇಬ್ಬರೂ ಸಹಪಾಠಿಗಳು. ಈಗ ಕುಮಾರಸ್ವಾಮಿ ಅವರ ಸ್ಫೂರ್ತಿಯಿಂದ ರಾಜಕೀಯ ಕ್ಷೇತ್ರಕ್ಕೆ ಬರುತ್ತಿದ್ದೇನೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಭರವಸೆಯನ್ನು ಕುಮಾರಸ್ವಾಮಿ ಅವರು ನೀಡಿದ್ದಾರೆ. ಕಳೆದ 30 ವರ್ಷಗಳಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ್ದೇನೆ ಎಂದಿದ್ದಾರೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಅವರು ಕಿರುತೆರೆ ಕ್ಷೇತ್ರಕ್ಕೆ ತಮ್ಮದೇ ಆದಂತಹ ಛಾಪು ಮೂಡಿಸಿದವರು. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮೂಲಕ ಜೆಡಿಎಸ್ ಗೆ ಲಾಭ ಆಗುತ್ತಾ? (ಏಜೆನ್ಸೀಸ್)

English summary
Kannada small screen dream merchant and actor cum producer Ravikiran confident about JD(S) ticket from Rajarajeshwari Nagar constituency. The actor recently met JD(s) supremo HD Deve Gowda.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada