For Quick Alerts
  ALLOW NOTIFICATIONS  
  For Daily Alerts

  ಡಬಲ್ ಸಂಭ್ರಮ: ಭಾನುವಾರ ಚಿಕ್ಕಣ್ಣ, ಶನಿವಾರ ಮತ್ತೊಬ್ಬ ಹಾಸ್ಯನಟ

  |
  Weekend with Ramesh Season 4: ಚಿಕ್ಕಣ್ಣಗೂ ಮುಂಚೆ ಶನಿವಾರ ವೀಕೆಂಡ್ ಟೆಂಟ್ ಗೆ ಬರಲಿದ್ದಾರೆ ಮತ್ತೊಬ್ಬ ಹಾಸ್ಯ ನಟ

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಳೆದ ವಾರ ನಟ ಶರಣ್ ಭಾವಹಿಸಿದ್ದರು. ಶನಿವಾರ ಮತ್ತು ಭಾನುವಾರ ಎರಡೂ ದಿನವೂ ಅಧ್ಯಕ್ಷನ ಸಂಚಿಕೆ ಪ್ರಸಾರವಾಗಿತ್ತು. ಈ ವಾರ ಯಾರು ಎಂಬ ಕುತೂಹಲಕ್ಕೆ ನಿನ್ನೆ ಉತ್ತರ ಸಿಕ್ಕಿತ್ತು.

  ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಹಾಸ್ಯನಟನಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂಬ ವಿಷ್ಯ ಬಹಿರಂಗವಾಗಿತ್ತು. ಚಿಕ್ಕಣ್ಣ ಅವರ ಸಂಚಿಕೆ ಒಂದು ದಿನನಾ ಅಥವಾ ಎರಡೂ ದಿನನಾ ಎಂಬ ಕುತೂಹಲ ಕಾಡುತ್ತಿರುವಾಗಲೇ ಇನ್ನೊಂದು ಖುಷಿಯ ವಿಚಾರ ಹೊರಬಿದ್ದಿದೆ.

  'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ

  ಹೌದು, ಈ ವಾರ ಬರಿ ಚಿಕ್ಕಣ್ಣ ಮಾತ್ರ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿಲ್ಲ. ಅವರಿಗೆ ಮುಂಚೆಯೇ ಮತ್ತೊಬ್ಬರ ಅತಿಥಿ ವೀಕೆಂಡ್ ಸಾಧಕರ ಸೀಟನ್ನ ಅಲಂಕರಿಸಿದ್ದಾರೆ. ಈ ಪ್ರೋಮೋ ಈಗ ರಿಲೀಸ್ ಆಗಿದ್ದು, ಈ ವಾರ ಪ್ರೇಕ್ಷಕರಿಗೆ ಡಬಲ್ ಧಮಾಕ. ಯಾರದು? ಮುಂದೆ ಓದಿ.....

  ಬಿರಾದರ್ ಬಂದೇ ಬಿಟ್ರು

  ಬಿರಾದರ್ ಬಂದೇ ಬಿಟ್ರು

  ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸೀಟಿನಲ್ಲಿ ಕನ್ನಡದ ಹೆಸರಾಂತ ಹಾಸ್ಯನಟ ಬಿರಾದರ್ ಅವರನ್ನ ನೋಡಬೇಕು ಎಂಬ ಆಸೆ ಅನೇಕರಿಗಿತ್ತು. ಆದ್ರೆ, ಅದು ಯಾವಾಗ ಈಡೇರುತ್ತೆ ಎಂಬ ಕಾತುರದಿಂದ ಕಾದು ನೋಡುತ್ತಿದ್ದ ಪ್ರೇಕ್ಷಕರಿಗೆ ಈ ವಾರ ಜೀ ಕನ್ನಡ ವಾಹಿನಿ ಸರ್ಪ್ರೈಸ್ ನೀಡಿದೆ. ಈ ವಾರದ ಇಬ್ಬರು ಅತಿಥಿಗಳ ಪೈಕಿ ಬಿರಾದರ್ ಒಬ್ಬರು ಎನ್ನುಬುದು ಖುಷಿಯ ಸಂಗತಿ.

  350ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

  350ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

  ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ಕಲಾವಿದ, ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಬಿರಾದರ್ ಸುಮಾರು 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 1989ರಲ್ಲಿ ಜಯಭೇರಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಬಿರಾದರ್ ಲವ್ ಟ್ರೈನಿಂಗ್, ಅಜಗಜಾಂತರ, ಶ್, ಸ್ವಸ್ತಿಕ್, ಉಪೇಂದ್ರ, ಮಠ, ಓ ಮಲ್ಲಿಗೆ, ಅಳಿಯ ಅಲ್ಲ ಮಗಳ ಗಂಡ, ನಂದಿ, ಹುಬ್ಬಳ್ಳಿ, ತವರಿಗೆ ಬಾ ತಂಗಿ ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ.

  ವಿದೇಶಿ ಚಿತ್ರೋತ್ಸವದಲ್ಲಿ ಪ್ರಶಸ್ತಿ

  ವಿದೇಶಿ ಚಿತ್ರೋತ್ಸವದಲ್ಲಿ ಪ್ರಶಸ್ತಿ

  ಬಿರಾದರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾ 'ಕನಸೆಂಬ ಕುದುರೆಯನೇರಿ' ಚಿತ್ರದ ನಟನೆಗಾಗಿ 2011 ರಲ್ಲಿ ಸ್ಪೇನ್ ನಲ್ಲಿ ನಡೆದಿದ್ದ ಚಲನಚಿತ್ರವೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಗಿರೀಶ್ ಕಾಸರವಳ್ಳಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

  ಶನಿವಾರ ಬಿರಾದರ್, ಭಾನುವಾರ ಚಿಕ್ಕಣ್ಣ

  ಶನಿವಾರ ಬಿರಾದರ್, ಭಾನುವಾರ ಚಿಕ್ಕಣ್ಣ

  ಶನಿವಾರ ಬಿರಾದರ್ ಅವರ ಎಪಿಸೋಡ್ ಪ್ರಸಾರವಾಗ್ತಿದೆ. ಭಾನುವಾರ ಚಿಕ್ಕಣ್ಣ ಅವರ ಸಂಚಿಕೆ ಟೆಲಿಕಾಸ್ಟ್ ಆಗ್ತಿದೆ. ಈ ಮೂಲಕ ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರ ಹಾಸ್ಯಕಲಾವಿದರ ಸಾಧನೆಯ ಕಥೆ ನೋಡಬಹುದು.

  English summary
  Kannada comedy actor chikkanna and biradar participate in weekend with ramesh 4. saturday biradar and sunday chikkanna episode will telecast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X