For Quick Alerts
  ALLOW NOTIFICATIONS  
  For Daily Alerts

  ಶನಿವಾರ-ಭಾನುವಾರ ರಾತ್ರಿ 9ಕ್ಕೆ ಉದಯ ಸಿಂಗರ್ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ

  By Harshitha
  |

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಮನೋ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಉದಯ ಸಿಂಗರ್ ಜ್ಯೂನಿಯರ್ಸ್' ಈಗ ಕೊನೆಯ ಘಟ್ಟಕ್ಕೆ ತಲುಪಿದೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ 'ಉದಯ ಸಿಂಗರ್ ಜ್ಯೂನಿಯರ್ಸ್' ಫಿನಾಲೆ ಪ್ರಸಾರವಾಗಲಿದೆ.

  16 ಮಕ್ಕಳಿದ್ದ ಸಿಂಗಿಂಗ್ ಶೋ ಫಿನಾಲೆಯ ಹೊತ್ತಿಗೆ 5 ಮಕ್ಕಳಿಂದ ಕೂಡಿದ್ದು ಅದರಲ್ಲಿ ಒಬ್ಬರನ್ನು 'ಉದಯ ಸಿಂಗರ್ ಜ್ಯೂನಿಯರ್' ಎಂದು ಘೋಷಿಸಲಾಗುವುದು. ಸುಮಾರು ದಿನಗಳಿಂದ ನಡೆದು ಬಂದ ಶೋನಲ್ಲಿ ವಿಭಿನ್ನ ರೀತಿಯ ಸಂಚಿಕೆಗಳು ಪ್ರಸಾರವಾದವು.

  ಅಲ್ಲದೆ ಚಿತ್ರರಂಗದ ಹೆಸರಾಂತ ನಟ ನಟಿಯರಾದ ಮಾಲಾಶ್ರೀ, ಪ್ರೇಮಾ, ಚೇತನ್, ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಕಾರುಣ್ಯಾ ರಾಮ್ ಮತ್ತು ಸಂಗೀತ ಕ್ಷೇತ್ರದ ಅರ್ಚನಾ ಉಡುಪ, ಪ್ರವೀಣ್.ಡಿ ರಾವ್, ಕೆ.ಕಲ್ಯಾಣ್, ಅನುರಾಧಾ ಭಟ್, ಶ್ರೀಧರ್ ಸಂಭ್ರಮ್, ಹೆಸರಾಂತ ನಿರ್ದೇಶಕರುಗಳಾದ ಭಾರ್ಗವ ಮತ್ತು ಯೋಗರಾಜ್ ಭಟ್ ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

  ಹೀಗೆ ನಡೆದುಕೊಂಡು ಈ ಸಿಂಗಿಂಗ್ ರಿಯಾಲಿಟಿ ಶೋ ಈಗ ಫೈನಲ್ ಹಂತ ತಲುಪಿದ್ದು ಗುರುಕಿರಣ್, ತನುಶ್ ರಾಜ್, ನಿಹಾರಿಕಾ, ಸಿರಿ ಮತ್ತು ವೀಕ್ಷಣ್ ಪಿನಾಲೆ ಲಿಸ್ಟ್‍ ನಲ್ಲಿದ್ದಾರೆ.

  ಈ ಫಿನಾಲೆಯ ನಿಯಮದ ಪ್ರಕಾರ ಶಾಸ್ತ್ರೀಯ ಸಂಗೀತ, ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಡಾ.ರಾಜಕುಮಾರ್ ಹಿಟ್ಸ್ ಎಂದು 3 ಸುತ್ತಗಳಿದ್ದು ಪ್ರತಿಯೊಂದು ಸುತ್ತಿನಲ್ಲಿ ಒಬ್ಬೊಬ್ಬರು ಎಲಿಮಿನೇಟ್ ಅಗುತ್ತಾರೆ. ಆದರೆ ಇಲ್ಲಿ ರವಿಚಂದ್ರನ್ ಮತ್ತೊಂದು ಸುತ್ತಾಗಿ ಜುಗಲ್‍ ಬಂದಿಯನ್ನು ಆಯ್ಕೆ ಮಾಡುತ್ತಾರೆ. ಅದು ಯಾಕೆ.? ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಾದರೆ ಈ ಐವರಲ್ಲಿ ಯಾರಿಗೆ ದೊರೆಯುತ್ತದೆ ಉದಯ ಸಿಂಗರ್ ಪಟ್ಟ?

  ಈ ಗ್ರ್ಯಾಂಡ್ ಫಿನಾಲೆಯಲ್ಲಿ ವಿಕ್ಟರಿ ಸ್ಟಾರ್ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. 'ರ್ಯಾಂಬೋ' ಚಿತ್ರದ ''ಕಣ್ಣಾ ಮುಚ್ಚೆ ಕಾಡೆ ಗೂಡೆ.." ಹಾಡು ಹಾಡಿ ಎಲ್ಲರನ್ನು ರಂಜಿಸಿದ್ದಾರೆ.

  'ಉದಯ ಸಿಂಗರ್ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Udaya Singer Juniors Grand Finale to telecast on Jan 27th and 28th at 9PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X