For Quick Alerts
  ALLOW NOTIFICATIONS  
  For Daily Alerts

  ವಾವ್.. 24 ವಸಂತಗಳನ್ನು ಪೂರೈಸಿದ ನಿಮ್ಮ ನೆಚ್ಚಿನ ಉದಯ ಟಿವಿ.!

  By Harshitha
  |

  ಉದಯ ಟಿವಿ... ಕರ್ನಾಟಕದ ಅತ್ಯಂತ ಜನಪ್ರಿಯ ಮನರಂಜನಾ ವಾಹಿನಿ. ಕಳೆದ 24 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಈ ವಾಹಿನಿ, ತನ್ನದೇ ಆದ ಅಪಾರ ನೋಡುಗ ವರ್ಗವನ್ನು ಹೊಂದಿದೆ.

  ಸಿನಿಮಾ ಮತ್ತು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳ ಮೂಲಕ ಜನಮಾನಸವನ್ನು ಮಂತ್ರಮುಗ್ಧವಾಗಿಸಿದ ಉದಯ ವಾಹಿನಿ, ಕನ್ನಡದ ಮೊದಲ ಉಪಗ್ರಹ ವಾಹಿನಿ ಕೂಡ ಹೌದು. ಧಾರಾವಾಹಿಗಳನ್ನು ಕೂಡ ಪ್ರಸ್ತುತ ಪಡಿಸುವ ಮೂಲಕ, ಪ್ರತಿಯೊಬ್ಬ ಕನ್ನಡಿಗನ ಹೃದಯ ಪ್ರವೇಶಿಸಿದ ಉದಯ ಟಿವಿ, ಅಂದಿನಿಂದ ಇಂದಿನವರೆಗೆ ನೂರಾರು ಧಾರಾವಾಹಿಗಳನ್ನು ನಾಡಿಗಾಗಿ ನೀಡಿದೆ.

  ಸದಭಿರುಚಿಯ, ಉತ್ತಮ ಕಥೆಗಳಿರುವ ಸಿನಿಮಾಗಳನ್ನು ಪ್ರಸಾರ ಮಾಡುವ ಮೂಲಕ ಉದಯ ವಾಹಿನಿ ಎಲ್ಲರ ಮನ ಗೆದ್ದದ್ದು ಒಂದು ಕಡೆಯಾದರೆ, ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ರಂಗುರಂಗಿನ ಇವೆಂಟ್ ಗಳು, ಚಲನಚಿತ್ರ ಸಂಬಂಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ವೀಕ್ಷಕರಿಗೆ ಹೊಸ ಅನುಭವವನ್ನು ಕೂಡ ಒದಗಿಸಿತು.

  ಪ್ರತಿದಿನ ನಿಮ್ಮನ್ನ ನಕ್ಕು ನಲಿಸುವ ಉದಯ ಕಾಮಿಡಿಗೆ 9ನೇ ಹುಟ್ಟುಹಬ್ಬ ಕಣ್ರೀಪ್ರತಿದಿನ ನಿಮ್ಮನ್ನ ನಕ್ಕು ನಲಿಸುವ ಉದಯ ಕಾಮಿಡಿಗೆ 9ನೇ ಹುಟ್ಟುಹಬ್ಬ ಕಣ್ರೀ

  ಕನ್ನಡ ಚಿತ್ರರಂಗದ ಗಣ್ಯರು, ಉದಯ ವಾಹಿನಿ ಮೂಲಕ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡರು. ವಾಹಿನಿಗಾಗಿ ಧಾರಾವಾಹಿಗಳನ್ನು ನಿರ್ದೇಶಿಸಿದರು. ಈಗಲೂ ಕೂಡ ತನ್ನ ಹೊಳಪನ್ನು ಕಳೆದುಕೊಳ್ಳದ ಉದಯ ವಾಹಿನಿ, ಉತ್ತಮವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

  ಇಂತಿಪ್ಪ ಉದಯ ವಾಹಿನಿ ಇದೀಗ ಇಪ್ಪತ್ನಾಲ್ಕು ವರ್ಷಗಳನ್ನು ಕಳೆದು ಇಪ್ಪತೈದನೇ ವರ್ಷಕ್ಕೆ ಕಾಲಿಟ್ಟಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ಉತ್ತಮ ಕಾರ್ಯಕ್ರಮಗಳ ಮೂಲಕ ಕನ್ನಡನಾಡಿನ ಮನ ಗೆಲ್ಲಲು ಹೊರಟಿದೆ.

  English summary
  Udaya TV, the first Kannada entertainment channel in the television business has been entertaining Kannada audience from 24 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X