»   » ಇದೇ ಭಾನುವಾರ ಉದಯ ಟಿವಿಯಲ್ಲಿ 'ಗಂಧದ ಗುಡಿ' ಸ್ಟಾರ್ ನೈಟ್

ಇದೇ ಭಾನುವಾರ ಉದಯ ಟಿವಿಯಲ್ಲಿ 'ಗಂಧದ ಗುಡಿ' ಸ್ಟಾರ್ ನೈಟ್

Posted By:
Subscribe to Filmibeat Kannada

ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬದಂದು ಉದಯ ಟಿವಿ ತಂಡ ಮೈಸೂರಿನ ಮಹಾರಾಜ ಅಂಗಳದಲ್ಲಿ ಚಿತ್ರಿಸಿದ 'ಗಂಧದ ಗುಡಿ ಸ್ಟಾರ್ ನೈಟ್' ವಿಶೇಷ ಕಾರ್ಯಕ್ರಮ ಅಕ್ಟೋಬರ್ 14 ರಂದು ರಾತ್ರಿ 8 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ನಾಡ ಹಬ್ಬ ದಸರಾ ಎಂದರೆ ಎಲ್ಲರಿಗೂ ವಿಶೇಷ. ನಾಡಿನಾದ್ಯಂತ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೀಗಾಗಿ ಯಾವಾಗಲೂ ವಿಶೇಷ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುವ, ಭರಪೂರ ಮನರಂಜನೆ ನೀಡುವ ಉದಯ ಟಿವಿ ಈ ಬಾರಿ 'ಗಂಧದ ಗುಡಿ ಸ್ಟಾರ್ ನೈಟ್' ಕಾರ್ಯಕ್ರಮವನ್ನು ಬಿತ್ತರಿಸಲಿದೆ.

ಸ್ಟಾರ್ ಗಳ ಸಾಂಸ್ಕೃತಿಕ ಕಾರ್ಯಕ್ರಮ

'ಗಂಧದ ಗುಡಿ ಸ್ಟಾರ್ ನೈಟ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಧು ಕೋಕಿಲ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಹರ್ಷಿಕಾ ಪೂಣಚ್ಚ, ಶರ್ಮಿಳಾ ಮಾಂಡ್ರೆ ಹಾಗೂ ಸೃಜನ್ ಲೋಕೇಶ್ ಭಾಗವಹಿಸಿದ್ದರು.

ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದ ದರ್ಶನ್

ವೇದಿಕೆಗೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 'ತಾರಕ್' ಸಿನಿಮಾದ ಪಂಚ್ ಡೈಲಾಗ್ ಗಳನ್ನು ಹೇಳಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ಧ್ರುವ ಸರ್ಜಾ 'ಭರ್ಜರಿ' ಡ್ಯಾನ್ಸ್

ನಟ ಧ್ರುವ ಸರ್ಜಾ ತಮ್ಮ ಭರ್ಜರಿ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಜನರನ್ನು ರಂಜಿಸಿದರೆ, ಸೃಜನ್ ಲೋಕೇಶ್ ಹಾಗೂ ದರ್ಶನ್ ನಡುವಿನ ಭಾವನಾತ್ಮಕ ಸಂಭಾಷಣೆ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿತ್ತು.

ನಟರ ಡ್ಯಾನ್ಸ್ ಪರ್ಫಾಮೆನ್ಸ್

ಇನ್ನೂ ಕಾಮಿಡಿ ಕಿಂಗ್ ಸಾಧು ಕೋಕಿಲ ತಮ್ಮ ವಿಶಿಷ್ಟ ಶೈಲಿಯ ಡೈಲಾಗ್ ಗಳ ಮೂಲಕ ಪ್ರೇಕ್ಷಕರನ್ನ ನಗೆಗಡಲಿನಲ್ಲಿ ತೇಲಿಸಿದರು. ಚಿರಂಜೀವಿ ಸರ್ಜಾ ಸೇರಿದಂತೆ ಹಲವು ಕಲಾವಿದರು ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು.

ಅನುಶ್ರೀ ನಿರೂಪಣೆ

ಕಿರುತೆರೆಯ ಯಶಸ್ವಿ ಹಾಗೂ ಜನಪ್ರಿಯ ನಿರೂಪಕಿಯಾದ ಅನುಶ್ರೀ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ವಿಶೇಷ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅತಿಥಿಯಾಗಿ ಆಗಮಿಸಿದ್ದರೆ, ಸುಮಾರು 40 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಪ್ರಸಾರ ಯಾವಾಗ.?

ಸ್ಯಾಂಡಲ್ ವುಡ್ ಸ್ಟಾರ್ ನಟ ನಟಿಯರು ಭರಪೂರ ಮನರಂಜನೆ ನೀಡಿದ 'ಗಂಧದಗುಡಿ ಸ್ಟಾರ್ ನೈಟ್' ಕಾರ್ಯಕ್ರಮ ಅಕ್ಟೋಬರ್ 14 ರಂದು ರಾತ್ರಿ 8 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

English summary
Watch special program 'Gandhadha Gudi star night' in Udaya TV on Oct 14th at 8pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X