»   » ರಿಯಲ್ ಸ್ಟಾರ್ ಉಪೇಂದ್ರ ಇವತ್ತಿಂದ್ಲೇ ಹಾಡುವುದನ್ನು ನಿಲ್ಲಿಸಬೇಕಂತೆ.!

ರಿಯಲ್ ಸ್ಟಾರ್ ಉಪೇಂದ್ರ ಇವತ್ತಿಂದ್ಲೇ ಹಾಡುವುದನ್ನು ನಿಲ್ಲಿಸಬೇಕಂತೆ.!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಬರೀ ಜನಪ್ರಿಯ ನಟ ಮಾತ್ರ ಅಲ್ಲ... ಉತ್ತಮ ನಿರ್ದೇಶಕ ಹೌದು... ಜನರ ಅಚ್ಚುಮೆಚ್ಚಿನ ಗಾಯಕ ಕೂಡ ಹೌದು...!

ಉಪ್ಪಿ ಕಂಠಸಿರಿಯಿಂದ ಬಂದ 'ಉಪ್ಪಿಗಿಂತ ರುಚಿ ಬೇರೆ ಇಲ್ಲ...', 'ಬಿಡಬ್ಯಾಡ.. ಬಿಡಬ್ಯಾಡ..', 'ದಿಲ್ ಇಲ್ದೇ ಲವ್ ಮಾಡಕ್ಕಾಗಲ್ವೇ..', 'ಚಿತ್ರಾನ್ನ..', 'ಎಲ್ರ ಕಾಲೆಳಿತದೆ ಕಾಲ...' ಸೇರಿದಂತೆ ಸಾಕಷ್ಟು ಹಾಡುಗಳು ಸೂಪರ್ ಹಿಟ್ ಆಗಿವೆ.

ಹೀಗಿದ್ದರೂ, ಇವತ್ತಿಂದಲೇ ಉಪೇಂದ್ರ ಹಾಡುವುದನ್ನು ನಿಲ್ಲಿಸಬೇಕಂತೆ. ಹಾಗಂತ ಆಜ್ಞೆ ಮಾಡಿರುವವರು ಗಾಯಕ ರಾಜೇಶ್ ಕೃಷ್ಣನ್. ಇದೇನಪ್ಪಾ ಅಂತ ಶಾಕ್ ಆಗುವ ಮುನ್ನ ಸಂಪೂರ್ಣ ವಿವರ ಓದಿರಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸ್ಪರ್ಶ' ರೇಖಾ, 'ಗಾಳಿಪಟ' ಭಾವನ ಜೊತೆ ಗಾಯಕ ರಾಜೇಶ್ ಕೃಷ್ಣನ್ ಅತಿಥಿಯಾಗಿ ಭಾಗವಹಿಸಿದ್ದರು.

ದಿಢೀರ್ ಬೆಂಕಿ ಸುತ್ತು...

ಸ್ವಲ್ಪ ಹೊತ್ತು ಹರಟೆ ಹೊಡೆದು... ಕೆಲ ಕಾಲ ಆಟ ಅಡಿದ ನಂತರ ನಿರೂಪಕ ಅಕುಲ್ ಬಾಲಾಜಿ 'ದಿಢೀರ್ ಬೆಂಕಿ' (Rapid Fire) ರೌಂಡ್ ಗೆ ಚಾಲನೆ ನೀಡಿದರು.

ಅಕುಲ್ ಕೇಳಿದ ಪ್ರಶ್ನೆ ಇದು....

''ಯಾವ ನಟ ಹಾಡುವುದನ್ನು ನಿಲ್ಲಿಸಬೇಕು ಇವತ್ತಿನಿಂದ....'' ಎಂದು ಗಾಯಕ ರಾಜೇಶ್ ಕೃಷ್ಣನ್ ಗೆ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಜೊತೆಗೆ ''ಪುನೀತ್, ಶರಣ್, ಸುದೀಪ್, ಉಪೇಂದ್ರ'' ಎಂಬ ನಾಲ್ಕು ಆಯ್ಕೆಗಳನ್ನು ಮುಂದಿಟ್ಟರು.

ರಾಜೇಶ್ ಕೃಷ್ಣನ್ ಕೊಟ್ಟ ಉತ್ತರ...

ನಾಲ್ಕು ಆಯ್ಕೆಗಳ ಪೈಕಿ 'ಉಪೇಂದ್ರ' ಹೆಸರನ್ನ ರಾಜೇಶ್ ಕೃಷ್ಣನ್ ಹೇಳಿದರು.

ಕಾರಣ..

Rapid Fire ರೌಂಡ್ ಆದ್ದರಿಂದ ಒಂದೇ ಪದದಲ್ಲಿ ಉತ್ತರ ಕೊಟ್ಟರೇ ಹೊರತು ಅದಕ್ಕೆ ಕಾರಣವನ್ನ ರಾಜೇಶ್ ಕೃಷ್ಣನ್ ನೀಡಲಿಲ್ಲ.

English summary
Upendra should stop singing from today says Singer Rajesh Krishnan in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada