»   » ರವಿಚಂದ್ರನ್ ಅವರನ್ನ 'ಏಕಾಂಗಿ' ಮಾಡಿದ್ದು ದರ್ಶನ್ ಅಂತೆ..!

ರವಿಚಂದ್ರನ್ ಅವರನ್ನ 'ಏಕಾಂಗಿ' ಮಾಡಿದ್ದು ದರ್ಶನ್ ಅಂತೆ..!

Posted By: Naveen
Subscribe to Filmibeat Kannada

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಮತ್ತು ವಿ.ಹರಿಕೃಷ್ಣ.... ಇವರಿಬ್ಬರ ನಡುವೆ ಅನೇಕ ಸಾಮ್ಯತೆಗಳಿವೆ. ಒಬ್ಬರು 'ವಿ'.ರವಿಚಂದ್ರನ್ ಆಗಿದ್ರೆ, ಇನ್ನೊಬ್ಬರು 'ವಿ'.ಹರಿಕೃಷ್ಣ. ಹಾಗೇ, ಇಬ್ಬರ ಡ್ರೆಸ್ಸಿಂಗ್ ಸ್ಟೈಲ್, ಹೇರ್ ಸ್ಟೈಲ್ ಸಹ ಸ್ವಲ್ಪ ಮ್ಯಾಚ್ ಆಗುತ್ತೆ.

ತಾವು ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡುವ ಮೊದಲು ಅನೇಕರ ಜೊತೆ ವಿ.ಹರಿಕೃಷ್ಣ ಕೆಲಸ ಮಾಡಿದ್ದರು. ಅದರಲ್ಲಿ ಪ್ರಮುಖವಾಗಿ 'ವಿ.ರವಿಚಂದ್ರನ್' ಅವರ ಜೊತೆ ಸಾಕಷ್ಟು ವರ್ಷ ವಿ.ಹರಿಕೃಷ್ಣ ಕೆಲಸ ಮಾಡಿದ್ದರು. ಇವರಿಬ್ಬರ ಒಡನಾಟ ಹೇಗಿತ್ತು ಅನ್ನೋದನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಎಳೆ ಎಳೆಯಾಗಿ ಬಿಚ್ಚಿಟ್ಟಿತು.

ರವಿಚಂದ್ರನ್ ತಾವೇ ಸ್ವತಃ 'ವೀಕೆಂಡ್ ವಿತ್ ರಮೇಶ್' ವೇದಿಕೆಗೆ ಬಂದು ವಿ.ಹರಿಕೃಷ್ಣ ಅವರ ಸಾಧನೆಯನ್ನ ಬಣ್ಣಿಸಿದರು. ಅಲ್ಲದೆ ತಮ್ಮನ್ನ 'ದರ್ಶನ್' 'ಏಕಾಂಗಿ'ಯಾಗಿ ಮಾಡಿದ್ರು ಅಂತ ಕ್ರೇಜಿ ಸ್ಟಾರ್ ಕಿಚಾಯಿಸಿದ್ರು. ಮುಂದೆ ಓದಿ....

ಹಂಸಲೇಖ ರವರಿಂದ ಪರಿಚಯ

''1992ರಲ್ಲಿ 'ರವಿ ಸರ್' ಅವರನ್ನ ನಾನು ಮೊದಲು ಭೇಟಿ ಮಾಡಿದ್ದು. ಹಂಸಲೇಖ ಸರ್ ಜೊತೆ ಕೆಲಸ ಮಾಡುತಿದ್ದ ಸಮಯದಲ್ಲಿ ಒಮ್ಮೆ ಅವರೇ ರವಿ ಸರ್ ಹತ್ತಿರ ಕರೆದುಕೊಂಡು ಹೋಗಿದ್ದರು. ಆಮೇಲೆ ರವಿ ಸರ್ ಅವರ 'ಹೃದಯದಿಂದ' ಎನ್ನುವ ಸಿನಿಮಾಗೆ ನಾನು ಕೆಲಸ ಮಾಡಬೇಕಾಗಿ ಬಂತು'' - ವಿ.ಹರಿಕೃಷ್ಣ, ಸಂಗೀತ ನಿರ್ದೇಶಕ

ರವಿ ಸರ್ ಒಂದು 'ಕಾಲೇಜು'

''ರವಿ ಸರ್ ಬಳಿ ಅನೇಕ ವಿಷಯಗಳನ್ನ ಕಲಿತುಕೊಂಡೆ. ಅಲ್ಲದೆ, ಒಂದು ಹಾಡನ್ನ ಹೇಗೆ ಸೃಷ್ಟಿ ಮಾಡಬೇಕು, ಹೇಗೆ ಅದನ್ನ ಅಲಂಕರಿಸಬೇಕು, ಹೇಗೆ ಅದನ್ನ ಸರಿಯಾಗಿ ಸಿನಿಮಾದಲ್ಲಿ ಕೂರಿಸಬೇಕು... ಹೀಗೆ ಎಲ್ಲ ವಿಚಾರಗಳ ಬಗ್ಗೆ ಚೆನ್ನಾಗಿ ತಿಳಿಯಿತು. ನಾನು ನೋಡಿರುವ ರವಿಚಂದ್ರನ್ ಒಂದು ಇಡೀ ಕಾಲೇಜು, ಅಲ್ಲಿ ಸಿನಿಮಾ ಬಗ್ಗೆ ಎಲ್ಲ ಪ್ರಶ್ನೆಗೆ ಉತ್ತರವಿದೆ'' - ವಿ.ಹರಿಕೃಷ್ಣ, ಸಂಗೀತ ನಿರ್ದೇಶಕ

'ಹಂಸಲೇಖ' ಬಳಿಕ 'ಹರಿಕೃಷ್ಣ' ಬಂದ..

''ಮೊದಲು ನಾನು ಶಂಕರ್ ಗಣೇಶನ್, ಹಂಸಲೇಖ ಜೊತೆ ಬಂದೆ. ಆಮೇಲೆ ಹಂಸಲೇಖ ಕಾರಣಾಂತರಗಳಿಂದ ಬೇರೆಯಾದಾಗ ನಾನು ಹಾಗೂ ವಿ.ಹರಿಕೃಷ್ಣ ಸೇರಿ ಕೆಲಸ ಶುರು ಮಾಡಿದ್ವಿ.ಇವತ್ತಿಗೂ ನನಗೆ ಸ್ವರ ಗೊತ್ತಿಲ್ಲ. ಅವನೂ ಕೀಬೋರ್ಡ್ ನುಡಿಸುತಿದ್ರೆ, ನನಗೆ ಬೇರೆ ಯಾರೂ ಬೇಕಾಗಿಲ್ಲ. ಅವನ ಹಾಗೆ ಕೀಬೋರ್ಡ್ ನುಡಿಸುವವರನ್ನ ನಾನು ನೋಡಿಲ್ಲ'' - ವಿ.ರವಿಚಂದ್ರನ್

ನನ್ನನ್ನ ಅರ್ಥ ಮಾಡಿಕೊಂಡಿದ್ದ

''ಏಕಾಂಗಿ' ಸಿನಿಮಾಗೆ ಅವನು 30 ದಿನ ರೀ-ರೆಕಾರ್ಡಿಂಗ್ ಮಾಡಿದ್ದ. ನಾನು ನೋಡಿ ಇದು ಯಾಕೋ ಸರಿ ಎನಿಸುತ್ತಿಲ್ಲ. ಬೇರೆ ತರಹ ಮಾಡಬೇಕು ಎಂದೆ. ಆಗ ಸ್ವಲ್ಪವೂ ಬೇಜಾರಾಗದೆ, ಮತ್ತೆ ಶುರು ಮಾಡಿದ. ಇವತ್ತಿಗೂ 'ಏಕಾಂಗಿ' ಸಿನಿಮಾ ನೋಡಿದರೆ ಅಲ್ಲಿ ಅವನ ರೀ ರೆಕಾರ್ಡಿಂಗ್ ಮೂಲಕ ಕಥೆ ಹೇಳಿದ್ದೇವೆ'' - ವಿ.ರವಿಚಂದ್ರನ್

ಅದೇ 'ಏಕಾಂಗಿ' ಸೋತಾಗ!

''ಏಕಾಂಗಿ' ಸಿನಿಮಾ ಚೆನ್ನಾಗಿಲ್ಲ ಅಂತ ಸುದ್ದಿ ಬಂತು. ಆಗ ಇವನು ಮನೆಯಲ್ಲಿ ಅಳುತ್ತಿದ್ದ. ನಾನು ಸೋಲನ್ನ ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ಆಮೇಲೆ 6 ದಿನಗಳಲ್ಲಿ ಮತ್ತೆ ಹೊಸ ವರ್ಷನ್ ರಿಲೀಸ್ ಮಾಡಬೇಕು ಅಂತ ನಿರ್ಧಾರ ಮಾಡಿದ್ವಿ. ಆಗ ಹಗಲು ರಾತ್ರಿ ಸ್ವಲ್ಪವೂ ನಿದ್ದೆ ಇಲ್ಲದೆ ನನ್ನ ಜೊತೆ ಕೆಲಸ ಮಾಡಿದ್ದಾನೆ'' - ವಿ.ರವಿಚಂದ್ರನ್.

ನಿಜವಾಗಿಯೂ 'ಏಕಾಂಗಿ' ಮಾಡಿದ

''ನನ್ ಜೊತೆ ತುಂಬ ವರ್ಷ ಇದ್ದ, ಆಮೇಲೆ ದರ್ಶನ್ ಗೆ ಇವನ ಮೇಲೆ ಕಣ್ಣು ಬಿದ್ದು, ಕರೆದುಕೊಂಡು ಹೋದ. ಇವನು ನನ್ನನ್ನ ನಿಜವಾಗಿಯೂ 'ಏಕಾಂಗಿ' ಮಾಡಿಬಿಟ್ಟ'' ಅಂತ ತಮ್ಮ ರೆಗ್ಯೂಲರ್ ಸ್ಟೈಲ್ ನಲ್ಲಿ ವಿ.ರವಿಚಂದ್ರನ್ ತಮಾಷೆ ಮಾಡಿದರು.

ತುಂಬ ಖುಷಿ ಆಯ್ತು

''ಈಶ್ವರಿ ಸಂಸ್ಥೆಯಿಂದ ಒಬ್ಬ ರವಿಚಂದ್ರನ್ ಹೇಗೆ ಬಂದ್ನೋ ಅದೇ ತರಹ ಒಬ್ಬ ಹರಿಕೃಷ್ಣ ಬಂದ. ಇವತ್ತು ಅವನ ಸಕ್ಸಸ್ ಹೊರಗಡೆ ಜನಕ್ಕೆ ಕಾಣುತ್ತಿದೆ ಅಂದ್ರೆ ಅದನ್ನ ನನ್ನ ಸಕ್ಸಸ್ ತರಹ ಖುಷಿ ಪಡುತ್ತೇನೆ'' - ವಿ.ರವಿಚಂದ್ರನ್

English summary
V.Ravichandran spoke about Kannada Music Director V.Harikrishna in Weekend with Ramesh-3

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X